Top

ಇಂದಿನಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆ

ಇಂದಿನಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆ
X

ರಾಯಚೂರು : ಮಂತ್ರಾಲಯದ ಶ್ರೀ ಗುರು ರಾಘವೇದ್ರ ಸ್ವಾಮಿಗಳ ಏಳು ದಿನಗಳ ನಡೆಯುವ 347 ನೇ ಆರಾಧನಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆಯಲಿದೆ.

ಇಂದು ಸಂಜೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಗೋ ಪೂಜೆ ಹಾಗೂ ಬೃಂದವನಕ್ಕೆ ವಿಶೇಷ ಪೂಜೆ ಸಲ್ಲಿಸಿ ದ್ವಜಾರೋಹಣ ಮಾಡುವ ಮೂಲಕ ಆರಾಧನೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಇಂದಿನಿಂದ 31ರ ವರಗೆ ರಾಯರ ಆರಾಧನೆ ನಡೆಯಲಿದ್ದು, 27 ರಂದು ಪೂರ್ವಾರಾಧನೆ, 28ರಂದು ಮಧ್ಯಾರಾಧನೆ, 29ರಂದು ಉತ್ತರಾರಾಧನೆ ನಡೆಯಲಿದೆ.

ಈಗಾಗಲೇ ಕಾರ್ಯಕ್ರಮಕ್ಕೆ ಮಠ ಸಂಪೂರ್ಣ ಸಿದ್ದತೆಗಳನ್ನು ಮಾಡಿಕೊಂಡಿದ್ದು ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸಿದ್ದತೆ ಮಾಡಿಕೊಂಡಿದೆ.

ಈ ಬಾರಿಯ ಆರಾಧನೆಗೆ ಶ್ರೀ ಮಠ ಮುಂಭಾಗವನ್ನು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುವಂತೆ ಮಾಡಿದ್ದು ಲೊಕಾರ್ಪಣೆಗೆ ಸೊದ್ದತೆ ಮಾಡಿಕೊಂಡಿದೆ.

ಜೊತೆಗೆ ಈ ಬಾರಿಯ ಮತ್ತೊಂದು ವಿಶೇಷ ಅಂದರೆ ಮಠದ ಮುಖ್ಯ ದ್ವಾರವನ್ನು ೩೫೦ ಕೇ.ಜಿ ಬೆಳ್ಳಿಯಿಂದ ತಯಾರಿಸಲಾದ ದ್ವಾರವನ್ನ ಕೂಡಾ ಲೋಕಾರ್ಪಣೆ ಮಾಡಲಿದ್ದು.

ಇನ್ನು ಈ ಬಾರಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಭಕ್ತರ ಪುಣ್ಯ ಸ್ನಾನಕ್ಕೆ ಅಡಿ ಇಲ್ಲ ಅಂತಾ ಸುಬುಧೇಂದ್ರ ತೀರ್ಥ ಶ್ರೀಗಳು ತಿಳಿಸಿದ್ದಾರೆ.

Next Story

RELATED STORIES