Top

ಗಮನ ಸೆಳೆದ ಚಾಮುಂಡೇಶ್ವರಿ ದೇಗುಲದ ನೋಟುಗಳ ಸಿಂಗಾರ

ಗಮನ ಸೆಳೆದ ಚಾಮುಂಡೇಶ್ವರಿ ದೇಗುಲದ ನೋಟುಗಳ ಸಿಂಗಾರ
X

ಮಂಡ್ಯ : ಇಂದು ನಾಡಿನೆಲ್ಲೆಡೆ ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಗುತ್ತಿದೆ. ರಾಜ್ಯದ ನಾನಾ ದೇಗುಲಗಳಲ್ಲಿ ಜನರು ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಭಾವದಲ್ಲಿ ಪುನೀತರಾಗುತ್ತಿದ್ದಾರೆ.

ಇತ್ತ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ಇರುವ ಚಾಮುಂಡೇಶ್ವರಿ ತಾಯಿಗೆ, ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ನೋಟುಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ದೇವಾಲಯದ ಅರ್ಚಕ ಲಕ್ಷ್ಮೀಶ್ ಭಕ್ತರು ಸಿಂಗಾರಕ್ಕೆಂದು ನೀಡಲಾಗಿದ್ದ 5 ಲಕ್ಷ ರೂ.ಗಳನ್ನು ಬಗೆ ಬಗೆಯಾಗಿ ಅಲಂಕರಿಸಿ ವಿಶೇಷ ರೀತಿಯಲ್ಲಿ ದೇವಿಯನ್ನು ಆರಾಧಿಸಿದರು.

ರೂ 2000, 500, 200, 100, 50, 20, 10 ಹಾಗೂ 5 ರೂಗಳ ನೋಟುಗಳ ಸಿಂಗಾರಗೊಂಡ ತಾಯಿ ಚಾಮುಂಡೇಶ್ವರಿ, ಭಕ್ತರ ಮನ ಪುಳಕಗೊಳ್ಳುವಂತೆ ಮಾಡಿತು.

ಈ ಅಪರೂಪದ ಚಿತ್ರಣವನ್ನು ಕಣ್ತುಂಬಿಕೊಂಡ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದ್ರು‌. ನೋಟುಗಳ ಸಿಂಗಾರ ಕಂಡು ಅಚ್ಚರಿಗೊಂಡರು.

Next Story

RELATED STORIES