Top

ಇಂದು ವರಮಹಾಲಕ್ಷ್ಮೀ ಹಬ್ಬ : ನೀವು ತಿಳಿದುಕೊಳ್ಳಬೇಕಾದ ವಿಷಯಗಳು

ಇಂದು ವರಮಹಾಲಕ್ಷ್ಮೀ ಹಬ್ಬ : ನೀವು ತಿಳಿದುಕೊಳ್ಳಬೇಕಾದ ವಿಷಯಗಳು
X

ಇದೀಗ ಶ್ರಾವಣ ಮಾಸ. ಈ ಸಂದರ್ಭದಲ್ಲಿ ಹಬ್ಬಗಳ ಸರಮಾಲೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ನಾವು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುತ್ತೇವೆ.

ದಕ್ಷಿಣ ಭಾರತೀಯರಿಗೆ ಅದರಲ್ಲಿಯೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಒಂದು ಪ್ರಮುಖ ಹಬ್ಬವಾಗಿ ಆಚರಿಸಲ್ಪಡುತ್ತದೆ. ಈ ಸಂದರ್ಭದಲ್ಲಿ ನೀವು ತಿಳಿಯಬೇಕಾದ ವಿಷಗಳು ಹೀಗಿವೆ..

ವರಮಹಾಲಕ್ಷ್ಮೀ ತಾಯಿಯ ಪೂಜೆಯ ಮಹತ್ವ

ಲಕ್ಷ್ಮೀ... ಹಣ, ಸಂಪತ್ರು, ಐಶ್ವರ್ಯ ಸೇರಿದಂತೆ ಇತರೆ ಹೆಸರಿನಿಂದ ಕೆರೆಯಲ್ಪಡುವ ಹೆಸರುಗಳು. ಹೀಗಾಗಿ ಅಷ್ಠ ಲಕ್ಷ್ಮೀಯ ಆಚರಣೆಯೆಂದೇ ಇಂದಿನ ವರಮಹಾಲಕ್ಷ್ಮೀ ಹಬ್ಬವನ್ನು ಕರೆಯುತ್ತಾರೆ.

ಅಂದರೇ, ಸಿರಿ, ಭೂಮಿ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ಸಂತೋಷ, ಪುಷ್ಠಿ ಎಂಬ ಅಷ್ಠ ಹೆಸರುಗಳಿಂದ ವರಮಹಾಲಕ್ಷ್ಮೀಯನ್ನು ಇಂದು ನಾವು ನೀವೆಲ್ಲಾ ಆಚರಿಸುತ್ತೇವೆ.

ಇಂತಹ ಲಕ್ಷ್ಮಿಯನ್ನು, ಶ್ರಾವಣ ಮಾಸದ ಈ ದಿನದಂದು ಶ್ರದ್ಧಾಭಕ್ತಿಯಿಂದ ಅನೇಕ ಕಡೆಯಲ್ಲಿ ಪೂಜಿಸಲ್ಪಡುತ್ತಾರೆ. ಇದಕ್ಕೆ ಕಾರಣ ಲಕ್ಷ್ಮೀ ಸಂತೃಪ್ತಳಾಗಿ, ಭಕ್ತರ ಬಯಕೆಗಳನ್ನು ನೆರವೇರಿಸುತ್ತಾಳೆ ಎಂಬುದಾಗಿದೆ.

ಇಂದು ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮೀಯನ್ನು ಪೂಜಿಸಿದರೇ, ತನ್ನ ಭಕ್ತರಿಗೆ ಉತ್ತಮ ಸಂಪತ್ತು, ಧನ-ದಾನ್ಯ ಕರುಣಿಸುತ್ತಾಳೆ ಎಂಬುದು ಪ್ರಾಚೀನ ಕಾಲದಿಂದಲೂ ಪುರಾಣ ಪ್ರಸಿದ್ದವಾಗಿರುವ ನಂಬಿಕೆಯಾಗಿದೆ.

ಈ ಹಿನ್ನಲೆಯಿಂದ ನಾಡಿನಾದ್ಯಂತ ಅಲ್ಲದೇ, ದೇಶದ ಅನೇಕ ಭಾಗಗಳಲ್ಲಿ ವರಮಹಾಲಕ್ಷ್ಮೀಯನ್ನು ಕೂರಿ, ಪೂಜಿಸಿ ಆರಾಧಿಸುವ ಸಂಪ್ರದಾಯವಿದೆ.

