Top

ರಾಜ್ಯಾದ್ಯಂತ ಮಡಿಲು ಕಿಟ್‌ ವಿತರಣೆ ಸ್ಥಗಿತ.?

ರಾಜ್ಯಾದ್ಯಂತ ಮಡಿಲು ಕಿಟ್‌ ವಿತರಣೆ ಸ್ಥಗಿತ.?
X

ಬೆಳಗಾವಿ : ರಾಜ್ಯಾದ್ಯಂತ ಲಕ್ಷಾಂತರ ಬಡವರಿಗೆ ಆಸರೆಯಾಗಿದ್ದ ಮಡಿಲು ಕಿಟ್ ವಿತರಣೆ ಸ್ಥಗಿತವಾಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ 24 ಗಂಟೆಯಲ್ಲಿ ಉಚಿತವಾಗಿ ಮಡಿಲು ಕಿಟ್ ನೀಡಲಾಗುತ್ತಿತ್ತು. ತಾಯಿ ಮತ್ತು ಮಗುವಿನ ಸಂರಕ್ಷಣೆಗಾಗಿ ಮಡಿಲು ಕಿಟ್ ಯೋಜನೆಯಡಿ 19 ಸಾಮಗ್ರಿಗಳನ್ನ ನೀಡಲಾಗುತ್ತಿತ್ತು... ಆದ್ರೆ ಸರ್ಕಾರದ ದಿವ್ಯ ನಿರ್ಲಕ್ಷತನದಿಂದ ಕಳೆದ ಎರಡು ವರ್ಷದಿಂದ ಯೋಜನೆಗೆ ಅನುದಾನ ನೀಡದೆ ಇರುವುದರಿಂದ ಬಡವರ ಯೋಜನೆ ಸಂಪೂರ್ಣ ಹಳ್ಳ ಹಿಡದಿದೆ.

ಹೌದು... ನಮ್ಮ ಸರ್ಕಾರಗಳು ಅದೇಷ್ಟೋ ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನ ಜಾರಿಗೊಳಿಸುತ್ತವೆ. ಆ ಯೋಜನೆಗೆ ಅನುದಾನ ನೀಡದೆ ಬಡವರ ಯೋಜನೆ ಹಳ್ಳ ಹಿಡಿಯುವಂತೆ ಮಾಡುತ್ತಾರೆ. ರಾಜ್ಯದಲ್ಲಿ 2007ರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ತಕ್ಷಣವೇ ಮಡಿಲು ಕಿಟ್ ವಿತರಿಸುವ ಯೋಜನೆ ಜಾರಿಗೊಳಿಸಲಾಗಿತ್ತು.. ಮಡಿಲು ಕಿಟ್ ಯೋಜನೆ ಉದ್ದೇಶ ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ ಬಡ ಕುಟುಂಬಗಳಿಗೆ ನೀಡಲಾಗುತ್ತಿತ್ತು..

ಈ ಕಿಟ್ನಲ್ಲಿ ಜಮಖಾನಾ, ತಾಯಿ ಮಗುವಿಗೆ ತಲಾ ಎರಡು ಬೆಡಶೀಟ್, ಟವೆಲ್, ಸ್ಯಾನಿಟರಿ ಪ್ಯಾಡ್, ಸೊಳ್ಳೆ ಪರದೆ ಸೇರಿ ಒಟ್ಟು 19 ಸಾಮಗ್ರಿಗಳನ್ನ ನೀಡಲಾಗುತ್ತಿತ್ತು.. ಆದ್ರೆ ಕಳೆದ ಎರಡೂ ವರ್ಷದಿಂದ ಈ ಮಡಿಲು ಕಿಟ್ ವಿತರಣೆ ಸ್ಥಗಿತವಾಗಿದೆ. ಬೆಳಗಾವಿ ಜಿಲ್ಲಾಸ್ಪತ್ರೆಗಳಲ್ಲಿ ಮಡಿಲು ಕಿಟ್ ಲಭ್ಯವಿಲ್ಲ ಎಂಬ ನಾಮಫಲಕಗಳನ್ನ ಗೋಡೆಗೆ ಅಂಟಿಸಲಾಗಿದೆ.

