Top

ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮೀ ಹಬ್ಬದ ಸಡಗರ

ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮೀ ಹಬ್ಬದ ಸಡಗರ
X

ಶ್ರಾವಣ ಮಾಸ ಎಂದರೆ ಹಬ್ಬಗಳ ಸರಮಾಲೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ನಾವು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುತ್ತೇವೆ.

ದಕ್ಷಿಣ ಭಾರತೀಯರಿಗೆ ಅದರಲ್ಲಿಯೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ವರಮಹಾಲಕ್ಷ್ಮೀ ಹಬ್ಬವು ಒಂದು ಪ್ರಮುಖ ಆಚರಣೆಯಾಗಿದೆ.

ಇಂತಹ ಹಬ್ಬವನ್ನು ಇಂದು, ರಾಜ್ಯದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೋಟೆ ನಾಡು ಚಿತ್ರದುರ್ಗದಲ್ಲಿ, ನವದುರ್ಗೆಯರ ಆರಾಧನೆ ಮಾಡುವ ಮೂಲಕ, ವಿಶೇಷ ಪೂಜಾ ಕೈಂಕರ್ಯವನ್ನು ಜನರು ನೆರವೇರಿಸಿದರು.

ನಗರದ ಹೊಳೆೆಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮ ದೇವಸ್ಥಾನದಲ್ಲಿ, ದೇವಿಗೆ ವಿಶಿಷ್ಠ ರೀತಿಯಲ್ಲಿ ಅಲಂಕರಿಸಿ, ಪೂಜಿಸಲಾಯಿತು.

ಕುಂದಾನಗರಿ ಬೆಳಗಾವಿಯಲ್ಲಿ ಬೆಳಿಗ್ಗೆಯಿಂದಲೇ ಶಕ್ತಿ ದೇವತೆಗಳ ದರ್ಶನವನ್ನು ಭಕ್ತರು ಪಡೆದರು. ಬೆಳಗಾವಿ ಗ್ರಾಮದೇವಿ ಲಕ್ಷ್ಮೀ ದೇವಸ್ಥಾನ, ಕೋಟೆ ಕೆರೆಯ ದುರ್ಗಾ ದೇವಸ್ಥಾನಗಳಲ್ಲಿ ದೇವಿಗೆ ಉಡಿತುಂಬಿ ವರಮಹಾಲಕ್ಷ್ಮೀ ಹಬ್ಬ ಆಚರಿಸಿದರು.

ಮಂಡ್ಯದಲ್ಲಿ, ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿ ಶ್ರೀಚಾಮುಂಡೇಶ್ವರಿ ತಾಯಿಗೆ ನೋಟುಗಳಿಂದ ಸಿಂಗರಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.

ರಾಯಚೂರಿನ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದ ದೇವಿಗೆ ತುಪ್ಪ, ಹಾಲಿನ ಅಭಿಷೇಕ, ಅಲಂಕಾರಾಧಿಗಳನ್ನು ಭಕ್ತಾದಿಗಳು ನೆರವೇರಿಸಿದರು.

ಇತ್ತ ದಬಾಸ್ ಪೇಟೆ ಬಳಿಯ ಗೊರವನಹಳ್ಳಿಯಲ್ಲಿನ ಮಹಾಲಕ್ಷ್ಮೀ ದೇವಸ್ಥಾನದಲ್ಲಿ, ಬೆಳಿಗ್ಗೆಯಿಂದಲೇ ಸೇರಿದ ಭಕ್ತ ಸಾಗರದ, ತಾಯಿಗೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿ, ಭಕ್ತಿ ಭಾವದಲ್ಲಿ ಮುಳುಗಿದರು.

ಒಟ್ಟಾರೆಯಾಗಿ ರಾಜ್ಯದ ಅನೇಕ ಕಡೆ ಇಂದು ವರಮಹಾಲಕ್ಷ್ಮೀ ಹಬ್ಬ ಕಳೆಗಟ್ಟಿತ್ತು. ವಿವಿಧ ರೀತಿಯಲ್ಲಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದ ಜನರು, ಇಷ್ಟಾರ್ಥ ನೆರವೇರಿಕೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.

Next Story

RELATED STORIES