Top

3ನೇ ಟೆಸ್ಟ್​: ಭಾರತಕ್ಕೆ 203 ರನ್ ಜಯ, ಸರಣಿ ಜೀವಂತ

3ನೇ ಟೆಸ್ಟ್​: ಭಾರತಕ್ಕೆ 203 ರನ್ ಜಯ, ಸರಣಿ ಜೀವಂತ
X

ಸ್ಪಿನ್ನರ್ ಆರ್.ಅಶ್ವಿನ್ ಕೊನೆಯ ಜೇಮ್ಸ್ ಆ್ಯಂಡರ್ಸನ್ ಅವರನ್ನು ಔಟ್ ಮಾಡುವ ಮೂಲಕ ಭಾರತ ತಂಡ 203 ರನ್​ ಗಳ ಭಾರೀ ಅಂತರದಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯಿತು. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಿಂದ ಹಿನ್ನಡೆ ಅಂತರವನ್ನು ತಗ್ಗಿಸಿಕೊಂಡ ಭಾರತ ಸರಣಿಯನ್ನು ಜೀವಂತವಾಗಿರಿಸಿಕೊಂಡಿತು.

ನಾಟಿಂಗ್ ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್​ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಬುಧವಾರ 9 ವಿಕೆಟ್​ಗೆ 311 ರನ್ ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ 6 ರನ್ ಗಳಿಸುತ್ತಿದ್ದಂತೆ ಉಳಿದ 1 ವಿಕೆಟ್ ಕಳೆದುಕೊಂಡು ಶರಣಾಯಿತು.

ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋಲುಂಡಿದ್ದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದು ತಿರುಗೇಟು ನೀಡಿದೆ. ಉಳಿದೆರಡು ಪಂದ್ಯಗಳು ಇದೀಗ ಕುತೂಹಲ ಉಳಿಸಿಕೊಂಡಿದ್ದು, ಭಾರತ ಸರಣಿ ಗೆಲ್ಲಬೇಕಾದರೆ ಉಳಿದೆರಡು ಪಂದ್ಯಗಳನ್ನೂ ಗೆಲ್ಲಬೇಕಿದೆ. ಇಂಗ್ಲೆಂಡ್ ಕನಿಷ್ಠ ಒಂದು ಪಂದ್ಯ ಗೆದ್ದರೂ ಸರಣಿ ತನ್ನದಾಗಿಸಿಕೊಳ್ಳಲಿದೆ.

ಈ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 22 ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿದ್ದು ಮಾಜಿ ನಾಯಕ ಸೌರವ್ ಗಂಗೂಲಿ ಅವರ ಅತೀ ಹೆಚ್ಚು ಪಂದ್ಯ (21) ಗೆದ್ದ ದಾಖಲೆ ಹಿಂದಿಕ್ಕಿದರು. ಧೋನಿ ನಾಯಕತ್ವದಲ್ಲಿ ಭಾರತ ಅತೀ ಹೆಚ್ಚು (27) ಪಂದ್ಯಗಳನ್ನು ಗೆದ್ದ ದಾಖಲೆ ಇದೆ.

Next Story

RELATED STORIES