ಕೊಡಗು ನೆರೆ ಪರಿಹಾರ ಕಾರ್ಯಾಚರಣೆಗೆ ಅಧಿಕಾರಿಗಳ ತಂಡ ರಚನೆ
TV5 Kannada24 Aug 2018 11:04 AM GMT
ಬೆಂಗಳೂರು: ನೆರೆಹಾವಳಿಯಿಂದ ತತ್ತಗೊಂಡಿರುವ ಕೊಡಗು ಜಿಲ್ಲೆಯಲ್ಲಿ ನಡೆಯಲಿರುವ ಪರಿಹಾರ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸಲು 2017ನೇ ಬ್ಯಾಚ್ ನ 9 ಪ್ರೊಬೇಷನರಿ ಐಎಎಸ್ ಅಧಿಕಾರಿಗಳ ತಂಡವನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
9 ಅಧಿಕಾರಿಗಳು ಇಂದಿನಿಂದಲೇ ಜಾರಿಗೆ ಬರುವಂತೆ 15 ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಕೈಗೊಳ್ಳುವ ಪರಿಹಾರ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಳ್ಳುವಂತೆ ನಿಯೋಜನೆ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಕಾರ್ಯಾಚರಣೆಗೆ ನೇಮಕಗೊಂಡ ಅಧಿಕಾರಿಗಳು
- ಕೆ.ಆರ್.ನಂದಿನಿ
- ಶೇಖ್ ತನ್ವೀರ್ ಆಸಿಫ್
- ಡಾ.ವೈ ನವೀನ್ ಭಟ್
- ಅಕ್ಷಯ್ ಶ್ರೀಧರ್
- ಡಾ.ದಿಲೀಶ್ ಸಸಿ
- ಡಾ.ಕೆ.ನಂದಿನಿದೇವಿ
- ಎಂ.ಪ್ರಿಯಾಂಗ
- ಎಲ್.ಎಸ್.ಸುಧಾಕರ್
- ಭನ್ವರ್ ಸಿಂಗ್ ಮೀನಾ
ಈ ಮೇಲಿನ 2017 ಬ್ಯಾಚ್ ಐಎಎಸ್ ಪ್ರೊಬೇಷನರಿ ಅಧಿಕಾರಿಗಳನ್ನು ಕೊಡಗು ಉಸ್ತುವಾರಿ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಈ ತಂಡಕ್ಕೆ, ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ ಅವರನ್ನ ಉಸ್ತುವಾರಿ ತಂಡದ ಸಮನ್ವಯಕಾರರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಲಾಗಿದೆ.
Next Story