Top

ಕೊಡಗಿನಲ್ಲಿ ಮಹಾಮಳೆಗೆ 11 ಬಲಿ, 7 ಮೃತದೇಹ ಪತ್ತೆ.!

ಕೊಡಗಿನಲ್ಲಿ ಮಹಾಮಳೆಗೆ 11 ಬಲಿ, 7 ಮೃತದೇಹ ಪತ್ತೆ.!
X

ಕೊಡಗು : ಮೇಘಸ್ಪೋಟಗೊಂಡು ಸುರಿದ ಮಹಾಮಳೆಗೆ, ಕೊಡಗು ನಲುಗಿ ಹೋಗಿದೆ. ಜಿಲ್ಲೆಯ 104 ಹಳ್ಳಿಗಳು ನಾಶವಾಗಿ ಹೋಗಿವೆ.

ಇದೀಗ ಸರ್ಕಾರ, ಸರ್ಕಾರೇತ ಸಂಸ್ಥೆಗಳ ಮೂಲಕ ಕೊಡಗು ಮರು ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ನಿರಾಶ್ರಿತರ ಕೇಂದ್ರಗಳಲ್ಲಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ಅಂದಹಾಗೇ, ಕೊಡಗಿನಲ್ಲಿ ಇದೀಗ ಮಳೆಯ ಆರ್ಭಟ ತಗ್ಗಿದ್ದು, ನಾಪತ್ತೆಯಾಗಿರುವವರು, ಸತ್ತವರ ಬಗ್ಗೆ ಹುಡುಕಾಟ ಶುರುವಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಮಹಾಮಳೆಗೆ 11 ಜನರು ಬಲಿಯಾಗಿದ್ದಾರೆ.

ಮೃತ 11 ಜನರಲ್ಲಿ 7 ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ರಕ್ಷಣಾ ಪಡೆಯ ಸಿಬ್ಬಂದಿಗಳು ಕಾರ್ಯನಿರತರಾಗಿದ್ದಾರೆ.

ಮಹಾಮಳೆಗೆ ಮೃತರಾದವರು

  1. ಕಾಟಗೇರಿಯ ಯತೀಶ್, ಪವನ್, ಪ್ರಕಾಶ್
  2. ಹೆಮ್ಮೆತಾಳುವಿನ ಉಮೇಶ್, ಲೀಲಾವತಿ
  3. ಹೆಬ್ಬಟ್ಟಗೇರಿಯ ಉಮ್ಮವ್ವ ಬಿದ್ದಪ್ಪ
  4. ಜೋಡುಪಾಲದ ಗೌರಮ್ಮ ಎಂಬುದಾಗಿ ಗುರುತಿಸಲಾಗಿದೆ.

ಇನ್ನೂ ಮಹಾಮಳೆಯಿಂದಾಗಿ, ಕೊಡಗಿನ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು, ಸರ್ವನಾಶವಾಗಿದೆ. ಜಿಲ್ಲೆಯಲ್ಲಿ ಈವರೆಗೂ ಸಾವಿರಕ್ಕೂ ಕೋಟಿ ನಷ್ಟ ಉಂಟಾಗಿದೆ.

ಇದುವರೆಗೆ 5 ಸಾವಿರ 288 ಜನರು ನಿರಾಶ್ರಿತರಾಗಿದ್ದು, ಪರಿಹಾರ ಕೇಂದ್ರದಲ್ಲೇ ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.

Next Story

RELATED STORIES