Top

ಸ್ವಗ್ರಾಮಗಳತ್ತ ನೆರೆ ಸಂತ್ರಸ್ತರ ಪಯಣ

ಕೊಡಗು : ಮಳೆ ಇಳಿಮುಖವಾಗಿದ್ದರಿಂದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿದ್ದವರು ತಮ್ಮ ಸ್ವಗ್ರಾಮಗಳಿಗೆ ಪಯಣಿಸುತ್ತಿದ್ದಾರೆ. ಛಿದ್ರವಾಹಿರುವ ಬದುಕನ್ನು ಕಟ್ಟಿಕೊಳ್ಳಲು ತೊಡಗಿದ್ದಾರೆ.

ಮಡಿಕೇರಿಯಲ್ಲಿ ದೇವರಕೊಲ್ಲಿ, ಕೊಯನಾಡು, ಅರೆಕಲ್ಲು ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದ ಭೂ ವಿಜ್ಞಾನಿಗಳು, ಇದು ಸುರಕ್ಷಿತ ವಲಯ ಎಂದು ಗುರುತಿಸಲಾಗಿದೆ.

ಈ ಹಿನ್ನಲೆಯಲ್ಲಿ ಈ ಭಾಗದ ಸಂತ್ರಸ್ತರನ್ನು ಶಿಬಿರಗಳಿಂದ ಮನೆಗಳಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಹಲವು ಕುಟುಂಬಗಳು ಮನೆಗಳಿಗೆ ಮರಳಿವೆ.

ಜೋಡುಪಾಲದ ಪರಿಸ್ಥಿತಿ ಇನ್ನೂ ವಿಷಮವಾಗಿದ್ದು, ಅಲ್ಲಿರುವವರನ್ನು ಶಿಬಿರಗಳಲ್ಲೇ ಉಳಿಸಿಕೊಳ್ಳಲಾಗಿದೆ. ನಿರಾಶ್ರಿತರ ಕೇಂದ್ರದಲ್ಲೇ ಸದ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿ, ಪರಿಸ್ಥಿತಿ ಹತೋಟಿಗೆ ಬರುವವರೆಗೆ ಉಳಿಸಿಕೊಳ್ಳಲಾಗಿದೆ.

ಇನ್ನೂ ಅರಂತೋಡಿನಲ್ಲಿದ್ದ 48 ಮಂದಿ ಶಾಲಾಮಕ್ಕಳ ಪೈಕಿ, 18 ಮಕ್ಕಳನ್ನು ಅರಂತೋಡು ಸರ್ಕಾರಿ ಶಾಲೆಗೆ, 6 ಮಕ್ಕಳನ್ನು ತೆಕ್ಕಿಲ್‌ ಶಾಲೆಗೆ ಸೇರಿಸಲಾಗಿದೆ.

9 ವಿದ್ಯಾರ್ಥಿಗಳು ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳು ಇನ್ನಷ್ಟೇ ಶಿಕ್ಷಣದ ಅವಕಾಶ ಪಡೆಯಬೇಕಾಗಿದೆ.

ಕಲ್ಲುಗುಂಡಿಯಲ್ಲಿರುವ 35 ಶಾಲಾ ಮಕ್ಕಳ ಪೈಕಿ, ಹಲವರಿಗೆ ಅಲ್ಲಿಯೇ ಶಾಲೆಯಲ್ಲಿ ಮತ್ತು ಕೆಲವರಿಗೆ ಇತರೆ ಶಾಲೆಗಳಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಲಾಗಿದೆ.

Next Story

RELATED STORIES