Top

'ಒಡೆಯ'ಸಿನಿಮಾ ಮುಹೂರ್ತ ಬೆನ್ನಲ್ಲೇ 'D53' ಅನೌನ್ಸ್

ಒಡೆಯಸಿನಿಮಾ ಮುಹೂರ್ತ ಬೆನ್ನಲ್ಲೇ D53 ಅನೌನ್ಸ್
X

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವರಮಹಾಲಕ್ಷ್ಮೀಯ ಮೊರೆ ಹೋಗಿರೋದು ವಿಶೇಷ. ಹಗಲಿರುಳು ಶೂಟಿಂಗ್​ನಲ್ಲಿ ಬ್ಯುಸಿ ಇರೋ ಡಿ ಬಾಸ್, ಇದೀಗ ಹಬ್ಬದ ಪ್ರಯುಕ್ತ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಿಸಿದ್ದಾರೆ. ಹಾಗಾದ್ರೆ ದರ್ಶನ್ ಅಭಿನಯದ ಆ ಹೊಚ್ಚ ಹೊಸ ಸಿನಿಮಾ ಯಾವುದು...? ಡೈರೆಕ್ಟರ್ ಯಾರು..? ಸಿನಿಮಾ ಯಾವಾಗ ಶುರುವಾಗುತ್ತೆ ಅನ್ನೋದ್ರ ಸ್ಪೆಷಲ್ ಎಕ್ಸ್​ಕ್ಲೂಸಿವ್ ಸ್ಟೋರಿ ಮುಂದೆ ಓದಿ.

ವರಮಹಾಲಕ್ಷ್ಮೀ ಮೊರೆ ಹೋದ ಡಿ ಬಾಸ್ ದಚ್ಚು

ಅಯ್ಯಪ್ಪನ ಕೃಪೆಯಿಂದ D53 ಕಿಕ್ ಸ್ಟಾರ್ಟ್​..!!

ಯೆಸ್... ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್​ರ ಹೊಚ್ಚ ಹೊಸ ಸಿನಿಮಾಗೆ ಚಿತ್ರತಂಡದಿಂದ ಚಾಲನೆ ಸಿಕ್ಕಿದೆ. ಲಕ್ಷ್ಮೀ ಹಬ್ಬ ಸುದಿನ ಅನ್ನೋ ಕಾರಣಕ್ಕೆ ಚಿತ್ರತಂಡ ಸ್ಕ್ರಿಪ್ಟ್ ಪೂಜೆ ಮೂಲಕ ಕಿಕ್ ಸ್ಟಾರ್ಟ್​ ಮಾಡಿದೆ.

ಹೌದು, ಇವು ದರ್ಶನ್ ಅಭಿನಯದ 53ನೇ ಸಿನಿಮಾ D53ಯ ಸ್ಕ್ರಿಪ್ಟ್ ಪೂಜಾ ಸ್ಟಿಲ್ಸ್. ಚೌಕ ಖ್ಯಾತಿಯ ತರುಣ್ ಸುಧೀರ್ ನಿರ್ದೇಶನದಲ್ಲಿ ತಯಾರಾಗಲಿರೋ ಈ ಸಿನಿಮಾಗೆ ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡುತ್ತಿರೋದು ವಿಶೇಷ.

ದರ್ಶನ್ 53ನೇ ಸಿನಿಮಾ ಡಿ ರಾಬರ್ಟ್​ ಆಗಿರಲಿದೆ ಅನ್ನೋ ಸುದ್ದಿಯನ್ನ ನಾವೇ ನಮ್ಮ ಮೂವಿಮನೆಯಲ್ಲಿ ಎಕ್ಸ್​ಕ್ಲೂಸಿವ್ ಆಗಿ ಹೇಳಿದ್ವಿ. ಆದ್ರೀಗ ಅದೇ ಸಿನಿಮಾಗೆ D53 ಅನ್ನೋ ಟೆಂಟಿಟೇಟಿವ್ ಟೈಟಲ್ ಇಟ್ಟಿರೋ ಚಿತ್ರತಂಡ, ಮಲ್ಲೇಶ್ವರಂನ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿದೆ.

