Top

ಸ್ವಕ್ಷೇತ್ರದ ಜನರಿಗಾಗಿ ಸಿದ್ದು 100ಕ್ಕೂ ಹೆಚ್ಚು ಪತ್ರ

ಸ್ವಕ್ಷೇತ್ರದ ಜನರಿಗಾಗಿ ಸಿದ್ದು 100ಕ್ಕೂ ಹೆಚ್ಚು ಪತ್ರ
X

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ತಮ್ಮನ್ನು ಅರಸಿ ಬರುತ್ತಿರುವ ಜನರಿಗೆ, ನೆರವಾಗಲು ಅಧಿಕಾರಿಗಳಿಗೆ ತಲೆ ನೋವು ಸೃಷ್ಠಿಸುವ ರೀತಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ.

ಹೀಗಾಗಿ ಅಚ್ಚರಿ ಮೂಡಿಸುವಂತೆ, ಮಾಜಿ ಸಿಎಂ ಸಿದ್ದರಾಮಯ್ಯನವರ 100ಕ್ಕೂ ಅಧಿಕ ಪತ್ರಗಳನ್ನು ಸ್ವಕ್ಷೇತ್ರದ ಜನರ ಕಾರ್ಯಗಳಿಗಾಗಿ, ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಬರೆದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಪದೇ ಪದೇ ಸ್ವಕ್ಷೇತ್ರದ ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತೆ ಪದೇ ಪದೇ ಪತ್ರ ಬರೆಯುತ್ತಿದ್ದಾರೆ.

ಇದೀಗ ಸಿದ್ದರಾಮಯ್ಯ 100ಕ್ಕೂ ಹೆಚ್ಚು ಪತ್ರಗಳನ್ನು ಅಧಿಕಾರಿಗಳಿಗೆ ಬರೆದಿದ್ದು, ಇದರಿಂದಾಗಿ ಬಾಗಲಕೋಟೆಯ ಜಿಲ್ಲೆ ಹಾಗೂ ಸಿದ್ದರಾಮಯ್ಯ ಗೆದ್ದಿರುವ ಬಾದಾಮಿ ಕ್ಷೇತ್ರದ ಅಧಿಕಾರಿಗಳಿಗೆ ತಲೇನೋವಾಗಿ ಪರಿಣಮಿಸಿದೆ.

ತಮ್ಮನ್ನು ಗೆಲ್ಲಿಸಿಕೊಟ್ಟ ಕ್ಷೇತ್ರದ ಜನ್ರ ಋಣ ತೀರಿಸ್ತೀನಿ ಅಂತ ಹೇಳುತ್ತಿದ್ದ ಸಿದ್ದರಾಮಯ್ಯ ಇದೀಗ ತಮಗೆ ಅಜಿ೯ ನೀಡಿದ ಕ್ಷೇತ್ರದ ಜನ್ರ ಸಮಸ್ಯೆಗಳಿಗೆ ಸ್ಫಂದಿಸಿ ಕೆಲಸ ಮಾಡಿಕೊಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶಿಫಾರಸ್ಸು ಪತ್ರ ಬರೆದಿದ್ದಾರೆ.

ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚಚೆ೯ಗೆ ಗ್ರಾಸವಾಗಿದ್ದು, ನೂರಕ್ಕೂ ಅಧಿಕ ಪತ್ರಗಳನ್ನು ಬರೆದಿರೋದಕ್ಕೆ ಸಿದ್ದರಾಮಯ್ಯ ಪತ್ರಕ್ಕೆ ಬೆಲೆ ಇಲ್ಲವೇ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಮಧ್ಯೆ ರಾಜ್ಯದ ಮುಖ್ಯಮಂತ್ರಿ ಗಳಿಗೆ, ಸಚಿವ ಸಂಪುಟದ ಮಂತ್ರಿಗಳಿಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ ಈಗ ಏಕಾಏಕಿ ಅಧಿಕಾರಿಗಳಿಗೆ ನೂರಕ್ಕೂ ಅಧಿಕ ಪತ್ರಗಳನ್ನು ಬರೆದಿದ್ದು ಅಚ್ಚರಿ ಮೂಡಿಸಿದೆ.

ಇನ್ನು ಈ ಎಲ್ಲಾ ಪತ್ರಗಳಿಗೆ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತೇ ಅಂತ ಕಾದು ನೋಡಬೇಕಿದೆ.

Next Story

RELATED STORIES