Top

ಏಷ್ಯನ್ ಗೇಮ್ಸ್: ಬೋಪಣ್ಣ-ಡಿವಿಜ್ ಜೋಡಿಗೆ ಚಿನ್ನ

ಏಷ್ಯನ್ ಗೇಮ್ಸ್: ಬೋಪಣ್ಣ-ಡಿವಿಜ್ ಜೋಡಿಗೆ ಚಿನ್ನ
X

ಕೊಡಗಿನ ಕಲಿ ರೋಹನ್ ಬೋಪಣ್ಣ ಮತ್ತು ಡಿವಿಜ್ ಶರಣ್ ಜೋಡಿ ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆನಿಸ್​ನಲ್ಲಿ ಭಾರತಕ್ಕೆ 2 ಪದಕ ಲಭಿಸಿದಂತಾಗಿದೆ.

ಶುಕ್ರವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್​ನಲ್ಲಿ ರೋಹನ್ ಬೋಪಣ್ಣ ಮತ್ತು ಡಿವಿಜ್ ಶರಣ್ ಜೋಡಿ 6-3, 6-4 ನೇರ ಸೆಟ್​ಗಳಿಂದ ಕಜಕಿಸ್ತಾನದ ಅಲೆಗ್ಸಾಂಡರ್ ಬುಬ್ಲಿಕ್ ಮತ್ತು ಡೆನಿಸ್ ಯೆವ್ಸೆವ್ ಜೋಡಿಯನ್ನು ಮಣಿಸಿತು.

ಇದು ಟೆನಿಸ್​ನಲ್ಲಿ ಭಾರತಕ್ಕೆ 2ನೇ ಪದಕವಾಗಿದೆ. ಒಟ್ಟಾರೆ ಭಾರತದ ಪದಕ 22ಕ್ಕೇರಿದೆ. ಇದರಲ್ಲಿ 6 ಚಿನ್ನ, 4 ಬೆಳ್ಳಿ ಹಾಗೂ 12 ಕಂಚಿನ ಪದಕ ಸೇರಿವೆ.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್​ನಲ್ಲಿ ರೋಹನ್- ಡಿವಿಜ್ ಜೋಡಿ 4-6, 6-3, 10-8ರಿಂದ ಜಪಾನ್​ನ ಕೈಕೊ ಯುಸೆಗಿ ಮತ್ತು ಶೋ ಶಿಮಬುಕುರು ವಿರುದ್ಧ ಗೆಲುವು ಸಾಧಿಸಿದ್ದರು.

Next Story

RELATED STORIES