Top

ಕೇರಳ ಪ್ರವಾಹ : ಪ್ರಾಣಿಗಳಿಗೆ ನೆರವಾಗಲು ವಿರುಷ್ಕಾ ದಂಪತಿ ಪಣ

ಕೇರಳ ಪ್ರವಾಹ : ಪ್ರಾಣಿಗಳಿಗೆ ನೆರವಾಗಲು ವಿರುಷ್ಕಾ ದಂಪತಿ ಪಣ
X

ಕೇರಳ : ದೇವರ ನಾಡು ಕೇರಳ ಕಳೆದ 100 ವರ್ಷಗಳಲ್ಲೆ ಕೆಟ್ಟ ಪ್ರವಾಹವನ್ನ ಎದುರಿಸಿದೆ. ಇದರಿಂದ ಸಾವಿರಾರು ಜನರು ಜೀವನವನ್ನ ಕಳೆದುಕೊಂಡಿದ್ದಾರೆ.

ಸಾಕಷ್ಟು ಸೆಲೆಬ್ರಿಟಿಗಳು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಇತ್ತಿಚಿನ ಸೇರ್ಪಡೆಯಾಗಿದ್ದಾರೆ.

ಮೊನ್ನೆ ಆಂಗ್ಲರ ವಿರುದ್ಧ ಪಂದ್ಯ ಗೆದ್ದ ನಂತರ ತಂಡದ ಗೆಲುವನ್ನ ಕೇರಳ ನೆರೆ ಸಂತ್ರಸ್ತರಿಗೆ ಅರ್ಪಿಸಿ ಮಾನವೀಯತೆ ಮೆರೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಇಷ್ಟೆ ಅಲ್ಲದೇ ಪಂದ್ಯದ ವೇತನವನ್ನ ಇಡೀ ತಂಡ ಸಂತ್ರಸ್ತರಿಗೆ ಕೊಡಲಿದೆ ಎಂದು ಹೇಳಿದರು.

ನೆರೆ ಸಂತ್ರಸ್ತರಿಗೆ ನೆರವಾಗಿದ್ದ ವಿರುಷ್ಕಾ ದಂಪತಿ ಇದೀಗ ಪ್ರವಾಹದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಸದ್ಯ ಇವರಿಬ್ಬರು ಆಂಗ್ಲರ ನಾಡಲ್ಲಿದ್ದು.

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪ್ರಾಣಿಗಳಿಗೆ ಟ್ರಕ್‍ನಲ್ಲಿ ಆಹಾರ ಮತ್ತು ಔಷಧಗಳನ್ನ ಟ್ರಕ್ ಮೂಲಕ ಕಳುಹಿಸಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳೊಂದು ಹೇಳಿವೆ.

Next Story

RELATED STORIES