Top

ಬಾಯಿ ಬಿಟ್ಟ ಭೂಮಿ, ಗೋಡೆ ಬಿರುಕು : ಆತಂಕದಲ್ಲಿ ಗ್ರಾಮಸ್ಥರು

ಬಾಯಿ ಬಿಟ್ಟ ಭೂಮಿ, ಗೋಡೆ ಬಿರುಕು : ಆತಂಕದಲ್ಲಿ ಗ್ರಾಮಸ್ಥರು
X

ಚಿಕ್ಕಮಗಳೂರು : ಕೇರಳ ಮತ್ತು ಕೊಡಗು ನೆರೆ ಹಾವಳಿಯ ಹೊಡೆತಕ್ಕೆ ಜನರು ತತ್ತರಿಸಿದ್ದಾರೆ. ಈ ಘಟನೆ ಹಸಿಯಾಗಿರುವಾಗಲೇ ಕಾಫಿ ನಾಡಿನಲ್ಲಿ, ಮತ್ತೊಂದು ಆತಂಕದ ಘಟನೆ ನಡೆಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ, ಸೋಮೇಶ್ವರಖಾನ್‌ ಗ್ರಾಮದಲ್ಲಿ, ಭೂಮಿ ಬಿರುಕು ಬಿಟ್ಟಿದೆ. ಈ ಗ್ರಾಮದಲ್ಲಿರುವ 8ಕ್ಕೂ ಹೆಚ್ಚು ಮನೆಗಳ ಗೋಡೆ ಬಿರುಕುಗೊಂಡಿವೆ.

ಇದಷ್ಟೇ ಅಲ್ಲದೇ ಇಲ್ಲಿನ ಭೂಮಿ ಸ್ವಲ್ಪ ಸ್ವಲ್ಪವೇ ಜರುಗುತ್ತಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು, ಮನೆ ಖಾಲಿ ಮಾಡಿ, ತಮ್ಮ ಪಾತ್ರೆ, ಸಾಮಾನುಗಳನ್ನು ಹೊರಗಿಟ್ಟು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

ಇನ್ನೂ ಕೆಲವರು ಮನೆ, ಭೂಮಿ ಬಿರುಕಿನ ಭಯಕ್ಕೆ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳುತ್ತಿರುವ ದೃಶ್ಯ ಎಲ್ಲೆಡೆ ಸರ್ವೇ ಸಾಮಾನ್ಯವಾಗಿದೆ. ಬಸ್ರೀಕಟ್ಟೆ, ಮೆಗುಂದ, ಸೋಮೇಶ್ವರಖಾನ್, ಕೂವೆ, ದೋಬ್ಲಾ ಗ್ರಾಮಗಳಲ್ಲಿ ಹೆಚ್ಚಿನ ಭೂ ಕುಸಿತ ಕಂಡುಬರುತ್ತಿದೆ.

ಹೀಗೆ ಆತಂಕದಲ್ಲಿ ಜನರು ದಿನ ದೂಡುತ್ತಿದ್ದರೂ, ಯಾವುದೇ ಒಬ್ಬ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಸೋಮೇಶ್ವರ, ಬಸ್ರೀಕಟ್ಟೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES