ಭಾರತಕ್ಕೆ ಭಾನುವಾರ ಮೂರು ಬೆಳ್ಳಿ: ದ್ಯುತಿಗೆಡದ ಚಾಂದ್

X
TV5 Kannada26 Aug 2018 3:47 PM GMT
ಆರಂಭದಿಂದ ಅಂತ್ಯದವರೆಗೂ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಏಷ್ಯನ್ ಗೇಮ್ಸ್ನ ವನಿತೆಯರ 100ಮೀ. ಓಟದ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ದ್ಯುತಿ ಚಾಂದ್ ಕೂದಲೆಳೆ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರೂ ಬೆಳ್ಳಿ ಪದಕ ಗೆದ್ದು ಗಮನ ಸೆಳೆದರು.
ಏಷ್ಯನ್ ಗೇಮ್ಸ್ ನ 8ನೇ ದಿನವಾದ ದ್ಯುತಿ ಚಾಂದ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ವಿಭಾಗದಲ್ಲಿ ಭಾರತಕ್ಕೆ 20 ವರ್ಷಗಳ ಪದಕ ತಂದುಕೊಟ್ಟ ಸಾಧನೆ ಮಾಡಿದರು.
ದ್ಯುತ್ ಚಾಂದ್ ತಮ್ಮದೇ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆ 11.29ಸೆ. ಮುರಿಯಲು ವಿಫಲರಾದರೂ 11.32 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಗೆದ್ದುಕೊಂಡರು.
ಬಹರೇನ್ನ ಒಡಿಯಾಂಗ್ ಎಡಿಡಾಂಗ್ (11.30ಸೆ.) ಸ್ವರ್ಣ ಪದಕ ಗೆದ್ದರೆ, ಚೀನಾದ ವೀ ಯಾಂಗ್ಲಿ (11.33ಸೆ.) ಕಂಚಿನ ಪದಕಕ್ಕೆ ತೃಪ್ತರಾದರು.
ಟೂರ್ನಿಯ 8ನೇ ದಿನ ಭಾರತ ತಲಾ 3 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆದ್ದುಕೊಂಡಿತು. ಇದರೊಂದಿಗೆ ಭಾರತ 7 ಚಿನ್ನ, 10 ಬೆಳ್ಳಿ ಹಾಗೂ 19 ಕಂಚು ಸೇರಿದಂತೆ ಒಟ್ಟಾರೆ 36 ಪದಕದೊಂದಿಗೆ 9ನೇ ಸ್ಥಾನ ಪಡೆಯಿತು.
Next Story