Top

ಏಷ್ಯನ್‌ ಗೇಮ್ಸ್‌ : ಬೆಳ್ಳಿ ಗೆದ್ದ 15 ವರ್ಷದ ಯುವ ಶೂಟರ್ ಶಾರ್ದೂಲ್

ಏಷ್ಯನ್‌ ಗೇಮ್ಸ್‌ : ಬೆಳ್ಳಿ ಗೆದ್ದ 15 ವರ್ಷದ ಯುವ ಶೂಟರ್ ಶಾರ್ದೂಲ್
X

ಜಕಾರ್ತ: ಪ್ರತಿಷ್ಠಿತ ಏಷ್ಯನ್ ಗೇಮ್ಸ್‍ನಲ್ಲಿ ಭಾರತದ ಶೂಟರ್‍ಗಳು ಪದಕ ಬೇಟೆಯನ್ನ ಮುಂದುವರೆಸಿದ್ದು ಪುರುಷರ ಡಬಲ್ ಟ್ರ್ಯಾಪ್‍ನಲ್ಲಿ 15 ವರ್ಷದ ಶಾರ್ದೂಲ್ ವಿಹಾನ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಇದೇ ಮೊದಲ ಬಾರಿ ಏಷ್ಯನ್ ಗೇಮ್ಸ್ ಪ್ರತಿನಿಧಿಸಿದ ಶಾರ್ದೂಲ್ ವಿಹಾನ್ ಡಬಲ್ ಟ್ರ್ಯಾಪ್‍ನಲ್ಲಿ 73 ಅಂಕ ಪಡೆದರು.

ಮೊನ್ನೆಯಷ್ಟೆ 16 ವರ್ಷದ ಶೂಟರ್ ಸೌರಭ್ ಚೌಧರಿ ಚಿನ್ನ ಗೆದ್ದು ದಾಖಲೆ ಬರೆದಿದ್ದರು.

ಇದೀಗ ಸೌರಭ್‍ಗಿಂತ ಒಂದು ವರ್ಷ ಚಿಕ್ಕವನಾದ ಶಾರ್ದೂಲ್ ಬೆಳ್ಳಿ ಪದಕ ಗೆದ್ದು ಮತ್ತೊಂದು ಅಚ್ಚರಿ ನೀಡಿದ್ದಾರೆ.

https://twitter.com/narendramodi/status/1032576991323713537

ಪ್ರಧಾನಿ ನರೇಂದ್ರ ಮೋದಿ, ಟ್ವಿಟ್‌ ಮಾಡಿದ್ದು, ಶಾರ್ದೂಲ್‌ ಬೆಳ್ಳಿ ಪದಕ ಗೆದ್ದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Next Story

RELATED STORIES