Top

ಸಕ್ರಿಯ ರಾಜಕಾರಣಕ್ಕೆ ಎಸ್ ಎಂ ಕೃಷ್ಣ ಗುಡ್ ಬೈ.?

ಸಕ್ರಿಯ ರಾಜಕಾರಣಕ್ಕೆ ಎಸ್ ಎಂ ಕೃಷ್ಣ ಗುಡ್ ಬೈ.?
X

ಬೆಂಗಳೂರು : ಕಳೆದ ಐದು ದಶಕಗಳಿಂದ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿ, ವಿವಿಧ ಹುದ್ದೆಗಳನ್ನು ಅಲಂಕರಿಸಿದ ರಾಜಕಾರಣಿ, ಎಸ್ ಎಂ ಕೃಷ್ಣ.

ಇದೀಗ ತೆರೆಮರೆಗೆ ಸರಿದಿರುವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ, ಸಕ್ರಿಯ ರಾಜಕಾರಣಕ್ಕೆ ಗುಡ್‌ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಎಸ್‌ ಎಂ ಕೃಷ್ಣ ಅವರ ಆಪ್ತರು, ಕುಟುಂಬ ಮೂಲಗಳು ಹೇಳುವಂತೆ ಸದ್ಯದಲ್ಲೇ ಅವರ ಆತ್ಮಚರಿತ್ರೆ ಬಿಡುಗಡೆಯಾಗಲಿದ್ದು, ಆನಂತ್ರ ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ವಿದಾಯ ಹೇಳಲಿದ್ದಾರೆ ಅಂತೆ.

ಅಂದಹಾಗೇ ರಾಜಕಾರಣದಲ್ಲಿ ಎಲ್ಲ ಪ್ರಮುಖ ಹುದ್ದೆಗಳನ್ನು ಅನುಭವಿಸಿ, ದೇಶದ ಕೆಲವೇ ಕೆಲವು ಅತ್ಯಂತ ಹಿರಿಯ ಸಂಸದೇಯ ಪಟುಗಳಲ್ಲಿ ಒಬ್ಬರಾಗಿರುವ ಎಸ್‌ ಎಂ ಕೃಷ್ಣ, ಅವರಿಗೆ ಸದ್ಯ ರಾಜಕೀಯ ಪರಿಸ್ಥಿತಿಗಳು ತಾಳೆಯಾಗುತ್ತಿಲ್ಲ.

ಈ ಹಿನ್ನಲೆಯಲ್ಲಿ ರಾಜಕಾರಣಕ್ಕೆ ವಿದಾಯ ಹೇಳುವ ಮೂಲಕ ವಿಶ್ರಾಂತ ಜೀವನ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಇನ್ನೂ ಸ್ಪಷ್ಟವಾದ ಮಾಹಿತಿ ಹೊರಬಿದ್ದಾಗಲೇ ತಿಳಲಿದೆ.

ಇನ್ನೂ ಕಾಂಗ್ರೆಸ್‌ ಬಿಟ್ಟ ಮೇಲೆ ಕಮಲ ಕೈಹಿಡಿದ ಸಂದರ್ಭದಲ್ಲಿ ಎಸ್‌ ಎಂ ಕೃಷ್ಣ ಅವರಿಗೆ ಪ್ರಮುಖ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು.

ಉಪರಾಷ್ಟ್ರಪತಿ ಹುದ್ದೆಯಿಂದ ಹಿಡಿದು ಕೇಂದ್ರ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ರಾಜಕೀಯ ವಲಯದಲ್ಲಿ ಸುದ್ದಿ ಹಬ್ಬಿತ್ತು. ಆದರೇ ಬಿಜೆಪಿಯಿಂದ ಯಾವುದೇ ಅಂತಹ ಹುದ್ದೆ ಸಿಗಲಿಲ್ಲ.

ಈ ಎಲ್ಲಾ ಹಿನ್ನಲೆಯಲ್ಲಿ ಹಿರಿಯ ರಾಜಕಾರಣಿ, ಸಂಸದೀಯ ಮುತ್ಸದ್ದಿ ಎಸ್ ಎಂ ಕೃಷ್ಣ ರಾಜಕೀಯಕ್ಕೆ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಕಾದು ನೋಡಬೇಕಿದೆ.

Next Story

RELATED STORIES