ವರಮಹಾಲಕ್ಷ್ಮೀ ಹಬ್ಬದ ಹಿನ್ನಲೆ..

ವರಮಹಾಲಕ್ಷ್ಮೀ ಹಬ್ಬ ಇಂದು ನಿನ್ನೆಯ ಆಚರಣೆಯಲ್ಲ. ಇದಕ್ಕೆ ಪುರಾತನ ಇತಿಹಾಸವಿದೆ. ಜೊತೆಗೆ ಆಚರಣೆಯ ಹಿಂದೆ ಐತಿಹಾಸಿಕ ಕತೆಯೊಂದು ಬೆಸೆದುಕೊಂಡಿದೆ. ಆ ಕತೆ ಏನು ಎಂದರೇ..

ಮಗಧರಾಜ್ಯದಲ್ಲಿ ಚಾರುಮತಿ ಎಂಬ ಅತಿ ದೈವಭಕ್ತೆಯುಳ್ಳ ಮಹಿಳೆಯೊಬ್ಬಳಿದ್ದಳು. ತನ್ನ ಸದ್ಗುಣಗಳಿಂದ ಆಕೆ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು. ಆದರ್ಶ ಸತಿ, ಸೊಸೆ ಮತ್ತು ತಾಯಿಯ ಪಾತ್ರವನ್ನು ಅತಿ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಳು.

ಈಕೆಯ ಗುಣದಿಂದ ಪ್ರಸನ್ನಳಾದ ದೇವತೆ ಲಕ್ಷ್ಮೀ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ಮಾಸದ ಹುಣ್ಣಿಮೆಯ ನಂತರದ ಶುಕ್ರವಾರ ತನ್ನನ್ನು ಪೂಜಿಸುವಂತೆ ತಿಳಿಸಿ, ಒಂದು ವೇಳೆ ಈ ಪೂಜೆ ಪರಿಪೂರ್ಣವಾದರೆ ಆಕೆಗೆ ಜೀವನದಲ್ಲಿ ಏನು ಬೇಕೋ ಅವೆಲ್ಲಾ ಸಿಗುವ ವರ ನೀಡುತ್ತೇನೆ ಎಂದು ವಾಗ್ದಾನ ನೀಡಿದಳು.

ಚಾರುಮತಿ ಎಂಬ ಮಹಿಳೆಯ ಕಥೆ ಈ ಪೂಜೆಗೆ ಪ್ರೇರಣೆಯಾಗಿದೆ. ಒಮ್ಮೆ ಪಾರ್ವತಿಯು ತನ್ನ ಪತಿಯಾದ ಶಿವನಲ್ಲಿ ಒಂದು ಬೇಡಿಕೆ ಇಟ್ಟಳಂತೆ.

ಚಾರುಮತಿಯ ಬೇಡಿಕೆ ಅನುಸಾರ, ವಿವಾಹವಾದ ಬಳಿಕ ಓರ್ವ ಮಹಿಳೆ ತನ್ನ ಜೀವನಕ್ಕೆ ಬೇಕಾದ ಎಲ್ಲವನ್ನೂ ಹೇಗೆ ಪಡೆಯಬಹುದು? ಅಂದರೆ ಪತಿಯ ಪ್ರೇಮ, ಮಕ್ಕಳ ಸುಖ, ಮೊಮ್ಮಕ್ಕಳ ಸುಖ ಮತ್ತು ಸಾಕಷ್ಟು ಧನಸಂಪತ್ತು ಎಲ್ಲವನ್ನೂ ಹೇಗೆ ಪಡೆಯುವುದು ಎಂದು ಕೇಳಿದಳಂತೆ.

ಅದಕ್ಕೆ ಉತ್ತರಿಸಿದ ಶಿವ ಯಾವ ಸಾಧ್ವಿ ವರಮಹಾಲಕ್ಷ್ಮಿಪೂಜೆಯನ್ನು ನೆರವೇರಿಸುತ್ತಾಳೆಯೋ ಆಕೆಗೆ ಜೀವನದಲ್ಲಿ ಎಲ್ಲಾ ಸುಖಗಳು ಲಭಿಸುತ್ತವೆ ಎಂದು ಹೇಳಿ ಚಾರುಮತಿಯ ಕಥೆಯನ್ನು ಪ್ರಾರಂಭಿಸಿದನಂತೆ.

ಈ ಕೋರಿಕೆಯನ್ನು ಪರಿಪೂರ್ಣವಾಗಿ ನೆರವೇರಿಸಿದ ಚಾರುಮತಿ ತನ್ನೊಂದಿಗೆ ತನ್ನ ನೆರೆಹೊರೆಯ ಮತ್ತು ಆಪ್ತರನ್ನೂ ಸೇರಿಸಿಕೊಂಡಳು. ಪೂಜೆ ಪೂರ್ಣವಾದ ಬಳಿಕ ಆಕೆಯ ಜೊತೆಗಿದ್ದ ಎಲ್ಲಾ ಮಹಿಳೆಯರ ಮೈ ಮೇಲೆ ಬಂಗಾರದ ಆಭರಣಗಳು ಪ್ರತ್ಯಕ್ಷವಾಗಿದ್ದು ಮಾತ್ರವಲ್ಲ ಅವರ ಮನೆಗಳೂ ಚಿನ್ನದ್ದಾದವು. ಈ ಎಲ್ಲಾ ಮಹಿಳೆಯರು ತಮ್ಮ ಜೀವಮಾನದುದ್ದಕ್ಕೂ ಪೂಜೆಯನ್ನು ನೆರವೇರಿಸುತ್ತಾ ಉತ್ತಮ ಜೀವನವನ್ನು ಪಡೆದರು.

ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾ ಬಂದಿದ್ದಾರೆ.

ವರಮಹಾಲಕ್ಷ್ಮೀಯನ್ನು ಪೂಜೆ ಮಾಡುವ ವಿಧಾನ

  1. ವರಮಹಾಲಕ್ಷ್ಮೀ ಪೂಜೆಯಲ್ಲಿ 'ಕಲಶ' ಪ್ರಮುಖವಾದುದು, ಕಲಶ ಲಕ್ಷ್ಮೀಯ ಪ್ರತೀಕ. ಕಲಶವನ್ನು ಮಣ್ಣಿನ ಚಿಕ್ಕ ಗಡಿಗೆ, ತಾಮ್ರದ ಅಥವಾ ಬೆಳ್ಳಿಯ ತಂಬಿಗೆ ಹೀಗೆ ನಿಮಗೆ ಅನುಕೂಲಕರ ರೀತಿಯಲ್ಲಿ ಕಲಶವನ್ನು ಇರಿಸಬಹುದು.
  2. ಮೊದಲು ಒಂದು ಬಾಳೆ ಎಲೆಯನ್ನು ಇರಿಸಿ ಅದರಲ್ಲಿ ಅಕ್ಕಿಯನ್ನು ಹರಡಿ. ನಂತರ ಅದರ ಮೇಲೆ ಕಲಶವನ್ನು ಕೂರಿಸಿ. ಕೆಲವರ ಮನೆಯಲ್ಲಿ ಕಲಶದಲ್ಲಿ ನೀರು ತುಂಬಿ ವಿಳ್ಳೆದೆಲೆ ಇರಿಸುತ್ತಾರೆ. ಮತ್ತೆ ಕೆಲವರು ಧಾನ್ಯಗಳನ್ನು ತುಂಬಿ ಕಲಶ ಇರಿಸುತ್ತಾರೆ.
  3. ನಿಮ್ಮ ಮನೆಯ ಸಂಪ್ರದಾಯದಂತೆ ಕಲಶದಲ್ಲಿ ಪದಾರ್ಥವನ್ನು ತುಂಬಿಡಿ. ಕಲಶವನ್ನು ಇರಿಸಿದ ನಂತರ ಒಂದು ತೆಂಗಿನ ಕಾಯಿಯನ್ನು ಅದರ ಮೇಲಿರಿಸಿ.
  4. ತಾವರೆ ಹೂವು ಸೇರಿದಂತೆ. ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ
  5. ಪೂಜೆಗೆ ಹಸಿರು ಬಣ್ಣದ ರವಿಕೆ ಬಟ್ಟೆ, ಹಸಿರು ಬಳೆ, ಐದು ಬಗೆಯ ಹಣ್ಣುಗಳು, ನೆವೇದ್ಯಕ್ಕೆ ಸಜ್ಜಿಗೆ ಅಥವಾ ಹೆಸರು ಬೆಳೆ ಪಾಯಸ ತಯಾರಿಸಿ ಇಡಿ.
  6. ನಿಮ್ಮ ಮನೆಯಲ್ಲಿ ಪುರೋಹಿತರು ಇಲ್ಲವೇ ನಿಮ್ಮ ಮನೆಯ ಹಿರಿಯರ ಮಾರ್ಗದರ್ಶನದಂತೆ ಪೂಜೆ ಮಾಡಿ.
  7. ವರಮಹಾಲಕ್ಷ್ಮೀ ಪೂಜೆಯಲ್ಲಿ ಶ್ಲೋಕಕ್ಕೆ ವಿಶೇಷ ಮಹತ್ವವಿದ್ದು ಬಹಳ ಮಂಗಳಕರವಾದ ಲಕ್ಷ್ಮೀ ಅಷ್ಟೋತ್ತರ ಮತ್ತು ಲಕ್ಷ್ಮೀ ಸಹಸ್ರನಾಮವನ್ನು ತಪ್ಪದೆ ಪಟಿಸುವುದು ಮರೆಯ ಬೇಡಿ.

