Top

ಮೋದಿ ತಬ್ಬಿಕೊಂಡಿದ್ದರ ಹಿಂದಿನ ಉದ್ದೇಶ ಬಹಿರಂಗಪಡಿಸಿದ ರಾಹುಲ್!

ಮೋದಿ ತಬ್ಬಿಕೊಂಡಿದ್ದರ ಹಿಂದಿನ ಉದ್ದೇಶ ಬಹಿರಂಗಪಡಿಸಿದ ರಾಹುಲ್!
X

ಚಳಿಗಾಲದ ಸಂಸತ್​ ಅಧಿವೇಶನದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡ ವಿವಾದಾತ್ಮಕ ನಡೆಯ ಹಿಂದಿನ ಉದ್ದೇಶವನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.

ಜರ್ಮನಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ರಾಹುಲ್, ಸಂಸತ್​ನಲ್ಲಿ ನಾನು ಅವರನ್ನು ತಬ್ಬಿಕೊಂಡಿದ್ದರಿಂದ ಅವರಿಗೇನು ಆಘಾತವಾಯಿತು. ಅವರಿಗೆ ಇದು ಇಷ್ಟವೂ ಆಗಲಿಲ್ಲ. ನಮ್ಮ ಪಕ್ಷದ ಕೆಲವು ಸದಸ್ಯರೇ ಇದನ್ನು ಆಕ್ಷೇಪಿಸಿದರು ಎಂದರು.

ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗಲೆಲ್ಲಾ ತಮ್ಮ ವಿರುದ್ಧ ದ್ವೇಷದ ಮಾತುಗಳನ್ನು ಆಡಿದ್ದಾರೆ. ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ದ್ವೇಷ ಕೊನೆಗಾಣಿಸಬೇಕಾದರೆ ದ್ವೇಷದಿಂದ ಪ್ರತಿಕ್ರಿಯೆ ನೀಡುವುದು ಒಳ್ಳೆಯದಲ್ಲ. ಪ್ರೀತಿ-ವಿಶ್ವಾಸದಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಮೋದಿ ಅವರನ್ನು ತಬ್ಬಿಕೊಂಡು ಅವರಲ್ಲಿನ ದ್ವೇಷದ ಭಾವನೆ ಕಡಿಮೆ ಮಾಡಲು ಪ್ರಯತ್ನಿಸಿದೆ ಎಂದು ರಾಹುಲ್ ಗಾಂಧಿ ವಿವರಿಸಿದ್ದಾರೆ.

ದ್ವೇಷಕ್ಕೆ ದ್ವೇಷದಿಂದಲೇ ಪ್ರತಿಕ್ರಿಯೆ ನೀಡುವುದು ಮೂರ್ಖತನ. ಇದರಿಂದ ಯಾವ ಸಮಸ್ಯೆಯೂ ಪರಿಹಾರ ಆಗುವುದಿಲ್ಲ. ದ್ವೇಷವನ್ನು ನಿಯಂತ್ರಿಸಬೇಕು ಎಂದರೆ ಅದು ಪ್ರೀತಿ-ವಿಶ್ವಾಸದಿಂದ ಮಾತ್ರ ಸಾಧ್ಯ. ಈ ಜಗತ್ತಿನಲ್ಲಿ ಪ್ರೀತಿಸುವವರು ಸಾಕಷ್ಟು ಜನರಿದ್ದಾರೆ. ಮೋದಿ ನನ್ನ ವಿರುದ್ಧ ದ್ವೇಷದ ಮಾತುಗಳನ್ನು ಆಡಿರಬಹುದು. ಆದರೆ ನಾನು ಅವರನ್ನು ದ್ವೇಷಿಸಲಾರೆ ಎಂದು ರಾಹುಲ್ ಹೇಳಿದರು.

ಇದೇ ವೇಳೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡುವ ಪ್ರಯತ್ನ ಆಗಿಲ್ಲ. ಗುಂಪು ಹಲ್ಲೆ, ಕೊಲೆಗಳನ್ನು ತಡೆಗಟ್ಟಲು ಆಗಿಲ್ಲ. ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚು ಮಾಡುವ ಪ್ರಯತ್ನಗಳು ಆಗಿಲ್ಲ. ಇದರಿಂದ ದೇಶದಲ್ಲಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ರಾಹಲ್ ಮೋದಿ ಅವರ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Next Story

RELATED STORIES