Top

ದೇಶದ ಪವಿತ್ರ ನದಿಗಳಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

ದೇಶದ ಪವಿತ್ರ ನದಿಗಳಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ
X

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ದೇಶದ ಪ್ರಮುಖ 100 ನದಿಗಳಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ.

ಈ ಸಂಬಂಧ ಇಂದು ಅಸ್ಥಿ ವಿಸರ್ಜನಾ ಪ್ರಕ್ರಿಯೆಯಲ್ಲಿ ವಿವಿಧ ರಾಜ್ಯದ ಬಿಜೆಪಿ ಮುಖಂಡರು ತೊಡಗಿದ್ದಾರೆ.

ಮೊದಲನೆಯದಾಗಿ, ದೆಹಲಿಯ ಸ್ಮೃತಿ ಶಾಲಾಗೆ ಭೇಟಿ ನೀಡಿದ್ದ ವಾಜಪೇಯಿ ಪುತ್ರಿ ನಮಿತಾ ಹಾಗೂ ಮೊಮ್ಮಗಳು ನಿಹಾರಿಕಾ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಸ್ಥಿಯನ್ನು ಪಡೆದುಕೊಂಡರು.

ಈ ಅಸ್ಥಿಯನ್ನು ವಾಜಪೇಯಿ ಪುತ್ರಿ ನಮಿತಾ ಹಾಗೂ ಮೊಮ್ಮಗಳು ನಿಹಾರಿಕಾ ಹರಿದ್ವಾರದಲ್ಲಿರುವ ಗಂಗಾ ನದಿಗೆ ಅಸ್ತಿ ವಿಸರ್ಜನೆಗೆ ಮಾಡಿದರು.

ಇತ್ತ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನವದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಂದ ವಾಜಪೇಯಿ ಅವರ ಅಸ್ಥಿಯನ್ನು ಪಡೆದುಕೊಂಡು.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವದೆಹಲಿಯಿಂದ ಪಡೆದುಕೊಂಡು ತಂದ ವಾಜಪೇಯಿ ಅಸ್ಥಿಯನ್ನು, ರಾಜ್ಯದ ಪ್ರಮುಖ ನದಿಗಳಲ್ಲಿ ವಿಸರ್ಜಿಸಲು ಮೆರವಣಿಗೆ ಮೂಲಕ ಬಿಜೆಪಿ ರಾಜ್ಯ ಕಾರ್ಯಾಲಯಕ್ಕೆ ತರಲಾಗಿದೆ.

ಈ ಅಸ್ಥಿ ವಿಸರ್ಜನಾ ಕಾರ್ಯ, ನಾಳೆ ಶ್ರೀರಂಗ ಪಟ್ಟಣ ಬಳಿಯ ಪಶ್ಚಿಮ ವಾಹಿನಿಯಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ತೆರಳಿ ವಿಸರ್ಜನೆ ಮಾಡಲಿದ್ದಾರೆ.

ಮುಂಬರುವ ಭಾನುವಾರ (ಅ.26)ರ ವರೆಗೆ ರಾಜ್ಯದ ವಿವಿಧ ನದಿಗಳಲ್ಲಿ ಅಸ್ಥಿ ವಿಸರ್ಜನೆ ಮಾಡುವ ಮೂಲಕ ಮುಕ್ತಾಯಗೊಳ್ಳಲಿದೆ.

ವಾಜಪೇಯಿ ಅವರ ಅಸ್ಥಿಯನ್ನು ರಾಜ್ಯದ 8 ಪ್ರಮುಖ ನದಿಗಳಲ್ಲಿ ವಿಸರ್ಜಿಸಲಾಗುತ್ತದೆ. ಆ ನದಿಗಳೆಂದರೇ..,

  1. ಬೆಂಗಳೂರಿನ ವೃಷಭಾವತಿ
  2. ನೇತ್ರಾವತಿ
  3. ಗುರುಪುರ (ದಕ್ಷಿಣಕನ್ನಡ)
  4. ಶಿವಮೊಗ್ಗದ ತುಂಗಾ
  5. ಭದ್ರಾವತಿಯ ಭದ್ರಾ
  6. ಹೊಸಪೇಟೆಯ ತುಂಗಭದ್ರಾ
  7. ಕಾರವಾರದ ಕಾಳಿ
  8. ಬಾಗಲಕೋಟೆಯ ಘಟಪ್ರಭಾ

ಈ ಮೇಲಿನ ರಾಜ್ಯದ ಪ್ರಮುಖ ನದಿಗಳಲ್ಲಿ ವಿಸರ್ಜಿನಸಲಾಗುತ್ತದೆ.

Next Story

RELATED STORIES