Top

ಲಕ್ಷ್ಮೀ ಕೃಪೆಯಿಂದ ಶುರು ‘ಕಿರಾತಕ’ನ ಜರ್ನಿ..!

ಲಕ್ಷ್ಮೀ ಕೃಪೆಯಿಂದ ಶುರು ‘ಕಿರಾತಕ’ನ ಜರ್ನಿ..!
X

ಬ್ಲಾಕ್ ಬಸ್ಟರ್ ಕಿರಾತಕ ಸೀಕ್ವೆಲ್​ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸ್ತಿದ್ದಾರೆ ಅನ್ನೋ ಎಕ್ಸ್​ಕ್ಲೂಸಿವ್ ಖಬರ್​ನ ನಾವು ಇದೇ ಮೂವಿಮನೆಯಲ್ಲಿ ನಿಮಗೆ ಹೇಳಿದ್ವಿ. ಇದೀಗ ಯಶ್ ಕರಿಯರ್​ನ ಆ ಪ್ರತಿಷ್ಠಿತ ಸಿನಿಮಾ ಕೊನೆಗೂ ಸೆಟ್ಟೇರಿದೆ. ಅಷ್ಟೇ ಅಲ್ಲ, ಕಿರಾತಕನಿಗಾಗಿ ರಾಜಾಹುಲಿ ಗಡ್ಡ ಮತ್ತು ಉದ್ದ ಕೂದಲಿಗೆ ಕತ್ತರಿ ಕೂಡ ಬಿದ್ದಿದೆ.

ಯೆಸ್... ದ ವೆಯ್ಟ್ ಈಸ್ ಓವರ್. ಎರಡು ವರ್ಷದಿಂದ ಗಡ್ಡದಾರಿ ರಾಕಿಂಗ್ ಸ್ಟಾರ್ ಯಶ್​ನ ಗಡ್ಡವಿಲ್ಲದೆ ನೋಡೋಕೆ ಕಾಯ್ತಿದ್ದ ಅವ್ರ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗೆ ಕೊನೆಗೂ ಯಶ್ ಸ್ವೀಟ್ ನ್ಯೂಸ್ ಕೊಟ್ಟೇ ಬಿಟ್ಟರು. ಹೊಸ ಸಿನಿಮಾಗಾಗಿ ಯಶ್ ಗಡ್ಡಕ್ಕೆ ಕೊನೆಗೂ ಬಿತ್ತು ಕತ್ತರಿ.

ರಾಕಿಂಗ್ ಸ್ಟಾರ್ ಯಶ್ ಗಡ್ಡಕ್ಕೆ ಬಿತ್ತು ಕತ್ತರಿ

ನಯಾ ಗೆಟಪ್​ನಲ್ಲಿ ಯಶ್ ಫುಲ್ ಮಿಂಚಿಂಗ್

ಕೆಜಿಎಫ್ ಸಿನಿಮಾಗೆ ಕಮಿಟ್ ಆಗಿದ್ದೇ ತಡ, ಯಶ್ ಆ ಪಾತ್ರದೊಳಗೆ ಪರಕಾಯ ಪ್ರವೇಷ ಮಾಡಿಬಿಟ್ರು. ಹಗಲಿರುಳಿ ಸಿನಿಮಾಗಾಗಿಯೇ ತನು ಮನ ದನ ಅರ್ಪಿಸಿದ ಯಶ್, ಅದು ಮುಗಿಯೋವರೆಗೂ ತಮ್ಮ ಗೆಟಪ್ ಬದಲಿಸಲಿಲ್ಲ. ಹಂತ ಹಂತವಾಗಿ ಯಶ್ ಗಡ್ಡ ಹಾಗೂ ಉದ್ದ ಕೂದಲು ಪಾತ್ರಕ್ಕೆ ಡಿಮ್ಯಾಂಡ್ ಮಾಡಿದಂತೆ ರಿಯಲ್ ಆಗಿ ಬೆಳೆಸ್ತಾ ಹೋದ್ರು. ಟೆಕ್ನಾಲಜಿ ಮುಂದುವರೆದ ಇಂದಿನ ಕಾಲದಲ್ಲೂ ಯಶ್, ವಿಗ್ ಅಥ್ವಾ ಟೋಕನ್ ಕೂದಲ ಮೊರೆ ಹೋಗದೆ, ನೈಜ ಫೀಲ್ ಕೊಡೋಕ್ಕೆ ತಾವೇ ತಮ್ಮ ಎರಡು ವರ್ಷವನ್ನ ಮುಡಿಪಾಗಿಟ್ಟರು.

