Top

ಕರುನಾಡು ಕೊಟ್ಟ ನೆರವು TV5ನಿಂದ ಸಂತ್ರಸ್ಥರ ಮಡಲಿಗೆ..!

ಕರುನಾಡು ಕೊಟ್ಟ ನೆರವು TV5ನಿಂದ ಸಂತ್ರಸ್ಥರ ಮಡಲಿಗೆ..!
X

ಬೆಂಗಳೂರು : ಅದು ಕಂಡು ಕೇಳರಿಯದ ಈ ಶತಮಾನದ ಬಹುದೊಡ್ಡ ದುರಂತ. ಆಸ್ತಿ ಪಾಸ್ತಿ ಕಳೆದುಕೊಂಡು ಸಾವು ನೋವಿನಿಂದ ನರಕ ಅನುಭವಿಸುತ್ತಿದ್ದಾರೆ. ರೌದ್ರ ನರ್ತನಕ್ಕೆ ನಲುಗಿ ಅಕ್ಷರಶಃ ಬದುಕು ಬೀದಿಗೆ ಬಿದ್ದಿದೆ. ಇಂತಹ ನಿರಾಶ್ರಿತರ ನೆರವಿಗೆ ನಿಮ್ಮ ಟಿವಿ5 ನೆರವಿಗೆ ಕರೆ ನೀಡಿತ್ತು. ಕರೆಗೆ ಸ್ವಂದಿಸಿ ಇಡೀ ಕರ್ನಾಟಕ ನೆರವಿನ ಮಹಾಪೂರ ಹರಸಿದರು. ನೀವು ಕೊಟ್ಟ ನೆರವನ್ನ ಸಂತ್ರಸ್ಥರಿಗೆ ನಾವು ತಲುಪಿಸಿದ್ದೇವೆ.

ಜಲಪ್ರಳಯದಿಂದ ಕೊಡಗು ಜಿಲ್ಲೆಯ ಜನ ತತ್ತರಿಸಿದ್ದಾರೆ. ಹೀಗಾಗಿ ಉದಾರವಾದ ನೆರವಿನೊಂದಿಗೆ ಸಂತ್ರಸ್ಥರಿಗೆ TV5 ಸಹಾಯ ಹಸ್ತ ಮಾಡಿದೆ. ರೌದ್ರ ನರ್ತನದೊಂದಿಗೆ ಮಳೆರಾಯನ ಅಟ್ಟಹಾಸಕ್ಕೆ ಕೊಡಗು ಅಕ್ಷರಶಃ ನಲುಗಿದ್ದು, ಜಲಪ್ರಳಯದಿಂದ ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ಹೀಗಾಗಿ ಸೂರು ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ. ಹಾಗಾಗಿ ಅಲ್ಲಿಗೆ ಭೇಟಿ ಕೊಟ್ಟ TV5 ಟೀಂ ಇಡೀ ಕರ್ನಾಟಕ ಮಂದಿ ಕೊಟ್ಟ ಅಗತ್ಯ ಸಾಮಾಗ್ರಿಗಳನ್ನ ಸಂತ್ರಸ್ಥರಿಗೆ ತಲುಪಿಸುವ ಕೆಲಸ ಮಾಡಿದೆ.

ಮಳೆಯ ರೌದ್ರ ನರ್ತನ ಸಿಲುಕಿ ಸಂಕಷ್ಟದಲ್ಲಿ ಸಿಲುಕಿರುವ ಕೊಡುಗೆ ಮಂದಿಗೆ ಇಡೀ ಕರ್ನಾಟಕ ಸ್ವಂದಿಸಿತ್ತು ಜನರ ಸಹಕಾರದೊಂದಿಗೆ ಟಿವಿ5 ಕೇಂದ್ರ ಕಚೇರಿಗೆ ಸಮರೋಪಾದಿಯಲ್ಲಿ ಬಂದಿದ್ದ ಅಗತ್ಯ ವಸ್ತುಗಳು ಕಡಗು ಸಂತ್ರಸ್ಥರಿಗೆ ತಲುಪಿಸಲಾಗಿದೆ. ಬೆಂಗಳೂರಿನ ಕೇಂದ್ರ ಕಚೇರಿಯಿಂದ ಮೂರು ಟ್ರಕ್ ಗಳ ಮೂಲಕ ತೆರಳಿ ನಿಜವಾದ ಸಂತ್ರಸ್ತರಿಗೆ ಹಣ್ಣು, ನೀರು, ಅಕ್ಕಿ, ಬಟ್ಟೆ, ರೈನ್ ಕೋಟ್, ಬಿಸ್ಕೆಟ್, ಬ್ರೆಡ್, ಹಾಲು, ಔಷಧಿಗಳನ್ನ ಸೇರಿದಂತೆ ಹಲವು ಸಾಮಾಗ್ರಿಗಳನ್ನ ಪೂರೈಕೆ ಮಾಡಲಾಗಿದೆ.