ರಿಲೀಸ್​ಗೆ ಸಜ್ಜಾಗ್ತಿವೆ ಕುರುಕ್ಷೇತ್ರ- ಯಜಮಾನ..!!

ಇತ್ತೀಚೆಗೆ ಮೈಸೂರಿನಲ್ಲಿ ಒಡೆಯ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿತ್ತು. ಸಂದೇಶ್ ನಾಗರಾಜ್ ನಿರ್ಮಾಣದ ಎಂಡಿ ಶ್ರೀಧರ್ ನಿರ್ದೇಶನದ ಒಡೆಯ, ದರ್ಶನ್​ರ 52ನೇ ಸಿನಿಮಾ. ಅದರ ಬೆನ್ನಲ್ಲೇ 53ನೇ ಚಿತ್ರದ ಸ್ಕ್ರಿಪ್ಟ್ ಪೂಜೆ ಆಗಿರೋದು ದಿ ಬಾಸ್ ಫ್ಯಾನ್ಸ್​ಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ.

ಅಂದಹಾಗೆ ದಚ್ಚು ಕರಿಯರ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್​ಗೆ ಸಜ್ಜಾಗ್ತಿದೆ. ಇನ್ನು ಯಜಮಾನ ಚಿತ್ರ ಕೂಡ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಭರದಿಂದ ನಡೆಸ್ತಿದೆ. ಹಾಗಾಗಿ ಸದ್ಯ ದಚ್ಚು ಎರಡು ಸಿನಿಮಾಗಳು ಒಂದರ ಹಿಂದೊಂದು ರಿಲೀಸ್ ಆಗೋಕ್ಕೆ ರೆಡಿಯಾಗ್ತಿವೆ.

ಒಡೆಯ ಮುಗಿಯುತ್ತಿದ್ದಂತೆ ರಾಬರ್ಟ್​ ಶುರು..!

ಮೆಗಾ ಕಾಂಬಿನೇಷನ್​ನ ಮೆಗಾ ಚಿತ್ರ D53..!!

ಸದ್ಯ ಒಡೆಯ ಚಿತ್ರದಲ್ಲಿ ಬ್ಯುಸಿ ಇರೋ ದರ್ಶನ್, ಅದು ಮುಗೀತಾ ಇದ್ದಂತೆ 53ನೇ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್​ದಾರಂತೆ. ಸದ್ಯ ಚಿತ್ರದ ಡೈಲಾಗ್ಸ್ ಹಾಗೂ ಸಕ್ರೀನ್ ಪ್ಲೇ ರೆಡಿ ಆಗ್ತಿದ್ದು, ಆದಷ್ಟು ಬೇಗ ರಾಬರ್ಟ್​ ಲೈಮ್​ಲೈಟ್​ಗೆ ಬರಲಿದ್ದಾನೆ.

ಅಂದಹಾಗೆ ಇದು ಚೌಕ ಡೈರೆಕ್ಟರ್, ಹೆಬ್ಬುಲಿ ನಿರ್ಮಾಪಕ ಹಾಗೂ ಡಿ ಬಾಸ್ ಮೆಗಾ ಕಾಂಬಿನೇಷನ್​ನ ಸಿನಿಮಾ ಆದ್ದರಿಂದ ಬಹುಕೋಟಿ ವೆಚ್ಚದ ಮೆಗಾ ಸಿನಿಮಾ ಆಗೋದ್ರಲ್ಲಿ ಡೌಟೇ ಇಲ್ಲ.

ಅದೇನೇ ಇರಲಿ, ಸದ್ಯ ಲಕ್ಷ್ಮೀ ಹಾಗೂ ಅಯ್ಯಪ್ಪನ ಅನುಗ್ರಹದಿಂದ ಸಿನಿಮಾಗೆ ಚಾಲನೆ ಕೊಟ್ಟಿರೋ ಡೈರೆಕ್ಟರ್ ತರುಣ್ ಸುಧೀರ್ ಅಂಡ್ ಟೀಂಗೆ ಶುಭಾಶಯ ಕೋರೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5

Next Story

RELATED STORIES