Top

ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಗ್ವಾದ.!

ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಗ್ವಾದ.!
X

ತುಮಕೂರು : ಜಿಲ್ಲೆಯ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರುಗಳ ವಾಗ್ಯುದ್ಧ ಜೋರಾಗಿದೆ. ಮಾಜಿ ಶಾಸಕ ಸುರೇಶ್‍ಗೌಡ ಹಾಲಿ ಶಾಸಕ ಗೌರಿಶಂಕರ್ ಮೇಲೆ ವರ್ಗಾವಣೆ ಹಾಗೂ ಕಾಮಗಾರಿ ಹೆಸರಲ್ಲಿ 8 ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಟಾಂಗ್ ನೀಡಿರುವ ಶಾಸಕ ಗೌರಿಶಂಕರ್ ಆರೋಪ ಸಾಬೀತಾದ್ರೆ ನಾನು ನೇಣುಗೇರ್ತಿನಿ ಇಲ್ಲ ಅಂದ್ರೆ ನೀವು ನೇಣಿಗೇರ್ತಿರಾ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

ವಿಧಾನಸಭಾ ಚುನಾವಣೆ ಮುಗಿದು ನಾಲ್ಕು ತಿಂಗಳಷ್ಟೇ ಕಳೆದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರ ಒಂದಲ್ಲಾ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿರುತ್ತೆ. ಹಾಲಿ ಜೆಡಿಎಸ್ ಶಾಸಕ ಗೌರಿಶಂಕರ್ ಹಾಗೂ ಬಿಜೆಪಿ ಮಾಜಿ ಶಾಸಕ ಸುರೇಶ್‍ಗೌಡ ಪರಸ್ಪರ ಹಾವೂ ಮಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಶಾಸಕನಾದ ಮೂರೇ ತಿಂಗಳಲ್ಲಿ ಬರೋಬ್ಬರಿ 8 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹಾಲಿ ಶಾಸಕ ಗೌರಿಶಂಕರ್ ಮೇಲೆ ಮಾಜಿ ಶಾಸಕ ಸುರೇಶ್‍ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

https://www.youtube.com/watch?v=BeNBBRnj1NU&index=25&list=PLmylWU4EY3N-9JorXAx3v9D1zNG2M1FMN

ಅಧಿಕಾರಿಗಳ ವರ್ಗಾವಣೆ ಹಾಗೂ ಕಾಮಗಾರಿ ಹೆಸರಲ್ಲಿ ಈ ಹಣ ಲೂಟಿ ಮಾಡಿದ್ದು ಅವರ ಆಪ್ತ ನಗುರಗನಹಳ್ಳಿ ವಿಜಯಕುಮಾರ್ ಡೈರಿಯಲ್ಲಿ ಇದರ ಉಲ್ಲೇಖವಿದೆ. ಇದನ್ನ ಸಿಬಿಐ ತನಿಖೆಗೆ ವಹಿಸಬೇಕು ಒತ್ತಾಯಿಸಿದ್ದಾರೆ. ಪಿಎಸ್‍ಐ ವರ್ಗಾವಣೆಗೆ 15 ಲಕ್ಷ, ಸಿಪಿಐಗೆ 20 ಲಕ್ಷ ಫಿಕ್ಸ್ ಮಾಡಿ ವರ್ಗಾವಣೆ ದಂಧೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇನ್ನೂ ಈ ಆರೋಪದ ಸುದ್ದಿ ಹೊರಬೀಳುತ್ತಿದ್ದಂತೆ ಶಾಸಕ ಡಿ.ಸಿ.ಗೌರಿಶಂಕರ್ ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಸುರೇಶ್‍ಗೌಡ ಮಾಡಿರುವ ಆರೋಪ ಸಾಬೀತಾದರೆ ನಾನು ನೇಣಿಗೇರ್ತಿನಿ. ಆರೋಪ ಸುಳ್ಳಾದರೆ ಆತ ನೇಣಿಗೇರಲಿ ಎಂದು ಸವಾಲ್ ಹಾಕಿದ್ದಾರೆ. ಅಲ್ಲದೇ ಅಪಪ್ರಚಾರದ ವಿರುದ್ಧ 5 ಕೋಟಿ ರುಪಾಯಿ ಮಾನನಷ್ಟ ಮೊಕದ್ದೊಮ್ಮೆ ದಾಖಲಿಸುವಾಗಿ ಎಚ್ಚರಿಸಿದ್ದಾರೆ. ಶಾಸಕನಾಗಿ ಮೂರು ತಿಂಗಳಾಗಿದೆ. ಕೇವಲ 2 ಕೋಟಿಯಷ್ಟೇ ಅನುದಾನ ಬಿಡುಗಡೆಯಾಗಿದ್ದು 8 ಕೋಟಿ ಭ್ರಷ್ಟಾಚಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕಳೆದ 10 ವರ್ಷಗಳಿಂದ ಸುರೇಶ್‍ಗೌಡ ಗ್ರಾಮಾಂತರ ಕ್ಷೇತ್ರದಲ್ಲಿ ಅಕ್ರಮ ಮರಳುದಂತೆ, ಮದ್ಯಮಾರಾಟ ಜೂಜು, ಮಟ್ಕ ಕಲ್ಲುಗಣಿಗಾರಿಕೆಗಳಿಗೆ ಕುಮ್ಮಕ್ಕು ನೀಡ್ತಾ ಇದ್ರು. ಇದರಿಂದ ಇವರ ಪಟಾಲಂಗಳು ಹೊಟ್ಟೆತುಂಬಿಸಿಕೊಳ್ತಿದ್ರು. ಈಗ ಅವಕ್ಕೆಲ್ಲಾ ಬ್ರೇಕ್ ಹಾಕಿದ್ದೇನೆ. ಹೀಗಾಗಿ ಹತಾಶ ಮನೋಭಾವದಿಂದ ಸುಖಾಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಪ್ರತಿ ಆರೋಪ ಮಾಡಿದ್ದಾರೆ.

ಒಟ್ಟಾರೆಯಾಗಿ ಇಬ್ಬರೂ ನಾಯಕರ ಮಾತಿನ ಸಮರ ರಾಜಕೀಯ ಪಾಳೆಯದಲ್ಲಿ ತೀವ್ರ ಸಂಚಲನ ಸೃಷ್ಠಿಸಿದೆ. ಮಾಜಿ, ಹಾಲಿ ಶಾಸಕರ ಜಗಳ ಈಗ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದ್ದು, ಪ್ರಕರಣ ಯಾವ ಹಂತ ತಲುಪುತ್ತೋ ಅನ್ನೋದನ್ನು ಕಾದು ನೋಡಬೇಕಿದೆ.

ವರದಿ : ಟಿ.ಯೋಗೀಶ್, ಟಿವಿ5, ತುಮಕೂರು

Next Story

RELATED STORIES