ರಾಜ್ಯದ ಮಂದಿ ಆಟೋ, ಕಾರು, ಟೆಂಪೋ ಮೂಲಕ ಟಿವಿ5 ಕೇಂದ್ರ ಕಚೇರಿಗೆ ಬಟ್ಟೆ, ಬರೆ, ಔಷಧಿ ಸೇರಿದಂತೆ ಅಗತ್ಯವಸ್ತುಗಳನ್ನು ತಂದುಕೊಟ್ಟಿದರುಕೊಡಗಿನ ಸುತ್ತ ಮುತ್ತ ಗ್ರಾಮದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತ ಕೇಂದ್ರದಲ್ಲಿ ವಾಸ್ತವ್ಯದಲ್ಲಿದ್ದ ಮಂದಿಗೆ, ಪರಿಹಾರ ಸಾಮಗ್ರಿ, ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸುವ ಕಾರ್ಯ ಟಿವಿ5 ಟೀಂ ಮಾಡಿದೆ.

ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಡಿಕೇರಿ ತಾಲೂಕು ಹೆಚ್ಚಿನ ಹಾನಿ ಅನುಭವಿಸಿದೆ. ಇದರಿಂದಾಗಿ ಸಂತ್ರಸ್ಥರಾದವರಿಗೆ ರಾಜ್ಯದ ಎಲ್ಲ ದಿಕ್ಕುಗಳಿಂದಲೂ ಪರಿಹಾರ ಸಾಮಗ್ರಿಗಳ ನೆರವಿನ ಮಹಾಪೂರವೇ ಹರಿದು ಬರಿದ್ದು, ಕನ್ನಡಿಗರ ಒಗ್ಗಟ್ಟಿಗೆ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಭಾರಿ ಮಳೆಯಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂತ್ರಸ್ತರಾದವರಿಗೆ ಜಿಲ್ಲೆಯಲ್ಲಿ ಪರಿಹಾರ ಮತ್ತು ಪುನರ್ವಸತಿ ಕೇಂದ್ರಗಳನ್ನು ತೆರಳಿ ಸಾಮಾಗ್ರಿಗಳನ್ನ ಪೂರೈಕೆ ಮಾಡಲಾಗಿದೆ.

ಅತಿ ಹೆಚ್ಚು ಹಾನಿ ಮಡಿಕೇರಿ ತಾಲೂಕಿನಲ್ಲಿ ಸಂಭವಿಸಿದ್ದು, ಇಲ್ಲಿನ ಗಾಳಿಬೀಡು, ಕರ್ಣಂಗೇರಿ, ಮಕ್ಕಂದೂರು, ಜೋಡುಪಾಲ, ಕಾಟಕೇರಿ, ಹೊದವಾಡ ಐಕೊಳ, ಮಡಿಕೇರಿ ನಗರ ಸೇರಿ ವಿವಿಧೆಡೆ ಪುನರ್ವಸತಿ ಕೇಂದ್ರಗಳಳಿಗೆ ತೆರಳಿ ಟಿವಿ5 ತೆರಳಿ ಸಂತ್ರಸ್ತರಿಗೆ ಊಟೋಪಹಾರ, ಅಗತ್ಯ ಪರಿಹಾರ ಸಾಮಗ್ರಿಗಳನ್ನೂ ವಿತರಣೆ ಮಾಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾದ ಸಂತ್ರಸ್ತರಿಗೆ ಸಹಾಯದ ಹಸ್ತ ಚಾಚಿರುವ ಕರ್ನಾಟಕ ರಾಜ್ಯದ ಜನತೆ, ನಿಶ್ಕಲ್ಮಶ ಮನಸ್ಸಿನಿಂದ ನೆರವಿನ ಮಹಾಪೂರವನ್ನೇ ಹರಿಸಿದ್ರು.ಅತಿ ಹೆಚ್ಚು ಸ್ವೀಕೃತವಾಗಿರುವ ಸಾಮಗ್ರಿಗಳನ್ನ ಪೂರೈಕೆ ಮಾಡಲಾಗಿದೆ.

ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ ಸ್ವೀಕೃತವಾಗುತ್ತಿರುವ ಸಾಮಗ್ರಿಗಳನ್ನು ಕೊಡಗಿ ಜಿಲ್ಲೆಯ ಹಲವು ಗ್ರಾಮ, ಸರ್ಕಾರಿ ಶಾಲೆ, ಹಾಗೂ ಎಪಿಎಂಸಿ ಗೋದಾಮು, ಕುಶಾಲನಗರದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಯಿತು.

ಮುಳಗಿದ ಹಡಗಿನಂತಾದ ಕೊಡಗಿಗೆ ಇಡೀ ಜನತೆ ಹೃದಯ ಮಿಡಿದಿದೆ. ಮೂಲೆ ಮೂಲೆಯಿಂದ ಬಂದಿದ್ದ ಸಾಮಾಗ್ರಿಗಳನ್ನ ನಿಮ್ಮ ಟಿವಿ5 ಸಾಮಾಜಿಕ ಜವಾಬ್ದಾರಿ ಯಿಂದ ನಿಜವಾದ ಸಂತ್ರಸ್ಥರಿಗೆ ತಲುಪಿಸಿ ಮಾನವೀಯತೆ ಮೆರೆದಿದೆ. ಈ ಮೂಲಕ ನೆರವಿಗೆ ಟಿವಿ5 ಅಭಿಯಾನದ ಜೊತೆಗೆ ಕೈಜೋಡಿಸಿದ ಕರುನಾಡ ಜನತೆಗೆ ಧನ್ಯವಾದ ಅರ್ಪಿಸುತ್ತಿದ್ದೇವೆ.

ವರದಿ : ಕೃಷ್ಣಮೂರ್ತಿ, ಟಿವಿ5 ಬೆಂಗಳೂರು

Next Story

RELATED STORIES