Top

ಎಚ್ಚೆತ್ತುಕೊಳ್ಳದಿದ್ದರೆ ಇನ್ನಷ್ಟು ಅಪಾಯ ಕಾದಿದೆ: ವಿಜ್ಞಾನಿಗಳ ಎಚ್ಚರಿಕೆ

ಎಚ್ಚೆತ್ತುಕೊಳ್ಳದಿದ್ದರೆ ಇನ್ನಷ್ಟು ಅಪಾಯ ಕಾದಿದೆ: ವಿಜ್ಞಾನಿಗಳ ಎಚ್ಚರಿಕೆ
X

ಶತಮಾನದ ಮಳೆಗೆ ಕೇರಳ ಸಂಪೂರ್ಣ ಹದಗೆಟ್ಟಿದೆ. ಸುಮಾರು 1.3 ಕೋಟಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ವಿಜ್ಞಾನಿಗಳ ಪ್ರಕಾರ ಪರಿಸರ ಕಾಳಜಿ ಕುರಿತು ಎಚ್ಚೆತ್ತುಕೊಳ್ಳದಿದ್ದರೆ ಇನ್ನಷ್ಟು ಅಪಾಯ ಕಾದಿದೆ ಎಂದು ಎಚ್ಚರಿಸಿದ್ದಾರೆ.

ಮುಂಗಾರು ಮಳೆ ಆಧರಿಸಿ ದಕ್ಷಿಣ ಭಾರತದ ಜನರು ಆಹಾರ ಧಾನ್ಯ ಬೆಳೆಯುತ್ತಾರೆ. ದೇಶದ ಪ್ರಮುಖ ಅಹಾರ ಪೂರೈಕೆ ದಕ್ಷಣ ಭಾರತದಿಂದ ಉತ್ಪಾದನೆಯಾಗುತ್ತದೆ. ಆದರೆ ಈ ಪ್ರದೇಶಗಳಲ್ಲಿ ಪ್ರವಾಹ ಮುಂತಾದ ಪ್ರಕೃತಿ ವಿಕೋಪ ಸಂಭವಿಸಿದರೆ ದೇಶದ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ಕೇರಳದಲ್ಲಿ ಸಾಮಾನ್ಯಕ್ಕಿಂತ ಮೂರುಪಟ್ಟು ಹೆಚ್ಚು ಮಳೆ ಆಗಲು ಕಾರಣ ಪರಿಸರ ಹಾನಿಯಾಗಿರುವುದು ಎಂದು ಹಿರಿಯ ವಿಜ್ಞಾನಿ ರಾಕ್ಸಿ ಮ್ಯಾಥ್ಯೂ ಹೇಳಿದ್ದಾರೆ.

ಹವಮಾನ ವೈಪರಿತ್ಯದಿಂದ 67 ಸಾವಿರ ಮಂದಿ ಮೃತಪಟ್ಟಿದ್ದು, 17 ದಶಲಕ್ಷ ಜನರು ವಸತಿ ಹೀನರಾಗಿದ್ದಾರೆ.

Next Story

RELATED STORIES