Top

ವೈರಲ್​ ಆಗಿದೆ ಶಿವಣ್ಣನ ಲಾಂಗ್​ ಜೊತೆ ಸ್ಟೆಪ್ಸ್..!

ವೈರಲ್​ ಆಗಿದೆ ಶಿವಣ್ಣನ ಲಾಂಗ್​ ಜೊತೆ ಸ್ಟೆಪ್ಸ್..!
X

ಲಾಂಗ್​ ಅಂದ್ರೆ ಶಿವಣ್ಣ.. ಶಿವಣ್ಣ ಅಂದ್ರೆ ಲಾಂಗ್.. ಕನ್ನಡ ಚಿತ್ರರಂಗದಲ್ಲಿ ಲಾಂಗ್​ಗೆ ಓಂಕಾರ ಹಾಡಿದ್ದೇ ಹ್ಯಾಟ್ರಿಕ್​ ಹೀರೋ.. ಯಾರೇ ಬರ್ಲಿ, ಯಾರೇ ಹೋಗ್ಲಿ. ಶಿವಣ್ಣ ಲಾಂಗ್​ ಹಿಡಿಯೋ ಸ್ಟೈಲ್​ನ್ನ ಈವರೆಗೂ ಯಾರು ಬೀಟ್ ಮಾಡೋಕ್ಕೆ ಆಗಿಲ್ಲ.. ಓಂ ಇಂದ ಹಿಡಿದು ಈವರೆಗೂ ಅದೆಷ್ಟೋ ಸಿನಿಮಾಗಳಲ್ಲಿ ಲಾಂಗ್​ ಹಿಡಿದಿರೋ ಶಿವಣ್ಣ ಇದೀಗ 'ದಿ ವಿಲನ್' ಚಿತ್ರದಲ್ಲೂ ಲಾಂಗ್​ ಹಿಡಿದು ಸ್ಟೆಪ್​ ಹಾಕಿದ್ದಾರೆ..

ಹೌದು.. ಓಂ, ಜೋಗಿ, ಸಂತ, ಜೋಗಯ್ಯ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಲಾಂಗ್​ ಹಿಡಿತಾನೇ ಬಂದಿರೋ ಶಿವಣ್ಣ ಇದೀಗ ದಿ ವಿಲನ್​ ಚಿತ್ರದಲ್ಲೂ ಲಾಂಗ್​ ಹಿಡಿದಿದ್ದಾರೆ.. ಸದ್ಯ ದಿ ವಿಲನ್​ ಚಿತ್ರದ ಹಾಡೊಂದಕ್ಕೆ ಶಿವಣ್ಣ ಲಾಂಗ್​ ಹಿಡಿದು ಸ್ಟೆಪ್ ಹಾಕಿರೋ ವಿಡಿಯೋವೊಂದು ಲೀಕ್​ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ..

ಶಿವಣ್ಣ ಪೋಸ್ಟರ್​ನಲ್ಲಿರುವ ಲುಕ್​ನಲ್ಲೇ, ಜೀಪ್​ನಿಂದ ಜಂಪ್​ ಮಾಡಿ, ಕೈಯ್ಯಲ್ಲಿ ಲಾಂಗ್​ ಹಿಡಿದು, ಜೂನಿಯರ್​ ಆರ್ಟಿಸ್ಟ್​ಗಳ ಜೊತೆ ಸ್ಟೆಪ್​ ಹಾಕಿದ್ದಾರೆ.. ಈ ಮೂಲಕ ದಿ ವಿಲನ್​ ಚಿತ್ರದಲ್ಲೂ ಶಿವಣ್ಣ ಲಾಂಗ್​ ಹಿಡಿಯೋದು ಕನ್ಫಮ್​ ಆಗಿದೆ.

ಈಗಾಗ್ಲೇ ಶಿವಣ್ಣನ ಟೀಸರ್​ನಲ್ಲಿ ಕಾಣಿಸಿಕೊಂಡಿರೋ ಲುಕ್​ ಕೂಡ ಸಖತ್​ ಡಿಫ್ರೆಂಟಾಗಿದ್ದು, ಅದೇ ಲುಕ್​ನಲ್ಲಿ ಲಾಂಗ್​ ಹಿಡಿದು ಸ್ಟೆಪ್​ ಹಾಕಿದ್ದಾರೆ ಹ್ಯಾಟ್ರಿಕ್​ ಹೀರೋ.. ಈವರೆಗೂ ದಿ ವಿಲನ್​ ಚಿತ್ರದ ಪೋಸ್ಟರ್ ಮತ್ತು ಆಡಿಯೋ ರಿಲೀಸ್​ ಆಗಿದ್ದು, ಸಿನಿಮಾ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಇದ್ದೇ ಇತ್ತು.. ಈಗಂತೂ ಲೀಕ್​ ಆಗಿರೋ ಈ ವಿಡಿಯೋ ನೋಡಿ ಫಿದಾ ಆಗಿರೋ ಅಭಿಮಾನಿಗಳು, ಸಿನಿಮಾ ನೋಡೋಕ್ಕೆ ಮತ್ತಷ್ಟು ಕಾತುರರಾಗಿದ್ದಾರೆ..

ವರದಿ : ಅರ್ಚನಾಶರ್ಮಾ, ಎಂಟರ್​ಟೈನ್ಮೆಂಟ್​ ಬ್ಯುರೋ, ಟಿವಿ5

Next Story

RELATED STORIES