ಶಿರಾಡಿಘಾಟ್ ರಸ್ತೆ ದುರಸ್ಥಿ : ಸಚಿವ ಹೆಚ್ ಡಿ ರೇವಣ್ಣಗೆ ಸದಾನಂದಗೌಡ ಪತ್ರ

ಬೆಂಗಳೂರು : ಬೆಂಗಳೂರು-ಮಂಗಳೂರು ನಡುವಿನ ಸಂಪರ್ಕ ಸೇತುವೆ ಶಿರಾಡಿಘಾಟ್. ಇಂತಹ ಸಂಪರ್ಕ ರಸ್ತೆ ಗುಡ್ಡ ಕುಸಿತಗೊಂಡು ಸಂಪರ್ಕ ಕಡಿತಗೊಂಡಿತ್ತು.
ಈ ರಸ್ತೆ ಮಾರ್ಗ ದುರಸ್ಥಿಗೊಳಿಸಿ ಪುನಃ ಸಂಚಾರಮುಕ್ತಗೊಳಿಸಲು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕೊಡಗು ಹಾಗು ಕರಾವಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಶಿರಾಡಿಘಾಟ್ ನಲ್ಲಿ ಮತ್ತೆ ರಸ್ತೆ ಸಂಚಾರ ಸ್ಥಗಿತವಾಗಿದೆ. ಇತ್ತೀಚೆಗೆ ಉದ್ಘಾಟನೆಯಾಗಿತ್ತು, ಇದೀಗ ಗುಡ್ಡ ಕುಸಿತದಿಂದ ಸಂಚಾರಕ್ಕೆ ತೊಂದರೆಯಾಗಿದೆ.
ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಒಂದು ವಾರದಲ್ಲಿ ರಸ್ತೆಯನ್ನು ದುರಸ್ಥಿಗೊಳಿಸಬಹುದಾಗಿದೆ. ಕೂಡಲೇ ರಸ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳುವಂತೆ ಡಿ ವಿ ಸದಾನಂತಗೌಡ ಪತ್ರ ಬರೆದಿದ್ದಾರೆ.
ನೆರೆಯಿಂದ ಸಂತ್ರಸ್ಥರಾದವರ ಹಾಗು ತೊಂದರೆಗೆ ಸಿಲುಕಿರುವವರ ಕುಟುಂಬದವರು ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಇದ್ದಾರೆ.ಆದರೆ ತೊಂದರೆಗೊಳಗಾಗಿರುವ ತಮ್ಮ ಕುಟುಂಬದವರ ನೆರವಿಗೆ ದಾವಿಸದ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿಗೆ ಬರುವ ರಸ್ತೆ,ರೈಲು ಸಂಪರ್ಕ ಕಡಿತಗೊಂಡಿದೆ. ಇದ್ದದ್ದು ಶಿರಾಡಿಘಾಟ್ ಮಾತ್ರ. ಅದೂ ಕೂಡ ಹೀಗಾಗಿದೆ. ಆದ್ದರಿಂದ ಕೂಡಲೇ ಶಿರಾಡಿಘಾಟ್ ದುರಸ್ಥಿಗೊಳಿಸಿ ಕರಾವಳಿ ಭಾಹದ ಜನರಿಗೆ ಅನುಕುಇಲ ಮಾಡಿಕೊಡಬೇಕು, ಮುತುವರ್ಜಿ ವಹಿಸಿ ದುರಸ್ಥಿ ಕಾರ್ಯ ನಡೆಸಬೇಕು ಎಂದು ಸಚಿವ ಹೆಚ್.ಡಿ ರೇವಣ್ಣಗೆ ಸದಾನಂದಗೌಡ ಮನವಿ ಮಾಡಿದ್ದಾರೆ.
- Bjp Karnataka central minister d v sadananda gowda d v sadananda gowda dvs kannada news today karnataka news today karnataka politics latest karnataka news road condition Shiradi Ghat topnews tv5 kannada tv5 kannada live tv5 kannada news tv5 live ಬೆಂಗಳೂರು-ಮಂಗಳೂರು ಸಂಪರ್ಕ ರಸ್ತೆ ಶಿರಾಡಿಘಾಟ್ ಶಿರಾಡಿಘಾಟ್ ರಸ್ತೆ ದುರಸ್ಥಿ