ಮಕ್ಕಳೊಂದಿಗೆ ಪಂಚೆಕಟ್ಟಿ ಕಬ್ಬಡಿ ಆಡಿದ ಎಂಎಲ್ಎ.!!

ಕೊಪ್ಪಳ : ಎಂಎಲ್ಎ ಬಾಲ್ಯದ ದಿನಗಳು ಮತ್ತೆ ನೆನಪಾಗಿದ್ದವು. ಹೀಗಾಗಿ ಕಬ್ಬಡ್ಡಿ ಪಂದ್ಯವಳಿ ಉದ್ಘಾಟನೆಗೆ ಬಂದ ಸಾಹೇಬ್ರು, ಪಂಚೆಕಟ್ಟಿ ಕಬ್ಬಡಿ ಆಟಕ್ಕೂ ಇಳಿದು ಬಿಟ್ಟರು.
ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು, ಕಾರಟಗಿ ತಾಲೂಕಿನ ಯರಡೋಣ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಪ್ರೌಢಶಾಲಾ ವಲಯ ಮಟ್ಟದ ಕಬ್ಬಡಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು.
ಈ ಕ್ರೀಡಾಕೂಟಕ್ಕೆ ಆಗಮಿಸಿದ ಕೊಪ್ಪಳದ ಕನಕಗಿರಿ ಶಾಸಕ ದಡೆಸೂಗೂರು ಬಸವರಾಜ್, ವಿದ್ಯಾರ್ಥಿಗಳ ಕಬ್ಬಡಿ ಆಟ ನೋಡಿ, ತಾನೂ ಆಟವಾಡಬೇಕೆಂಬ ಬಯಕೆಯಿಂದ ಕಬ್ಬಡಿ ಆಟಕ್ಕೆ ಇಳಿದೇ ಬಿಟ್ಟರು.
ಪ್ರೌಢಶಾಲಾ ವಲಯಮಕ್ಕಳ ಕ್ರೀಡಾಕೂಟದಲ್ಲಿ ಪಂಚೆ ಕಟ್ಟಿ, ತೊಡೆತಟ್ಟಿ ವಿದ್ಯಾರ್ಥಿಗಳ ಜೊತೆಗೆ ಕಬ್ಬಡಿ ಆಟಕ್ಕೆ ಇಳಿದ ಶಾಸಕ ದಡೆಸೂಗೂರು ಬಸವರಾಜ್, ಒಂದೇ ರೌಂಡ್ಗೆ ವಿದ್ಯಾರ್ಥಿಗಳ ಚೇಸ್ಗೆ ರೈಡ್ ಆಗಿಬಿಟ್ಟರು.
ಶಾಸಕರು ವಿದ್ಯಾರ್ಥಿಗಳ ಒಟ್ಟಿಗೆ ಕಬ್ಬಡಿ ಆಟಕ್ಕೆ ಇಳಿದದ್ದು ಗಮನಿಸಿದ ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಸಂತಸ ಮನೆ ಮಾಡಿತ್ತು. ಜೊತೆಗೆ ಆಟಕ್ಕೆ ತೊಡಗಿದ್ದ ವಿದ್ಯಾರ್ಥಿಗಳಿಗೆ ಹುರುಪು ಹೆಚ್ಚುವಂತೆ ಮಾಡಿತು.
ಒಟ್ಟಾರೆಯಾಗಿ ಪಂಚೆ ಕಟ್ಟಿ ಕಬ್ಬಡಿ ಆಟಕ್ಕೆ ಇಳಿದ ಶಾಸಕ ದಡೆಸೂಗೂರು ಬಸವರಾಜ್, ಇತರೆ ಶಾಸಕರಿಗಿಂತ ಭಿನ್ನವೆನಿಸಿಕೊಂಡರು. ಈ ಮೂಲಕ ಎಲ್ಲರ ಗಮನ ಸೆಳೆದರು.
- games kabaddi kabaddi game kabaddi kabaddi kabaddi live kabbadi kanakagiri mla kanakagiri mla played kabbadi game kannada news today karnataka news today koppala koppala kanakagiri latest karnataka news mla played kabbadi topnews tv5 kannada tv5 kannada live tv5 kannada news tv5 live ಎಂಎಲ್ಎ ಕಬ್ಬಡಿ ಆಟ ಕೊಪ್ಪಳದ ಕನಕಗಿರಿ ಶಾಸಕ ಮಕ್ಕಳೊಂದಿಗೆ ಆಟ ಶಾಸಕ ದಡೆಸೂಗೂರು ಬಸವರಾಜ್