Top

TV5 BIG ಇಂಪ್ಯಾಕ್ಟ್‌ : ಕೊಡಗಿನ ನೆರೆ ಸಂತ್ರಸ್ತರಿಗೆ ಮಿಡಿದ ಕರುನಾಡ ಜನ

TV5 BIG ಇಂಪ್ಯಾಕ್ಟ್‌ : ಕೊಡಗಿನ ನೆರೆ ಸಂತ್ರಸ್ತರಿಗೆ ಮಿಡಿದ ಕರುನಾಡ ಜನ
X

ಕೊಡುಗಿನಲ್ಲಿ ಸುರಿಯುತ್ತಿರೋ ಮಹಾಮಳೆಗೆ ಇಡೀ ಕೊಡುಗು ಜಿಲ್ಲೆಯೇ ಮುಳುಗಿ ಹೋಗಿದೆ. ಈ ಹಿನ್ನಲೆಯಲ್ಲಿ ಸಂತ್ರಸ್ಥರಿಗೆ ನೇರವಿನ ಹಸ್ತ ಚಾಚಿ ಎಂದು ಟಿವಿ5 ನಡೆಸಿದ "ಕೊಡಗಿಗಾಗಿ ಕರ್ನಾಟಕ" ಅಭಿಯಾನಕ್ಕೆ ರಾಜ್ಯಾದಂತ್ಯ ಭಾರೀ ಬೆಂಬಲ ದೊರೆತಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಎಸ್.ಎಸ್ ಕೆ ಸಮಾಜದ ಯುವಕರು, ಗ್ರಾಮದಲ್ಲಿ ದೇಣಿಗೆ ರೂಪದಲ್ಲಿ 5 ಪಾಕೀಟ್ ಅಕ್ಕಿ, 2 ಬ್ಯಾಗ್ ಬ್ಯಾಂಕೇಟ್, ಸೇರಿದಂತೆ 2 ಬಾಕ್ಸ್ ಬಿಸ್ಕೇಟ್ಗ, ಒಂದು ಚೀಲ ಆಲೂಗಡ್ಡೆಗಳನ್ನು ಸಂಗ್ರಹಿಸಿ ಟಿವಿ 5 ಕೇಂದ್ರ ಕಚೇರಿ ರವಾನೆ ಕಳುಹಿಸಿ ಕೊಟ್ರು.

ಚಿಕ್ಕೋಡಿ ಹುಕ್ಕೇರಿ ಪಟ್ಟಣದಿಂದ ಸಹಾಯವಾಗಲೆಂದು ಸ್ವಾಮೀಜಿಗಳು ಬೀದಿಗಿಳಿದು ನಿದಿ ಸಂಗ್ರಹ ಮಾಡಿದರು. ನಿಡಸೋಶಿ ಮಠದ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಹುಕ್ಕೇರಿ ವಿರಕ್ತಿ ಮಠದ ಶ್ರೀ ಶಿವಬಸವ ಸ್ವಾಮೀಜಿ, ಯರನಾಳ ಶ್ರೀ ಕಾಳಿ ಸ್ವಾಮೀಜಿಗಳು ಸಾರ್ವಜನಿಕರು, ಅಂಗಡಿಕಾರರರು ಬಂದು ಜೋಳಿಗೆಗೆ ಹಣ ಹಾಕಿದರೆ ಇನ್ನೂ ಸಾರ್ವಜನಿಕ ಡೆಬ್ಬಿಯಲ್ಲಿಯೂ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೆಲವೇ ಗಂಟೆಗಳಲ್ಲಿ 2 ಲಕ್ಷ ರೂಪಾಯಿ ಹಣ ಸಂಗ್ರಹ ಮಾಡಿ ನೆರೆ ಸಂತ್ರಸ್ತರಿಗೆ ಸ್ಪಂದಿಸಿದರು.

ಇತ್ತ ಧಾರವಾಡದಲ್ಲಿ, ಬಿಜೆಪಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ವಿವಿಧ ಕಡೆಗಳಿಂದ ವಸ್ತುಗಳ ಸಂಗ್ರಹ ಮಾಡಿದ ಕರ್ಯಾಕರ್ತರು, ಬಟ್ಟೆ, ಹಾಸಿಗೆ, ಬಕೆಟ್,ಆಹಾರ ಪದಾರ್ಥ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ನೆರೆ ಸಂತ್ರಸ್ತರಿಗೆ ರವಾನೆ ಮಾಡೋ ಮೂಲಕ ಶಾಸಕರು ಮಾನವೀಯತೆ ಮೆರೆದಿದ್ದಾರೆ.

