ಮಗಳ ಚಿಕಿತ್ಸೆಗಾಗಿ ಬಡ ದಂಪತಿಗಳ ಪರದಾಟ : ಸಹಾಯಕ್ಕಾಗಿ ಮನವಿ

ವಿಜಯಪುರ : ಮಕ್ಕಳಿರಲವ್ವಾ ಮನೆ ತುಂಬ. ಮಕ್ಕಳಿದ್ದ ಮನೆಗೆ ಬೀಸಣಿಕೆ ಯಾತಕ, ಕಂದಮ್ಮ ಒಳಗೋಡಿ ಹೊರ ಬಂದರೆ ಸೂಸ್ಯಾವ ಸುಳಿಗಾಳಿ ಎಂದು ನಮ್ಮ ಜನಪದರು ಮಕ್ಕಳ ಕುರಿತು ಹಾಡಿದ್ದಾರೆ. ಆದರೆ ಇಲ್ಲೊಬ್ಬ ತಾಯಿಗೆ ತನ್ನ ಮಗುವನ್ನು ಉಳಿಸಿಕೊಳ್ಳಲು ಓಡಾಡುವಂಥ ಪರಸ್ಥಿತಿ ಬಂದಿದೆ.
ಕಡು ಬಡತನದಲ್ಲಿರುವ ಹೆತ್ತವ್ವ 6 ವರ್ಷದ ಮಗಳನ್ನು ಉಳಿಸಿಕೊಳ್ಳಲು ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಮಕ್ಕಳೀಗೆ ಬರುವಂತ ಅಪರೂಪದ ಖಾಯಿಲೆಗೆ ತುತ್ತಾಗಿ ಸಾವು ಬದುಕಿನ ಮಧ್ಯ ಹೋರಾಡುತ್ತಿರುವ ಮಗಳನ್ನು ಉಳಿಸಿ ಎಂದು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾಳೆ.
ಹೀಗೆ ಅಲೆಯುತ್ತಿರುವ ತಾಯಿಯ ