ಇಂಗ್ಲೆಂಡ್ ವಿರುದ್ಧದ 2 ಟೆಸ್ಟ್ಗೆ ಪೃಥ್ವಿ ಶಾ, ಹನುಮ ವಿಹಾರಿಗೆ ಬುಲಾವ್

ಭಾರತಕ್ಕೆ ಕಿರಿಯರ ವಿಶ್ವಕಪ್ ತಂದುಕೊಟ್ಟ, ರನ್ ಮಷಿನ್ ಪೃಥ್ವಿ ಶಾ ಹಾಗೂ ಆಲ್ರೌಂಡರ್ ಹನುಮ ವಿಹಾರಿ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಭಾರತ 203 ರನ್ಗಳ ಭಾರೀ ಅಂತರದಿಂದ ಗೆದ್ದುಕೊಂಡಿತ್ತು. ಇದರ ಬೆನ್ನಲ್ಲೇ ಸಭೆ ಸೇರಿದ ಬಿಸಿಸಿಐ ಆಯ್ಕೆ ಸಮಿತಿ, ಪೃಥ್ವಿ ಶಾ ಹಾಗೂ ಹನುಮ ವಿಹಾರಿ ಅವರನ್ನು ಇಂಗ್ಲೆಂಡ್ ವಿರುದ್ಧದ ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಿದೆ.
ಆರಂಭಿಕ ಬ್ಯಾಟ್ಸ್ ಮನ್ ಮುರಳಿ ವಿಜಯ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ವೈಫಲ್ಯ ಅನುಭವಿಸಿದರೆ, ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯದಿಂದ ಕೊಕ್ ನೀಡಲಾಗಿತ್ತು. ಸ್ಪಿನ್ನರ್ ಕುಲದೀಪ್ ಯಾದವ್ ಸಿಕ್ಕ ಒಂದು ಅವಕಾಶದಲ್ಲಿ ವಿಫಲರಾಗಿದ್ದರಿಂದ ಅವರನ್ನು ತಂಡದಿಂದ ವಾಪಸ್ ಕರೆಸಿಕೊಳ್ಳಲಾಗಿದೆ.
ಆರ್.ಅಶ್ವಿನ್ ತಂಡದಲ್ಲಿ ಇರುವ ಏಕೈಕ ಸ್ಪಿನ್ನರ್ ಆಗಿದ್ದು, ಹನುಮ ವಿಹಾರಿ ಆಲ್ರೌಂಡರ್ ಆಗಿ ತಂಡದ 11 ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಅಶ್ವಿನ್ ಪೃಷ್ಠ ನೋವಿನಿಂದ ಬಳಲುತ್ತಿದ್ದು, ಆಗಸ್ಟ್ 30ರಿಂದ ಆರಂಭವಾಗುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
18 ವರ್ಷದ ಪೃಥ್ವಿ ಶಾ ನೇತೃತ್ವದಲ್ಲಿ ಭಾರತ ಎ ತಂಡ ಕಳೆದ ಫೆಬ್ರವರಿಯಲ್ಲಿ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಆಲ್ರೌಂಡರ್ ಹನುಮ ವಿಹಾರಿ ಉತ್ತಮ ಪ್ರದರ್ಶನ ನೀಡಿದ್ದರು. 24 ವರ್ಷದ ಹನುಮ ವಿಹಾರಿ 64 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅನುಭವ ಪಡೆದಿದ್ದಾರೆ.