Top

ಜೈಪುರದ ಕೋಟೆಕೊತ್ತಲಲ್ಲಿ ಶ್ರೀಮುರಳಿ 'ಭರಾಟೆ'

ಜೈಪುರದ ಕೋಟೆಕೊತ್ತಲಲ್ಲಿ ಶ್ರೀಮುರಳಿ ಭರಾಟೆ
X

ಇಂಡಿಪೆಂಡೆನ್ಸ್ ಡೇಗೆ ಫಸ್ಟ್ ಲುಕ್ ಟೀಸರ್ ಲಾಂಚ್ ಮಾಡಿ ಕಿಚ್ಚು ಹಚ್ಚಿದ್ದ ಭರಾಟೆ ಟೀಂ, ಇದೀಗ ಕೋಟೆ ಕೊತ್ತಲಗಳನ್ನ ಹುಡುಕಿ ಹೊರಟಿದೆ. ಶ್ರೀಮುರಳಿ ರೋರಿಂಗ್ ಗತ್ತು, ಡೈರೆಕ್ಟರ್ ಚೇತನ್ ಡೈಲಾಗ್ ಗಮ್ಮತ್ತಿಗೆ ಶ್ರೀಲೀಲಾ ಗ್ಲಾಮರ್ ಟಚ್ ನೀಡಿದೆ.

ಬರೀ ಫೋಟೋಶೂಟ್​ನಿಂದಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಭರಾಟೆ ಇತ್ತೀಚೆಗೆ ನಡೆದ ಸ್ವಾತಂತ್ರ್ಯೋತ್ಸವಕ್ಕೆ ಫಸ್ಟ್ ಲುಕ್ ಟೀಸರ್ ರಿವೀಲ್ ಮಾಡಿತ್ತು. ಮಾಸ್ ಡೈಲಾಗ್​ಗಳ ಸರದಾರ ಅಂತಲೇ ಖ್ಯಾತಿ ಪಡೆದಿರೋ ಬಹದ್ದೂರ್ ಚೇತನ್ ಸಾರಥ್ಯದ ಭರಾಟೆಯಲ್ಲಿ ರೋರಿಂಗ್ ಸ್ಟಾರ್ ಮ್ಯಾನರಿಸಂಗೆ ತಕ್ಕನಾದ ಬೊಂಬಾಟ್ ಡೈಲಾಗ್ಸ್ ಇಟ್ಟಿದ್ದಾರೆ. ಅದ್ರ ಸ್ಯಾಂಪಲ್ ಸದ್ಯ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ.

ಉಗ್ರಂ, ರಥಾವರ, ಮಫ್ತಿ ಸಿನಿಮಾಗಳ ನಂತ್ರ ಶ್ರೀಮುರಳಿ ನಟನೆಯ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ ಇದಾಗಿದ್ದು, ಕೆಜಿಎಫ್ ಖ್ಯಾತಿಯ ಭುವನ್ ಗೌಡ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಅಂದಹಾಗೆ ಕಿಸ್ ಚಿತ್ರದಿಂದ ಹೆಸರುವಾಸಿಯಾಗಿರೋ ಗ್ಲಾಮರ್ ಡಾಲ್ ಶ್ರೀಲೀಲಾ ಈ ಚಿತ್ರದಲ್ಲಿ ಶ್ರೀಮುರಳಿ ಜತೆ ಸ್ಕ್ರೀನ್ ಶೇರ್ ಮಾಡ್ತಿದ್ದು, ಸೈಲೆಂಟ್ ಆಗಿ ಶೂಟಿಂಗ್ ಶುರುವಿಟ್ಟಿದೆ ಚಿತ್ರತಂಡ.

ಬರೋಬ್ಬರಿ 20 ದಿನದ ಶೂಟಿಂಗ್ ಶೆಡ್ಯೂಲ್ ಪ್ಲಾನ್ ಮಾಡಿರೋ ಭರಾಟೆ ಟೀಂ, ಸದ್ಯ ಫೋಟೋಶೂಟ್ ಮಾಡಿರೋ ರಾಜಸ್ತಾನದ ಜೈಪುರ ಹಾಗೂ ಜೋಧ್​ಪುರದಲ್ಲಿ ಬೀಡುಬಿಟ್ಟಿದೆ. ಅಲ್ಲಿನ ಕಲರ್​ಫುಲ್ ಕೋಟೆ ಕೊತ್ತಲುಗಳಲ್ಲಿ ಮೊದಲ ಹಂತದ ಚಿತ್ರೀಕರಣ ಶುರು ಮಾಡಿದೆ. ಈಗಾಗ್ಲೇ ನಿನ್ನೆಯಿಂದ ಶೂಟಿಂಗ್ ಶುರುವಾಗಿದ್ದು, ಹಿರಿಯನಟಿ ತಾರಾ ಟೀಂಗೆ ಜಾಯಿನ್ ಆಗಿದ್ದಾರೆ.

ಶ್ರೀಲೀಲಾ- ಶ್ರೀಮುರಳಿ ಗೆಟಪ್ಸ್ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದು, ಕನ್ನಡದ ಈ ಚೆಲುವೆ ಸದ್ಯದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರಂತೆ. ಇನ್ನು ಹೆಚ್ಚೂ ಕಡಿಮೆ 50 ಮಂದಿಯ ಬಹುದೊಡ್ಡ ಟೀಂ ಕಟ್ಟಿಕೊಂಡು ರಾಜಸ್ತಾನದಲ್ಲಿ ಬೀಡುಬಿಟ್ಟಿರೋ ಡೈರೆಕ್ಟರ್ ಚೇತನ್ ಕುಮಾರ್, ತಮ್ಮ ಕನಸಿನ ಸಿನಿಮಾನ ತೆರೆಗೆ ತರೋದಕ್ಕೆ ಸಿಕ್ಕಾಪಟ್ಟೆ ಎಫರ್ಟ್​ ಹಾಕ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5

Next Story

RELATED STORIES