Top

'ದೇವೇಗೌಡರ ಮಕ್ಕಳು ಸಂಸ್ಕಾರ ಇಲ್ಲದವರು'

ದೇವೇಗೌಡರ ಮಕ್ಕಳು ಸಂಸ್ಕಾರ ಇಲ್ಲದವರು
X

ಕೊಪ್ಪಳ: ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳು ಸಂಸ್ಕಾರ ಇಲ್ಲದವರು, ಮಂತ್ರಿಗಳಾಗಿ ಈ ರೀತಿಯ ವರ್ತನೆ ನೋವು ತರುವಂಥದ್ದು ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ರೇವಣ್ಣ ಬಿಸ್ಕೇಟ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ಮಾತನಾಡಿದ ಶ್ರೀರಾಮುಲು, ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಕುಮಾರಸ್ವಾಮಿ ವಿರುದ್ಧವೂ ಗುಡುಗಿದ ಅವರು, ಮುಖ್ಯಮಂತ್ರಿ ಕೊಡಗಿಗೆ ಹೋಗಿದ್ದೇ ಲೇಟಾಗಿ. ಅವರೊಬ್ಬ ಲೇಟ್ ಕಮ್ಮರ್ ಎಂದಿದ್ದಾರೆ.

ಇನ್ನು ಹರಿಪ್ರಸಾದ್ ವಿರುದ್ಧ ಕಿಡಕಾರಿದ ಶ್ರೀರಾಮುಲು, ಬಿಜೆಪಿ ಪಕ್ಷ ಹಾಗೂ ಪ್ರಹ್ಲಾದ್ ಜೋಷಿ ಬಗ್ಗೆ ಹುಚ್ಚಾಸ್ಪತ್ರೆ ಎಂದು ಮಾತನಾಡುವ ಬಿ.ಕೆ.ಹರಿಪ್ರಸಾದ್‌ಗೆ ಪ್ರಾಕ್ಟಿಕಲ್ ನಾಲೆಡ್ಜ್ ಇಲ್ಲ. ಅವರೆಲ್ಲಾ ರಾಜ್ಯಸಭಾ ಸದಸ್ಯರಾದ ತಕ್ಷಣ ಬೆಂಗಳೂರಿನಿಂದ ದೆಹಲಿಗೆ ಹೋಗ್ತಾರೆ. ಬಿ.ಕೆ. ಹರಿಪ್ರಸಾದ್ ನಾಲಿಗೆ ಬಿಗಿ ಹಿಡಿದು ಮಾತನಾಡಿ, ನಾಲಿಗೆ ಹರಿಬಿಟ್ಟರೆ ನಾವೂ ಮಾತನಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಅವರು ನಮ್ಮ ಪ್ರಧಾನಮಂತ್ರಿ. ಚಿತಾಭಸ್ಮವನ್ನು ಎಲ್ಲ ನದಿಗಳಲ್ಲಿ ವಿಸರ್ಜನೆ ಮಾಡುವುದು ನಮ್ಮ ಸಂಸ್ಕಾರ. ಅದರ ಬಗ್ಗೆ ಅರಿವಿಲ್ಲದೇ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

Next Story

RELATED STORIES