ಇತ್ತೀಚೆಗೆ ನಡೆದ ಕೆಜಿಎಫ್ ಕ್ಲೈಮ್ಯಾಕ್ಸ್ ಸ್ಪೆಷಲ್ ಸಾಂಗ್​ನಲ್ಲೂ ಸಹ ಯಶ್ ಗಡ್ಡದಾರಿಯಾಗಿಯೇ ಮಿಲ್ಕಿ ಬ್ಯೂಟಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ರು. ಆದ್ರೀಗ ಕಿರಾತಕ ಸೀಕ್ವೆಲ್ ಸಿನಿಮಾಗಾಗಿ ಯಶ್ ಲುಕ್ಸ್ ಬದಲಾಗಿದೆ. ನಯಾ ಲುಕ್​ನಲ್ಲಿ ಸಖತ್ ಮಿಂಚ್ತಾ ಇದ್ದಾರೆ ರಾಕಿಂಗ್ ಸ್ಟಾರ್.

ಮುಂಜಾನೆ ಕಿರಾತಕನಿಗೆ ಬ್ರಾಹ್ಮೀ ಮುಹೂರ್ತ..!

ಯೆಸ್... ವರಮಹಾಲಕ್ಷ್ಮೀ ಹಬ್ಬದ ವಿಶೇಷ ಕಿರಾತಕ ಸೀಕ್ವೆಲ್ ಸೆಟ್ಟೇರಿದೆ. ಮೋದಿ ಆಸ್ಪತ್ರೆ ಬ್ರಿಡ್ಜ್ ಬಳಿ ಇರೋ ವಿನಾಯಕ ಸನ್ನಿಧಿಯಲ್ಲಿ ಮುಂಜಾನೆ 4 ಗಂಟೆಯ ಬ್ರಾಹ್ಮೀ ಮುಹೂರ್ತದಲ್ಲಿ ಸಿನಿಮಾ ಮುಹೂರ್ತ ಕಂಡಿದೆ.

ಜಯಣ್ಣ ಕಂಬೈನ್ಸ್ ಬ್ಯಾನರ್​ನಡಿ ನಿರ್ಮಾಣ

ಸುಧಾಕರ್ ಸಿನಿಮಾಟೋಗ್ರಫಿ, ಪ್ರಕಾಶ್ ಸಂಕಲನ..!!

ಸಿನಿಮಾಗೆ ‘ಮೈ ನೇಮ್ ಈಸ್ ಕಿರಾತಕ’ ಅನ್ನೋ ಟೈಟಲ್ ಇಟ್ಟಿರೋ ಚಿತ್ರತಂಡ, ಸೆಪ್ಟೆಂಬರ್ 3ರಿಂದ ಶೂಟಿಂಗ್ ಶುರು ಮಾಡೋ ಧಾವಂತದಲ್ಲಿದೆ. ದಿಲ್ ವಾಲಾ, ರಾಂಬೋ-2 ಸಿನಿಮಾಗಳ ಖ್ಯಾತಿಯ ಸ್ಟಾರ್ ಡೈರೆಕ್ಟರ್ ಅನಿಲ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದು, ಜಯಣ್ಣ ಕಂಬೈನ್ಸ್ ಬ್ಯಾನರ್​ನಡಿ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡ್ತಿದ್ದಾರೆ.

