Top

ಗುರು ಶಾಸ್ತ್ರಿಗೆ ಕೊಹ್ಲಿ ಷಾಂಪೇನ್ ಗಿಫ್ಟ್

ಗುರು ಶಾಸ್ತ್ರಿಗೆ ಕೊಹ್ಲಿ ಷಾಂಪೇನ್ ಗಿಫ್ಟ್
X

ನಾಟಿಂಗ್ಯಾಮ್: ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗುರು ರವಿಶಾಸ್ತ್ರಿಗೆ ಷಾಂಪೇನ್‍ನನ್ನ ಗಿಫ್ಟಾಗಿ ಕೊಟ್ಟಿದಾರೆ.

ಬುಧವಾರ ಐದನೇ ದಿನ ಆಂಗ್ಲರ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆ ಡ್ರೆಸಿಂಗ್ ರೂಮ್‍ಗೆ ತೆರೆಳಿದ ಕ್ಯಾಪ್ಟನ್ ಕೊಹ್ಲಿ ತಮ್ಮ ಗುರು ಹಾಗೂ ತಂಡದ ಕೋಚ್ ರವಿ ಶಾಸ್ತ್ರಿಗೆ ಗುರು ಕಾಣಿಕೆಯಾಗಿ ಷಾಂಪೇನ್‍ನನ್ನ ಹಸ್ತಾಂತರಿಸಿದರು.

ಈ ದೃಶ್ಯಾವಳಿಗಳು ಸೆರೆಯಾಗಿದ್ದು ನೇರ ಪ್ರಸಾರದಲ್ಲಿ ಅಭಿಮಾನಿಗಳು ಫೋಟೋಗಳನ್ನ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಹಿಂದಿನ ಎರಡು ಟೆಸ್ಟ್ ಪಂದ್ಯಗಳನ್ನ ಸೋತಾಗ ಸಾಕಷ್ಟು ಟೀಕೆಗಳನ್ನ ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಎದುರಿಸಿದ್ದರು.

ಮೂರನೇ ಟೆಸ್ಟ್ ಪಂದ್ಯವನ್ನ ಗೆಲ್ಲುವ ಮೂಲಕ ಸರಣಿಯನ್ನ ಟೀಂ ಇಂಡಿಯಾ ಜೀವಂತರವಾಗಿರಿಸಿಕೊಂಡಿದೆ.

Next Story

RELATED STORIES