Top

ಏಷ್ಯನ್ ಗೇಮ್ಸ್: ಶೂಟಿಂಗ್​ನಲ್ಲಿ ರಾಹಿಗೆ ಸ್ವರ್ಣ ಪದಕ!

ಏಷ್ಯನ್ ಗೇಮ್ಸ್: ಶೂಟಿಂಗ್​ನಲ್ಲಿ ರಾಹಿಗೆ ಸ್ವರ್ಣ ಪದಕ!
X

ರಾಹಿ ಸರ್ನಬೋಟ್ ವನಿತೆಯರ 25 ಮೀಟರ್ ಮೆಟ್ರೋ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್​ ನಲ್ಲಿ ನಾಲ್ಕನೇ ದಿನ ಭಾರತಕ್ಕೆ ಮೊದಲ ಸ್ವರ್ಣ ಪದಕ ತಂದುಕೊಟ್ಟರು. ಒಟ್ಟಾರೆ ಟೂರ್ನಿಯಲ್ಲಿ ಭಾರತಕ್ಕೆ ಒಲಿದ 4ನೇ ಚಿನ್ನದ ಪದಕವಾಗಿದೆ.

ಮಂಗಳವಾರ ನಡೆದ ಫೈನಲ್​ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಕೊನೆಯಲ್ಲಿ ಇಬ್ಬರೂ ಸಮಾನ ಅಂಕ ಗಳಿಸಿದ್ದರಿಂದ ಶೂಟೌಟ್​ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು.

ಶೂಟೌಟ್​ನ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್​ನ ಸ್ಪರ್ಧಿ ಜೊತೆ ಆರಂಭದಿಂದಲೇ ರಾಹಿ ಸಮಾನ ಅಂಕ ಗಳಿಸಿದರು. ಮೊದಲ ಹಂತದಲ್ಲಿ 4-4ರಿಂದ ಸಮಬಲಗೊಂಡಿತು. ಎರಡು ಮತ್ತು ಮೂರನೇ ಸುತ್ತಿನಲ್ಲೂ ಸಮಾನ ಹೋರಾಟ ಕಂಡು ಬಂದಿತು. ಅಂತಿಮವಾಗಿ ರಾಹಿ 34 ಅಂಕ ಪಡೆಯುವ ಮೂಲಕ ಚಿನ್ನದ ಪದಕಕ್ಕೆ ಗುರಿ ಇಟ್ಟರು.

Next Story

RELATED STORIES