ಇನ್ನು ಮುಕುಂದ ಮುರಾರಿ, ಚೌಕ, ರಾಂಬೋ-2 ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಿಗೆ ಕ್ಯಾಮೆರಾ ಕೈಚಳಕ ತೋರಿಸಿದ್ದ ಸುಧಾಕರ್ ಎಸ್ ಈ ಸಿನಿಮಾಗೆ ಸಿನಿಮಾಟೋಗ್ರಫಿ ಮಾಡ್ತಿರೋದು ವಿಶೇಷ. ಕೆಎಂ ಪ್ರಕಾಶ್ ಸಂಕಲನ ಚಿತ್ರಕ್ಕಿರಲಿದ್ದು, ಸದ್ಯದಲ್ಲೇ ಉಳಿದ ಆರ್ಟಿಸ್ಟ್​ಗಳ ಲಿಸ್ಟ್ ಅನೌನ್ಸ್ ಮಾಡಲಿದೆ ಟೀಂ ಮೈ ನೇಮ್ ಈಸ್ ಕಿರಾತಕ.

https://www.youtube.com/watch?v=58F0XIhQLcg&feature=youtu.be

ಅದೇನೇ ಇರಲಿ, ಸದ್ಯ ಯಶ್​ರ ಈ ನ್ಯೂ ಗೆಟಪ್ ಬಗ್ಗೆ ಮಿಸಸ್ ರಾಮಾಚಾರಿ ರಾಧಿಕಾ ಪಂಡಿತ್ ಕೂಡ ಮಾತನಾಡಿದ್ದು, ಇದು ಸದ್ಯ ಗಾಂಧಿನಗರದ ಟಾಕ್ ಆಫ್ ದ ಟೌನ್ ಆಗಿದೆ.

ಇನ್ನು ಲಕ್ಷ್ಮೀ ಹಬ್ಬದಂದೇ ಸಿನಿಮಾ ಶುರು ಮಾಡಿರೋ ಚಿತ್ರತಂಡ, ಯಶ್​ರ ಈ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರವನ್ನ ಬೇರೆಯದ್ದೇ ರೀತಿಯಲ್ಲಿ ಮಾಡೋ ಪ್ಲಾನ್​ನಲ್ಲಿದೆ. ಯಶ್​ರ ಮಾಸ್ ಇಮೇಜ್​ನ ಬ್ರೇಕ್ ಮಾಡಿ ಹಿಂದಿನ ಕಿರಾತಕ ಶೈಲಿಯ ಫ್ಯಾಮಿಲಿ ಫನ್ ಎಂಟ್ರಟೈನರ್ ಚಿತ್ರವನ್ನ ಮೀರಿಸೋ ರೇಂಜ್​ಗೆ ಕಟ್ಟಿಕೊಡೋ ಧಾವಂತದಲ್ಲಿದೆ.

ಸೆಪ್ಟೆಂಬರ್ 3ರಿಂದ ಮೈ ನೇಮ್ ಈಸ್ ಕಿರಾತಕ ಶುರು

ಕಿರಾತಕನ ಸೊಬಗು ಹೆಚ್ಚಿಸಲಿರೋ ಮಂಡ್ಯದ ಹಳ್ಳಿ ಸೊಗಡು

ಮೊದಲ ಹಂತದ ಚಿತ್ರೀಕರಣ ಸೆಪ್ಟೆಂಬರ್ ಮೂರರಿಂದ ಶುರುವಾಗಲಿದ್ದು, ಮಂಡ್ಯ ಸುತ್ತ ಮುತ್ತಲ ಹಳ್ಳಿ ಸೊಗಡಿನಲ್ಲಿ ಚಿತ್ರ ತಯಾರಾಗಲಿದೆ. ಕಿರಾತಕ ಚಿತ್ರದಂತೆ ಯಶ್ ಸ್ಟೈಲು ಮ್ಯಾನರಿಸಂಗೆ ಹಳ್ಳಿ ಸೊಗಡು ಚಿತ್ರದ ಸೊಬಗು ಹೆಚ್ಚಿಸಲಿದೆ.

ಇದಾದ ಬಳಿಕ ದುಬೈನಲ್ಲೂ ಒಂದಷ್ಟು ಪೋರ್ಷನ್ಸ್ ಚಿತ್ರೀಕರಣ ನಡೆಯಲಿದ್ದು, ಹಳ್ಳಿ ಸೊಗಡು- ಫಾರಿನ್ ಮೆರುಗು ಚಿತ್ರದ ಮೈಲೇಜ್ ಹೆಚ್ಚಿಸಲಿವೆ. ಅದೇನೇ ಇರಲಿ, ಟೀಂ ಮೈ ನೇಮ್ ಈಸ್ ಕಿರಾತಕಗೆ ನಮ್ ಕಡೆಯಿಂದ ಶುಭ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5

Next Story

RELATED STORIES