ಇನ್ನು ಸರ್ಕಾರ ಈ ಮಡಿಲು ಕಿಟ್ ಯೋಜನೆ ತುಂಬಾ ಜನಪ್ರೀಯವಾಗಿತ್ತು. ಒಂದು ಮಡಿಲು ಕಿಟ್‌ಗಾಗಿ ಸರ್ಕಾರ 1600 ರುಪಾಯಿ ವೆಚ್ಚ ಮಾಡುತ್ತಿತ್ತು... ರಾಜ್ಯಾಧ್ಯಂತ ಲಕ್ಷಾಂತರ ಬಡ ಕುಟುಂಬದವರಿಗೆ ಈ ಯೋಜನೆ ಆಸರೆಯಾಗಿತ್ತು. ಆದ್ರೆ ಕಳೆದ 2 ವರ್ಷದಿಂದ ಮಡಿಲು ಕಿಟ್ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿಲ್ಲ...

ಯಾಕೇ ಕೊಡ್ತಿಲ್ಲಾ ಅಂತಾ ಅಧಿಕಾರಿಗಳನ್ನ ಕೇಳಿದ್ರೆ... ಸರ್ಕಾರದಿಂದ ನಮಗೆ ಮಡಿಲು ಕಿಟ್ ಪೂರೈಕೆ ಆಗಿಲ್ಲ. 2016ರ ವರೆಗೂ ಪೂರೈಕೆ ಆದ ಮಡಿಲು ಕಿಟಗಳನ್ನ ಈವರೆಗೆ ವಿತರಿಸಲಾಗಿದೆ. ಯಾಕೇ ಎರಡು ವರ್ಷದಿಂದ ಮಡಿಲು ಕಿಟ್ ಪೂರೈಕೆ ಮಾಡಲಾಗುತ್ತಿಲ್ಲ ಎನ್ನುವುದರ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಬೆಳಗಾವಿ ಡಿಎಚ್ಒ ಟಿವಿ5ಗೆ ಹೇಳಿ ಮಾತು.

ಆದ್ರೆ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗುಣಮಟ್ಟದ ಕೊರತೆಯಿಂದ ಈ ಯೋಜನೆಯನ್ನ ಸ್ಥಗೀತಗೊಳಿಸಾಗಿದೆ.. ಯಾಕೇ ಮಡಿಲು ಕಿಟ್ ನೀಡುತ್ತಿಲ್ಲಾ ಎಂದು ಯಾರನ್ನೆ ಪ್ರಶ್ನಿಸಿದ್ರು ಅವರ ಬಳಿ ಉತ್ತರವಿಲ್ಲ... ಎಲ್ಲರೂ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎನ್ನುತ್ತಾರೆ ಗರ್ಭಿಣಿಯರು.

ಒಟ್ಟ್ನಲ್ಲಿ ಬಡವರಿಗೆ ಆಸರೆಯಾಗಿದ್ದ ಜನಪ್ರೀಯ ಮಡಿಲು ಕಿಟ್ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ.. ಕಳಪೆ ಗುಣಮಟ್ಟದ ಹೆಸರಿನಲ್ಲಿ ಯೋಜನೆಯನ್ನ ಸ್ಥಗಿತಗೊಳಿಸುವುದು ಎಷ್ಟು ಸರಿ ಎಂದು ಜನರು ಸರ್ಕಾರವನ್ನ ಪ್ರಶ್ನೆ ಮಾಡುತ್ತಿದ್ದಾರೆ.. ಇನ್ನಾದ್ರು ಸಮ್ಮಿಶ್ರ ಸರ್ಕಾರ ಬಡವರ ಹಿತಕ್ಕಾಗಿ ಮತ್ತೆ ಮಡಿಲು ಕಿಟ್ ವಿತರಿಸುವ ಕೆಲಸಕ್ಕೆ ಮುಂದಾಗ್ಬೇಕಿದೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ

Next Story

RELATED STORIES