Top

ಶ್ರೀರಾಮುಲು ಜೊತೆ ಕಾಣಿಸಿಕೊಂಡ ಆನಂದ್ ಸಿಂಗ್

ಶ್ರೀರಾಮುಲು ಜೊತೆ ಕಾಣಿಸಿಕೊಂಡ ಆನಂದ್ ಸಿಂಗ್
X

ಬಳ್ಳಾರಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ, ಬಳ್ಳಾರಿಯ ಹೊಸಪೇಟೆಯ ಮೂಲಕ ಹಂಪಿಗೆ ಬಂದು ತಲುಪಿದೆ. ಈ ವೇಳೆ ಮೆರವಣಿಗೆ ನಡೆಸಲಾಗಿದ್ದು, ಚಿತಾಭಸ್ಮ ಮೆರವಣಿಗೆಯಲ್ಲಿ ಬಿಜೆಪಿ ನಾಯಕರ ಜೊತೆ ಹೊಸಪೇಟೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಭಾಗಿಯಾಗಿದ್ದು ವಿಶೇಷವಾಗಿತ್ತು.

ಹಂಪೆಯ ರಾಜಬೀದಿಯಲ್ಲಿ ಅಟಲ್ ಚಿತಾಭಸ್ಮ ಮೆರವಣಿಗೆ ನಡೆದಿದ್ದು, ಮೆರವಣಿಗೆಯಲ್ಲಿ ಬಿಜೆಪಿ ಶಾಸಕ ಶ್ರೀರಾಮುಲು ಜೊತೆ ಆನಂದ್ ಸಿಂಗ್ ಭಾಗಿಯಾಗಿದ್ದರು. ಇನ್ನು ಕೊಪ್ಪಳದ ಸಂಸದ ಸಂಗಣ್ಣ ಕರಡಿ ಸೇರಿದಂತೆ ಬಳ್ಳಾರಿ ಶಾಸಕರು ಕೂಡ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಇತ್ತೀಚೆಗೆ ತಾನೆ ಆನಂದ್ ಸಿಂಗ್ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿದ್ದರು.

Next Story

RELATED STORIES