3ನೇ ಟೆಸ್ಟ್: ಭಾರತದ ಗೆಲುವಿಗೆ ಒಂದೇ ಮೆಟ್ಟಿಲು ಬಾಕಿ

ನಾಟಿಂಗ್ಹ್ಯಾಮ್: ವೇಗಿಗಳ ಅಮೋಘ ಪ್ರದರ್ಶನದಿಂದ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಲು ಭಾರತಕ್ಕೆ ಕೇವಲ ಒಂದೇ ಹೆಜ್ಜೆ ಬಾಕಿ ಉಳಿದಿದೆ.
ಭಾರತ ತಂಡ ಒಡ್ಡಿದ 521 ರನ್ ಗಳ ಕಠಿಣ ಗುರಿ ಪಡೆದಿರುವ ಇಂಗ್ಲೆಂಡ್ ತಂಡ ಎರಡನೇ ಇನಿಂಗ್ಸ್ ನಲ್ಲಿ 9 ವಿಕೆಟ್ಗೆ 311 ರನ್ ಗಳಿಸಿದ್ದು, ಕೇವಲ 1 ವಿಕೆಟ್ ಉಳಿಸಿಕೊಂಡಿರುವ ಇಂಗ್ಲೆಂಡ್ 208 ರನ್ ಕಲೆ ಹಾಕಬೇಕಿದೆ.
ಪಂದ್ಯದ ನಾಲ್ಕನೆ ದಿನವಾದ ಮಂಗಳವಾರ ಆರಂಭದಲ್ಲೆ ವೇಗಿಗಳ ದಾಳಿಗೆ ತತ್ತರಿಸಿ ಹೋಯ್ತು. ಆರಂಭಿಕ ಬ್ಯಾಟ್ಸ್ ಮನ್ಗಳಾದ ಆಲೆಸ್ಟರ್ ಕುಕ್ (17), ಜೆನ್ನಿಂಗ್ಸ್ 13, ಜೋ ರೂಟ್ (13), ಒಲಿವರ್ ಪೋಪ್ (16) ಬೇಗನೆ ವಿಕೆಟ್ ಒಪ್ಪಿಸಿ ಪೆವಲಿಯನ್ ಸೇರಿದರು.
62 ರನ್ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸ್ಪೋಟಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಮತ್ತು ಆಲ್ರೌಂಡರ್ ಬೆನ್ಸ್ಟೋಕಸ್ ಆಸರೆಯಾದರು. ಈ ಜೋಡಿ ಐದನೇ ವಿಕೆಟ್ಗೆ 169ರನ್ಗಳ ಭರ್ಜರಿ ಜೊತೆಯಾಟ ನೀಡಿತು. ಭೋಜನ ವಿರಾಮದ ನಂತರ ಅಬ್ಬರದ ಬ್ಯಾಟಿಂಗ್ ಮಾಡಿದ ಜೋ ರೂಟ್ ಶತಕ ಬಾರಿಸಿ ಸಂಭ್ರಮಿಸಿದ್ರು.
ಆದರೆ 81ನೇ ಓವರ್ ನಂತರ ಬಂದ ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಜಸ್ಪ್ರೀತ್ ಬೂಮ್ರಾ ಬಟ್ಲರ್(106), ಜಾನಿ ಭೈರ್ಸ್ಟೋ (0), ಕ್ರಿಸ್ ವೋಕ್ಸ್ (4)ಮತ್ತು ಸ್ಟುವರ್ಟ್ ಬ್ರಾಡ್ (20) ಅವರನ್ನ ಬೇಗನೆ ಔಟ್ ಮಾಡಿ ತಂಡದ ಗೆಲುವನ್ನ ಖಚಿತಪಡಿಸಿದ್ರು.
ದಿನದಾಟದ ಅಂತ್ಯದಲ್ಲಿ ಆದಿಲ್ ರಶೀದ್ ಅಜೇಯ 30 ಮತ್ತು ಜೇಮ್ಸ್ ಆ್ಯಂಡರ್ಸನ್ ಅಜೇಯ 8 ರನ್ಗಳಿಸಿ ಐದನೇ ದಿನಕ್ಕೆ ಕ್ರಿಸ್ ಕಾಯ್ದುಕೊಂಡರು. ಸೊಗಸಾದ ಬೌಲಿಂಗ್ ಮಾಡಿದ ಜಸ್ಪ್ರಿತ್ ಬೂಮ್ರಾ ಐದು ವಿಕೆಟ್ ಪಡೆದು ಮಿಂಚಿದರು.
- ಸಂಕ್ಷಿಪ್ತ ಸ್ಕೋರ್
- ಭಾರತ 329 ಮತ್ತು 7 ವಿಕೆಟ್ಗೆ 352 ಡಿಕ್ಲೇರ್
- ಇಂಗ್ಲೆಂಡ್ 311/9 (ಬಟ್ಲರ್ 106, ಬೆನ್ಸ್ಟೋಕ್ಸ್ 62, ಬೂಮ್ರಾ 85ಕ್ಕೆ5, ಇಶಾಂತ್ ಶರ್ಮಾ 70ಕ್ಕೆ 2)