Top

ಮದುವೆ ಬಗ್ಗೆ ಭವಿಷ್ಯ ನುಡಿದ ಸುರೇಶ್ ಅಂಗಡಿ..!

ಮದುವೆ ಬಗ್ಗೆ ಭವಿಷ್ಯ ನುಡಿದ ಸುರೇಶ್ ಅಂಗಡಿ..!
X

ಬೆಳಗಾವಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತೀನಿ ಎಂದು ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ಸಂಸದ ಸುರೇಶ್ ಅಂಗಡಿ ವ್ಯಂಗ್ಯವಾಗಿ ಭವಿಷ್ಯ ನುಡಿದಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಆದಷ್ಟು ಬೇಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಆಗುತ್ತೆ ಎಂದಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ಈ ಸಮ್ಮಿಶ್ರ ಸರ್ಕಾರ ಒತ್ತಾಯಪೂರ್ವಕವಾದ ಮ್ಯಾರೇಜ್ ಆಗಿದೆ. ಈ ಮ್ಯಾರೇಜ್ ಏನಿ ಟೈಮ್ ಡಿವೋರ್ಸ್, ಇದು ಡಿವೋರ್ಸ್ ಮೂಮೆಂಟ್ ಇದ್ದ ಹಾಗೆ ಎಂದಿದ್ದು, ಮೈತ್ರಿ ಸರ್ಕಾರವೆಂಬ ಮದುವೆ ಯಾವ ಸಮಯದಲ್ಲಾದರೂ ಮುರಿದು ಬೀಳಲಿದೆ ಎಂದಿದ್ದಾರೆ. ಅಲ್ಲದೇ ಈಗಾಗಲೇ ಹಗ್ಗ ಜಗ್ಗಾಟ ಆರಂಭವಾಗಿದ್ದು, ದೇವೇಗೌಡರಿಗೆ ಮೋಸ ಮಾಡಿದ ಕಾಂಗ್ರೆಸ್, ಕುಮಾರಸ್ವಾಮಿಗೆ ಮೋಸ ಮಾಡಲ್ವೇ ಎಂದು ಅಂಗಡಿ ಪ್ರಶ್ನಿಸಿದ್ದಾರೆ.

ಈಗ ಸಿದ್ದರಾಮಯ್ಯ ಅವರು ಚಾಪೆ ಜಗ್ಗುವ ಕೆಲಸ ಮಾಡುತ್ತಿದ್ದಾರೆ. ಮುಂದಿನ 15 ದಿನಗಳಲ್ಲಿ ಸರ್ಕಾರ ಬೀಳುತ್ತದೆ ಎಂದು ಸುರೇಶ್ ಅಂಗಡಿ ಭವಿಷ್ಯ ನುಡಿದಿದ್ದಾರೆ.

Next Story

RELATED STORIES