ಏಷ್ಯನ್ ಗೇಮ್ಸ್: ದಾಖಲೆಯೊಂದಿಗೆ ಚಿನ್ನ ಗೆದ್ದ ತೇಜಿಂದರ್ ಪಾಲ್

X
TV5 Kannada25 Aug 2018 4:01 PM GMT
ಯುವ ಕ್ರೀಡಾಪಟು ತೇಜಿಂದರ್ ಪಾಲ್ ತೂರ್ ಏಷ್ಯನ್ ಗೇಮ್ಸ್ ನಲ್ಲಿ ಕ್ರೀಡಾಕೂಟದ ಪರುಷರ ಶಾಟ್ ಪುಟ್ ಎಸೆತದಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಶನಿವಾರ ನಡೆದ ಪುರುಷರ ಕಬ್ಬಿಣದ ಚೆಂಡು ಎಸೆಯುವ ಸ್ಪರ್ಧೆಯ ಫೈನಲ್ನಲ್ಲಿ ತೇಜಿಂದರ್ ಪಾಲ್ ತೂರ್ 20.75 ಮೀ. ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಚೀನಾದ ಲಿಯು ಯಾಂಗ್ (19.52ಮೀ.) ಬೆಳ್ಳಿ ಗೆದ್ದರೆ, ಕಜಕಿಸ್ತಾನದ ಇವಾನ್ ಇವಾನೊವ್ (19.40ಮೀ.) ಕಂಚಿನ ಪದಕಕ್ಕೆ ತೃಪ್ತರಾದರು.
ಜೀವನಶ್ರೇಷ್ಠ ಸಾಧನೆ ಮಾಡಿದ ತೇಜಿಂದರ್ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು. ಈ ಹಿಂದೆ ತೇಜಿಂದರ್ 20.24 ಮೀ. ಎಸೆದಿದ್ದು ಶ್ರೇಷ್ಠ ಸಾಧನೆಯಾಗಿತ್ತು. ಅಲ್ಲದೇ 6 ವರ್ಷಗಳ ಹಿಂದೆ ಪ್ರಕಾಶ್ ಖರಾನಾ 20.69 ಮೀ. ಎಸೆದು ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ತೇಜಿಂದರ್ ಪಾಲ್ ಮುರಿದರು.
ತೇಜಿಂದರ್ 5ನೇ ಪ್ರಯತ್ನದಲ್ಲಿ ಈ ದಾಖಲೆ ಬರೆದರು. ಈ ಮೂಲಕ ಭಾರತ ಶಾಟ್ಪುಟ್ ವಿಭಾಗದಲ್ಲಿ 8ನೇ ಚಿನ್ನದ ಪದಕ ಪಡೆಯಿತು.
Next Story