Top

ಅಪಾಯದಲ್ಲಿ ಚಾರ್ಮಾಡಿ ರಸ್ತೆ ಸಂಚಾರ.!

ಅಪಾಯದಲ್ಲಿ ಚಾರ್ಮಾಡಿ ರಸ್ತೆ ಸಂಚಾರ.!
X

ಚಿಕ್ಕಮಗಳೂರು : ಎಡೆಬಿಡದ ಮಳೆಗೆ, ಅಲ್ಲಲ್ಲಿ ಗುಡ್ಡ ಕುಸಿತಗೊಂಡು, ಆಗಾಗ ಬ್ಲಾಕ್‌ ಆಗೋ ಚಾರ್ಮಾಡಿ ಘಾಟ್‌ ರಸ್ತೆ ಸಂಚಾರ ಒಂದು ಸವಾಲೇ ಸರಿ.

ಹೀಗಿದ್ದರೂ ದಿನನಿತ್ಯದ ವಾಹನಗಳ ಸಂಚಾರ ಮಾತ್ರ ಚಾರ್ಮಾಡಿ ಘಾಟ್‌ನಲ್ಲಿ ಕಡಿಮೆ ಆಗಿಲ್ಲ. ಸುರಿಯುತ್ತಿರುವ ಮಳೆಯ ನಡುವೆ, ಕುಸಿಯುತ್ತಿರುವ ಗುಡ್ಡಗಳ ಮಧ್ಯೆಯೂ ವಾಹನ ಸಂಚಾರ ಸಾಗುತ್ತಿದೆ.

ಆದರೇ ಇತ್ತೀಚಿಗೆ ಆಘಾತಕಾರಿ ಸಂಗತಿಯೊಂದು ಚಾರ್ಮಾಡಿ ಘಾಟ್‌ ಬಗ್ಗೆ ಹೊರಬಿದ್ದಿದೆ. ವಾಹನಗಳ ದಟ್ಟಣೆಯ ಅಪಾಯ, ಚಾರ್ಮಾಡಿ ಘಾಟ್‌ನಲ್ಲಿ ಹೆಚ್ಚಾಗಿದೆ ಎಂಬ ಅಂಶ ಭಯ ಹುಟ್ಟಿಸುವಂತಿದೆ.

ಏಕೆಂದರೇ ಚಾರ್ಮಾಡಿ ಘಾಟ್‌ ರಸ್ತೆ, ಲಘು ವಾಹನ ಸಂಚಾರಕ್ಕೆ ಹೊರತು ಪಡಿಸಿ, ಭಾರೀ ವಾಹನ ಸಂಚಾರದ ಸಾಮರ್ಥ್ಯವನ್ನೇ ಕಳೆದುಕೊಂಡಿದೆ. ಹೀಗಾಗಿ ಯಾವಾಗ ಏನು ಅನಾಹುತ ಸಂಭವಿಸುತ್ತೆ ಹೇಳೋಕೆ ಸಾಧ್ಯವಿಲ್ಲ.

ಈ ಎಲ್ಲಾ ಭಯದ ನಡುವೆ, ಗುಡ್ಡ ಕುಸಿಯುವ ಭೀತಿಯಲ್ಲಿ, ಭಾರೀ ವಾಹನಗಳ ಸಂಚಾರಕ್ಕೆ ಚಿಕ್ಕಮಗಳೂರು ಜಿಲ್ಲಾಢಳಿತ ನಿಷೇಧಗೊಳಿಸಿದೆ. ಜೊತೆಗೆ ಟ್ರಾಫಿಕ್‌ ಸಮಸ್ಯೆಯನ್ನು ಕಡಿಮೆ ಮಾಡಲು ಪ್ಲಾನ್‌ ಮಾಡಲಾಗಿದೆ.

ಅಲ್ಲದೇ ಇತ್ತೀಚಿಗೆ ಅಷ್ಟೇ ಕಳೆದ ಎರಡು ತಿಂಗಳ ಹಿಂದೆ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾರ್ಯ ಮುಗಿಸಿ, ಚಾರ್ಮಾಡಿ ಘಾಟ್‌ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿತ್ತು.

ಪ್ರಯಾಣಿಕರೇ, ನೀವು ಚಾರ್ಮಾಡಿ ಘಾಟ್‌ ರಸ್ತೆಯ ಮೂಲಕ ಸಂಚರಿಸಿದ್ರೇ, ಹೊಸ ರಸ್ತೆಯೆಂಬುದೇ ನಿಮಗೆ ಗೊತ್ತಾಗುವುದಿಲ್ಲ. ಅಷ್ಟು ಮಳೆ, ಗುಡ್ಡ ಕುಸಿತ, ವಾಹನಗಳ ಸಂಚಾರದಿಂದ ಚಾರ್ಮಾಡಿ ರಸ್ತೆ ಹದಗೆಟ್ಟಿದೆ.

ಇನ್ನೂ ಆಘಾತಕಾರಿ ಅಂದ್ರೇ, ದಿನವೊಂದ್ಕೆ ಚಾರ್ಮಾಡಿ ಘಾಟ್‌ ರಸ್ತೆ ಮೂಲಕ ಸಂಚರಿಸುವ ವಾಹನಗಳ ಸಂಖ್ಯೆ ಬರೋಬ್ಬರಿ 3 ಸಾವಿರಕ್ಕೂ ಹೆಚ್ಚು. ನೀವೇ ಕಲ್ಪಿಸಿಕೊಳ್ಳಿ. ಒಂದು ದಿನಕ್ಕೆ ಇಷ್ಟು ಆದ್ರೇ ರಸ್ತೆ ಹೇಗೆ ತಡೆಯುತ್ತದೆ.

ಈ ಎಲ್ಲಾ ಕಾರಣದಿಂದಾಗಿ ಇದೀಗ ಭಾರೀ ವಾಹನಗಳ ಸಂಚಾರ ಸಾಮರ್ಥ್ಯವನ್ನು ಚಾರ್ಮಾಡಿ ಘಾಟ್‌ನ ರಾಷ್ಟ್ರೀಯ ಹೆದ್ದಾರಿ ಕಳೆದುಕೊಂಡಿದೆಯಂತೆ.

ಹೀಗಾಗಿ ಮಂಗಳೂರು-ಬೆಂಗಳೂರು-ಚಿಕ್ಕಮಗಳೂರು-ಹಾಸನ ಸವಾರರ ಪರದಾಟ ದಿನಪ್ರತಿ ಪರದಾಟ. ದಿನಗಟ್ಟಲೇ ಟ್ರಾಫಿಕ್ ಜಾಮ್‌ನಿಂದ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ದುರಂತವೇ ಸರಿ.

Next Story

RELATED STORIES