Top

ರಾಷ್ಟ್ರೀಕೃತ ಬ್ಯಾಂಕ್​ಗಲ್ಲಿನ ರೈತರ ಸಾಲಮನ್ನ: ಸರಕಾರ ಘೋಷಣೆ

ರಾಷ್ಟ್ರೀಕೃತ ಬ್ಯಾಂಕ್​ಗಲ್ಲಿನ ರೈತರ ಸಾಲಮನ್ನ: ಸರಕಾರ ಘೋಷಣೆ
X

ರಾಷ್ಟ್ರೀಕೃತ ಬ್ಯಾಂಕ್​ ಗಳಲ್ಲಿನ ರೈತರ ಮೇಲಿನ ಸಾಲಮನ್ನಾ ಘೋಷಿಸುವ ಮೂಲಕ ರಾಜ್ಯ ಸರಕಾರ ವರಮಹಾಲಕ್ಷ್ಮೀ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಿದೆ.

ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ರೈತರ 2 ಲಕ್ಷದವರೆಗಿನ ಸಾಲಮನ್ನ ಮಾಡಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಚಾಲ್ತಿ ಸಾಲ ಇರುವವರಿಗೆ 25 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು.

ಸಾಲಮನ್ನಾದಿಂದ 32 ಸಾವಿರ ಕೋಟಿ ರೂ. ಸರಕಾರದ ಮೇಲೆ ಹೊರೆ ಬೀಳಲಿದೆ. ರಾಷ್ಟ್ರೀಯ ಬ್ಯಾಂಕ್​ಗಳು ಸಾಲಮನ್ನಾದಿಂದ ಹಿಂದೆ ಸರಿದಿದ್ದವು. ಆದರೂ ನಾಲ್ಕು ಕಂತುಗಳಲ್ಲಿ ರೈತರ ಸಾಲಮನ್ನಾದ ಪಾವತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

ಸಾಲಮನ್ನಾ ಕುರಿತು ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ನಾಲ್ಕು ಕಂತಗಳ ಪೈಕಿ 2018-19ರಲ್ಲಿ 6500 ಕೋಟಿ ರೂ., 2019-20ರಲ್ಲಿ 8,650 ಕೋಟಿ ರೂ., 2020-21ರಲ್ಲಿ 7859 ಕೋಟಿ ರೂ. ಹಾಗೂ 2021-22ರಲ್ಲಿ 7131 ಕೋಟಿ ರೂ. ಸಾಲಮನ್ನದ ಮೊತ್ತ ಪಾವತಿಸಲಾಗುವುದು. ಈ ಪ್ರಸ್ತಾಪವನ್ನು ಬ್ಯಾಂಕ್​ಗಳು ಒಪ್ಪಿಕೊಂಡಿದ್ದು, ಶೇ.12ರಷ್ಟು ಬಡ್ಡಿಯನ್ನು ಸರಕಾರವೇ ಭರಿಸಲಿದೆ ಎಂದು ಪರಮೇಶ್ವರ್ ಹೇಳಿದರು.

ಸರಕಾರದ ಈ ನಿರ್ಧಾರದಿಂದ 32 ಲಕ್ಷದ 10 ಸಾವಿರ ರೈತರಿಗೆ ನೆರವಾಗಲಿದೆ. ರೈತರಿಗೆ ಋಣಮುಕ್ತ ಪತ್ರ ನೀಡಲು ಬ್ಯಾಂಕ್​ಗಳು ಒಪ್ಪಿವೆ. ಸಾಲಮನ್ನಾಗೆ ಬಿಜೆಪಿ ಅಡ್ಡಗಾಲು ಹಾಕಿದ್ದರಿಂದ ಇಷ್ಟೆಲ್ಲಾ ಸಮಸ್ಯೆ ಆಯಿತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು.

Next Story

RELATED STORIES