ತೂಕ ಇಳಿಕೆ ಮಾಡಬೇಕೆ.? ಹಾಗಿದ್ರೆ ಈ ಜ್ಯೂಸ್ ಸೇವನೆ ಮಾಡಿ.!

ನೀವು ಕೂಡ ತೂಕ ಕಳೆದುಕೊಳ್ಳಲು ಬಯಸಿದ್ದೀರಾ.? ಅದಕ್ಕಾಗಿ ಮಾರ್ಕೆಟ್‌ನಲ್ಲಿ ಸಿಗುವ ಸಿಕ್ಕ ಸಿಕ್ಕ ಔಷಧಿ ಸೇವನೆ ಮಾಡ್ತಾ ಇದ್ದೀರಾ.? ತಕ್ಷಣ ಹಾಗೇ ಮಾಡೋದನ್ನು ನಿಲ್ಲಿಸಿಬಿಡಿ.!

ಯಾಕೆಂದರೇ, ನೀವು ಬಳಸುವ ಅನೇಕ ವಸ್ತುಗಳಲ್ಲಿ ಬೇರೆ ಬೇರೆ ಖಾಯಿಲೆಗೆ ನಿಮ್ಮನ್ನು ತಳ್ಳುವ ಸಂಭವ ಇರುತ್ತದೆ. ಹೀಗಾಗಿ ಮನೆಯಲ್ಲೇ ಮಾಡುವ ಮನೆ ಮದ್ದು ನಾವ್ ಹೇಳ್ತೀವಿ. ಅದನ್ನು ಮಾಡಿ ನೋಡಿ.

ಹೌದು… ಇಂದು ಬೊಜ್ಜ ಸಮಸ್ಯೆ ಇಡೀ ವಿಶ್ವವನ್ನೇ ಆವರಿಸಿ ಬಿಟ್ಟಿದೆ. ಬೊಜ್ಜಿನ ನಿವಾರಣೆಗಾಗಿ ಅನೇಕರು ಒಂದೊಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದಕ್ಕಾಗಿ ದಿನಂಪ್ರತಿ ಸಾವಿರಾರು ರೂ ವ್ಯಯಿಸುತ್ತಿದ್ದಾರೆ.

ಕೆಲವೊಮ್ಮೆ ನೀವು ಬಳಸುವ ವಿವಿಧ ಔಷಧಗಳು ನಿಮ್ಮ ಬೊಜ್ಜನ್ನು ನಿವಾರಿಸಿ, ಸ್ಥೂಲಕಾಯ ಮಾಡಿದರೇ, ಮತ್ತೆ ಕೆಲವರಿಗೆ ಬೊಜ್ಜು ಕರಗಿದ ಮೇಲೆ ಇತರೆ ಸಮಸ್ಯೆಗಳು ಕಾಡೋಕೆ ಶುರು ಆಗುತ್ತವೆ.

ಈ ಎಲ್ಲಾ ಸಮಸ್ಯೆಗಳಿಂದ ದೂರ ಆಗಬೇಕು. ಯಾವುದೇ ಸೈಡ್ ಎಫೆಕ್ಟ್‌ ಇಲ್ಲದೇ ಇರೋ ಔಷಧಿ ಬಳಸಿ ತೂಕ ಇಳಿಸಬೇಕು ಅಂದರೇ, ಜಸ್ಟ್‌ ಸಿಂಪಲ್.. ನಾವು ಹೇಳುವ ಮನೆ ಮದ್ದನ್ನು ಮಾಡಿ ಬಳಸಿ ನೋಡಿ…

ಆ ಮನೆ ಮದ್ದಿನ ತೂಕ ಇಳಿಸುವ, ಬೊಜ್ಜನ್ನು ಕರಗಿಸುವ ಸರಳ ವಿಧಾನವೇ.. ಈ ಕೆಳಗಿನ ಜೂಸ್‌ ಮಾಡಿಕೊಂಡು ಸೇವಿಸೋದು.

1. ಅನಾನಸು, ಸೌತೆಕಾಯಿ ಮತ್ತು ಪಾಲಕ್ ಜೂಸ್ 

ಉನ್ನತ ಮಟ್ಟದ ಪೋಷಕಾಂಶ, ಕ್ಯಾಲರಿ ಕಡಿಮೆ ಜೂಸ್ ಇದು. ಈ ಜೂಸ್ ಸೇವನೆ ಮಾಡಿದರೇ, ಅತಿಯಾದ ಕೊಬ್ಬು ಕರಗಿಸಿ, ತೂಕ ಇಳಿಕೆಗೆ ಸಹಕಾರಿ.

2. ಸೌತೆಕಾಯಿ, ಸೆಲರಿ ಮತ್ತು ಹಸಿರು ಸೇಬಿನ ಜ್ಯೂಸ್

ಈ ಜ್ಯೂಸ್ ನಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ. ಆದರೆ ಅಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ.

ಇದು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ನಿರ್ಮಾಣ ಮಾಡಿ ತೂಕ ಕಳೆದುಕೊಳ್ಳಲು ಸಹಕರಿಸುವುದು.

ಈ ಜ್ಯೂಸ್ ನಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ. ಆದರೆ ಅಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ.

3. ಲಿಂಬೆ, ಕೊತ್ತಂಬರಿ, ಪಾಲಕ್ ಜೂಸ್

ಈ ಜ್ಯೂಸ್ ಮೂತ್ರವರ್ಧಕವಾಗಿದ್ದು, ಶುದ್ಧೀಕರಿಸುವ ಮತ್ತು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ ಮತ್ತು ತೂಕ ಕಳೆದುಕೊಳ್ಳಲು ಇದು ಪರಿಣಾಮಕಾರಿಯಾಗಿದೆ.

ಈ ಮೊದಲಾದ ಮನೆಯಲ್ಲಿಯೇ ಮಾಡಬಹುದಾದ ಜೂಸ್ ಮಾಡಿಕೊಂಡು ಸೇವನೆ ಮಾಡಿ. ಹೀಗೆ ಮಾಡಿದಾಗ ಅಧಿಕ ತೂಕದಿಂದ ಬಳಲುತ್ತಿರುವವರು, ಬೊಜ್ಜು ಸಮಸ್ಯೆಯನ್ನು ಎದುರಿಸುತ್ತಿರುವವರು ಸಮಸ್ಯೆಯಿಂದ ದೂರಾಗಬಹುದಾಗಿದೆ.