Top

ಶ್ರೇಷ್ಠ ಕಿರುಚಿತ್ರ ಪ್ರಶಸ್ತಿ : TV5ಯಿಂದ ಅರ್ಜಿ ಆಹ್ವಾನ

ಶ್ರೇಷ್ಠ ಕಿರುಚಿತ್ರ ಪ್ರಶಸ್ತಿ : TV5ಯಿಂದ ಅರ್ಜಿ ಆಹ್ವಾನ
X

ಶ್ರೇಷ್ಠ ಕಿರುಚಿತ್ರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಟಿವಿ5 ಚಾನೆಲ್ ಕಿರುಚಿತ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ಕಿರುಚಿತ್ರಗಳ ಅವಧಿ ಕನಿಷ್ಠ 15ರಿಂದ 30 ನಿಮಿಷದ ಅವಧಿಯದ್ದಾಗಿರಬೇಕು. ಕನ್ನಡ, ಕನ್ನಡ-ಇಂಗ್ಲೀಷ್ ಮಿಶ್ರಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಕಿರುಚಿತ್ರಗಳನ್ನು ಕಳುಹಿಸಿಕೊಡಬಹುದು. ಆಗಸ್ಟ್ 26 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಕಿರುಚಿತ್ರಗಳು ಸ್ವಂತದ್ದಾಗಿರಬೇಕು. ಒಂದು ವೇಳೆ ಕಾಪಿರೈಟ್ ಬೇರೆಯವರ ಹೆಸರಿನಲ್ಲಿದ್ದರೆ ಅವರ ಅನುಮತಿ ಪತ್ರ ಸಲ್ಲಿಸಬೇಕು.

ಕಿರುಚಿತ್ರಗಳ ಡಿವಿಡಿ ಅಥವಾ ಯಾವುದೇ ರೀತಿಯಲ್ಲಿ ಟಿವಿ 5 ಕಚೇರಿಗೆ ತಲುಪಿಸಬಹುದು. ಆದರೆ ಯೂಟ್ಯೂಬ್ ಲಿಂಕ್ ಸ್ವೀಕರಿಸಲಾಗುವುದಿಲ್ಲ. ಕಿರುಚಿತ್ರ 1 ಜಿಬಿ ಮೀರುವಂತಿರಬಾರದು.

ಕಿರುಚಿತ್ರಗಳನ್ನು ಆಗಸ್ಟ್ 1, 2017ರ ನಂತರ ನಿರ್ಮಿಸಿರಬೇಕು. ಪ್ರವೇಶ ಶುಲ್ಕ 1000ರೂ. ಆಗಿರುತ್ತದೆ. ಒಬ್ಬರೇ ವ್ಯಕ್ತಿಯಿಂದ ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಬಹುದು. ಪ್ರತೀ ಕಿರುಚಿತ್ರಕ್ಕೂ ಪ್ರತ್ಯೇಕ ಅರ್ಜಿ ಹಾಗೂ ಶುಲ್ಕ ಸಲ್ಲಿಸಬೇಕು.

ಆಯ್ಕೆಯಾದ ಕಿರುಚಿತ್ರಗಳನ್ನು ಟವಿ5ಕನ್ನಡ, ಶ್ರೆಯಾ ಮೀಡಿಯಾ ಮತ್ತು ಧ್ಯಾನ್ ಮೀಡಿಯಾ ಸಂಸ್ಥೆಗಳ ಹಕ್ಕುಗಳಾಗಿದ್ದು, ಅವುಗಳನ್ನು ಬಳಸುವ ಹಕ್ಕು ಹೊಂದಿರುತ್ತದೆ. ಅಂತಿಮ ಸುತ್ತಿಗೆ ಆಯ್ಕೆಯಾದ ನಂತರ ಕಿರು ಚಿತ್ರಗಳನ್ನು ಸ್ಪರ್ಧೆಯಿಂದ ಹಿಂದಕ್ಕೆ ಪಡೆಯುವ ಅವಕಾಶ ಇರುವುದಿಲ್ಲ.

ಹೆಚ್ಚಿನ ನಿಯಮಗಳಿಗಾಗಿ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ. ಅರ್ಜಿ events@tv5kannada.com ಈ ಮೇಲ್ ವಿಳಾಸಕ್ಕೆ ಸಲ್ಲಿಸಬಹುದು

http://tv5kannada.com/tv5-shortwood-awards-2018-rules-and-regulations/

Next Story

RELATED STORIES