ಪೂಜೆಯ ಸಮಯದಲ್ಲಿ ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು

  • ವರಮಹಾಲಕ್ಷ್ಮೀ ಪೂಜೆಯನ್ನು ಎಂದಿಗೂ ಒಂಟಿಯಾಗಿ ನೆರವೇರಿಸಕೂಡದು.
  • ಈ ಪೂಜೆಯಲ್ಲಿ ಭಾಗಿಯಾಗಲು ಯಾರನ್ನೂ ಬಲವಂತ ಮಾಡಕೂಡದು, ಅವರ ಸ್ವ ಇಚ್ಛೆಯಿಂದಲೇ ಪೂಜೆ ಮಾದಿವುದು ಉತ್ತಮ. ಏಕೆಂದರೆ ಈ ಪೂಜೆಯ ಫಲ ಕೇವಲ ಶ್ರದ್ದೆ, ಭಕ್ತಿ ಮತ್ತು ಸಂಪೂರ್ಣ ನಂಬಿಕೆಯಿರುವ ಮನಸ್ಸುಗಳಿಗೆ ಮಾತ್ರ ಸಲ್ಲುತ್ತದೆ.
  • ವರಮಹಾಲಕ್ಷ್ಮೀಯ ಪೂಜೆಯನ್ನು ಬಾಣಂತಿಯರು, ಅದರಲ್ಲೂ ಮಗುವಿಗೆ ಇನ್ನೂ ಇಪ್ಪತ್ತೆರಡು ದಿನ ತುಂಬದಿದ್ದಾಗ, ನೆರವೇರಿಸಬಾರದು.
  • ಹೆಂಗಳೆಯರು ಮಾಸಿಕ ರಜೆಯಲ್ಲಿದ್ದರೆ, ದಿನವನ್ನು ಬಿಟ್ಟು ಮುಂದಿನ ಶುಕ್ರವಾರ ಈ ಪೂಜೆಯನ್ನು ನೆರವೇರಿಸಬಹುದು.
  • ಅಂದಹಾಗೇ, ಸಮಸಂಖ್ಯೆಯಲ್ಲಿ ಎಂದಿಗೂ ಸಿಹಿತಿಂಡಿಗಳನ್ನು ಮಾಡಕೂಡದು. ಬೆಸಸಂಖ್ಯೆಯಲ್ಲಿ ಅಂದರೆ ಒಂದು, ಮೂರು, ಐದು, ಏಳು ಅಥವಾ ಒಂಬತ್ತು ವಿಧದ ಸಿಹಿತಿಂಡಿಗಳನ್ನೇ ತಯಾರಿಸಬೇಕು.

ಈ ಮೂಲಕ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವುದರಿಂದ ನಿಮ್ಮ ಮನೆ-ಮನಗಳಲ್ಲಿ ಲಕ್ಷ್ಮೀಯು ಕೃಪೆ ತೋರಿ, ಸಿರಿ-ಸಂಪತ್ತು, ನೆಮ್ಮದಿ, ಸುಖ-ಶಾಂತಿಗಳನ್ನು ನೀಡುತ್ತಾಳೆ ಎಂಬುದು ಹಿಂದಿನಿಂದಲೂ ಬಂದಿರುವ ನಂಬಿಕೆ.

ಹೀಗಾಗಿ ಈ ಮೇಲಿನ ನಿಯಮಗಳಂತೆ ಇಂದು ವರಮಹಾಲಕ್ಷ್ಮೀಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ.

Next Story

RELATED STORIES