Top

ಜಿಂಕೆ ಬದುಕಿಸಲು ಹೋಗಿ ಹೆಬ್ಬಾವು ಕೊಂದವರು ಜೈಲು ಪಾಲು

ಜಿಂಕೆ ಬದುಕಿಸಲು ಹೋಗಿ ಹೆಬ್ಬಾವು ಕೊಂದವರು ಜೈಲು ಪಾಲು
X

ಶಿರಸಿ : ಹೆಬ್ಬಾವೊಂದು ಜಿಂಕೆಯನ್ನು ತಿನ್ನುತ್ತಿದ್ದನ್ನು ಕಂಡ ಗ್ರಾಮಸ್ಥರು, ಹೆಬ್ಬಾವನ್ನು ಹೊಡೆದು ಸಾಯಿಸಿ, ಚಿಂಕೆ ರಕ್ಷಿಸಲು ಹೋಗಿ ಈಗ ಜೈಲು ಪಾಲಾಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ನಂದಿಕಟ್ಟ ಗ್ರಾಮದ ಬಳಿ ಈ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಹೆಬ್ಬಾವು ಸಾಯಿಸುತ್ತಿರುವ ದೃಶ್ಯ ವೈರಲ್ ಕೂಡ ಆಗಿತ್ತು.

ವೈರಲ್ ವೀಡಿಯೋ ಬೆನ್ನತ್ತಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಬಸವರಾಜ್ ಕೋನಿ, ಶೇಖಪ್ಪ ಬೇವಿನಮರದ, ಮೋಹನ್ ಸಿಂಹ್ ರಜಪೂತ್, ಮಹದೇವ್ ಸೂಟಗಟ್ಟಿ, ಬಸಪ್ಪ ಹುಚ್ವಣ್ಣನವರ್, ಮಧು ಸಿಂಗ್ ರಜಪೂತ ಹಾಗೂ ವಿಜಯ್ ಸಿಂಗ್ ಎಂಬುವರನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.

ಅಂದಹಾಗೇ, ಕಳೆದ ಹಲವು ದಿನಗಳ ಹಿಂದೆ ನಂದಿಕಟ್ಟ ಮೀಸಲು ಅರಣ್ಯದಲ್ಲಿ ನಡೆದಿತ್ತು. ಹೆಬ್ಬಾವು ಜಿಂಕೆ ನುಂಗುತ್ತಿದ್ದನ್ನು ಕಂಡ ಗ್ರಾಮಸ್ಥರು, ಜಿಂಕೆ ರಕ್ಷಿಸಲು ಹೋಗಿ ಹೆಬ್ಬಾವನ್ನು ಸಾಯಿಸಿದ್ದರು.

ಹೆಬ್ಬಾವು ಕಚ್ಚಿದ ಪರಿಣಾಮ, ರಕ್ಷಿಸಲ್ಪಟ್ಟ ಜಿಂಕೆ ಕೂಡ, ಸಾವನ್ನಪ್ಪಿತ್ತು. ಈ ಎಲ್ಲ ಹೆಬ್ಬಾವು ಸಾಯಿಸಿ, ಜಿಂಕೆ ರಕ್ಷಿಸಿದ ಘಟನೆಯನ್ನು ಮೊಬೈಲ್‌ನಲ್ಲಿ ಗ್ರಾಮಸ್ಥರು ಚಿತ್ರೀಕರಿಸಿಕೊಂಡಿದ್ದರು.

ಈ ದೃಶ್ಯ ಒಬ್ಬರಿಂದ ಒಬ್ಬರಿಗೆ ಸಾಗುವ ಮೂಲಕ ವೈರಲ್ ಆಗಿತ್ತು. ಇದೇ ವೀಡಿಯೋ ಮುಂಡಗೋಡು ವಲಯ ಅರಣ್ಯಾಧಿಕಾರಿಗಳಿಗೂ ತಲುಪಿತ್ತು. ಇದನ್ನು ಗಮನಿಸಿ ಜಾಗೃತರಾದ ಅಧಿಕಾರಿಗಳು ಏಳು ಜನರನ್ನು ಬಂಧಿಸಿದ್ದಾರೆ.

ಈ ಸಂಬಂಧ ಏಳು ಜನರನ್ನು ಮುಂಡಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಜೈಲಿಗೆ ಅಟ್ಟಿದ್ದಾರೆ.

ಅಂತೂ ಇಂತೂ ಜಿಂಕೆ ರಕ್ಷಿಸಲು ಹೋಗಿ ಜಿಂಕೆಯೂ ಉಳಿಯದೇ ಹಾವನ್ನು ಸಾಯಿಸದೇ ಬಿಡದ ನಂದಿಕಟ್ಟ ಗ್ರಾಮಸ್ಥರು ಇದೀಗ ಜೈಲು ಪಾಲಾಗಿದ್ದಾರೆ.

Next Story

RELATED STORIES