ಹಾವೇರಿ ಜಿಲ್ಲಾಡಳಿತ ಮತ್ತು ಜಿಲ್ಲಾಡಳಿತದ ಸಿಬ್ಬಂದಿ, ಜಿಲ್ಲಾ ನಿರ್ಮಿತ ಕೇಂದ್ರದವರು ಐದು ಲಕ್ಷ ರುಪಾಯಿ ಚೆಕ್ ನ್ನು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಪರಿಹಾರ ನಿಧಿಗೆ ನೀಡಿದ್ರೆ, ಜಿಲ್ಲಾಡಳಿತದ ಸಿಬ್ಬಂದಿ ಒಂದು ದಿನದ ವೇತನವನ್ನ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದಾರೆ. ಒಟ್ಟು ಮೂವತ್ತು ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿ, ಸಿಎಂ ಪರಿಹಾರ ನಿಧಿಗೆ ಹಣವನ್ನ ಜಿಲ್ಲಾಧಿಕಾರಿ ಡಾ.ವೆಂಕಟೇಶ.ಎಂ.ವಿ ಮೂಲಕ ಕಳುಹಿಸಿಕೊಟ್ಟರು.

ಮಹಾಮಳೆಗೆ ನಲುಗಿರುವ ಕೊಡಗು ಮಡಿಕೇರಿಗೆ, ಮಡಿಕೇರಿ ವೈದ್ಯರ ಸಂಘ, 2 ಕೋಟಿ ರೂಪಾಯಿ ದೇಣಿಗೆ ನೀಡಿತು. ಈ ದೇಣಿಗೆಯನ್ನು ಆರೋಗ್ಯ ಸಚಿವ ಶಿವಾನಂದ ಎಸ್ ಪಾಟೀಲ್‌ಗೆ ತಲುಪಿಸಿದ ಸಂಘದ ವೈದ್ಯರು, ನಮ್ಮ ಇಲಾಖೆ ಸದಾ ನೆರೆ ಸಂತ್ರಸ್ತರ ನೋವಿಗೆ ನೆರವಾಗಲು ಸಿದ್ದವಿರುವುದಾಗಿ ತಿಳಿಸಿತು.

ಉಡುಪಿಯ ಹೈಟೆಕ್ ಆಸ್ಪತ್ರೆಯವರು ನಡೆಸುವ ಧನ್ವಂತರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು ಸ್ವಯಂ ಪರಿಶ್ರಮದಿಂದ ಸಂಗ್ರಹಿಸಿದ ಸ್ವತ್ತುಗಳನ್ನು ಕೇರಳ ಹಾಗೂ ಕೊಡಗಿಗೆ ಕಳುಹಿಸಲಾಯ್ತು. ಶಾಸಕ ರಘುಪತಿ ಭಟ್ ಉಪಸ್ಥಿತಿಯಲ್ಲಿ ವಿದ್ಯಾರ್ಥಿನಿಯರು ಹಸ್ತಾಂತರ ಮಾಡಿದರು.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಸ್‌ ನಿಲ್ದಾಣ ಮತ್ತು ಮಾರುಕಟ್ಟೆಯ ಬಳಿ ಕನ್ನಡ ವಿವಿ ಹಂಪಿಯ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ದೇಣಿಗೆ ಸಂಗ್ರಹ ಮಾಡಿದರು. ಒಂದು ಲಕ್ಷದ 68 ಸಾವಿರದ 418 ಸಂಗ್ರಹ ಮಾಡಿದರು. ಜೊತೆಗೆ ಹಂಪಿ ವಿವಿಯ ಸಿಬ್ಬಂದಿಗಳ ಒಂದು ದಿನ ವೇತನವನ್ನು ಸುಮಾರು 7.5 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಡಲಾಗುವುದು ಎಂದು ಹಂಪಿ ವಿವಿ ಕುಲಪತಿ ಡಾ.ಮಲ್ಲಿಘಾಗಂಟಿ ಹೇಳಿದರು.

ಒಟ್ಟಾರೆಯಾಗಿ ಟಿವಿ5 ಕೊಡಗಿಗಾಗಿ ಕರ್ನಾಟಕ ಅಭಿಯಾನಕ್ಕೆ, ಕರುನಾಡಿನ ಜನರು ವ್ಯಾಪಕ ಸ್ಪಂದನೆ ನೀಡಿದರು. ಈ ಮೂಲಕ ರಾಜ್ಯದ ಪ್ರತಿ ಜಿಲ್ಲೆಯಿಂದರೂ, ಸಿಎಂ ಪರಿಹಾರ ನಿಧಿಗೆ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಡಗಿಗೆ ಕಳುಹಿಸಿಕೊಡುವ ಮೂಲಕ ನೊಂದವರಿಗೆ ನೆರವಾದರು. ಇಂತಹ ಕರುನಾಡ ಜನತೆಗೆ ಟಿವಿ5 ಕನ್ನಡದ ವತಿಯಿಂದ ಧನ್ಯವಾದಗಳು.

Next Story

RELATED STORIES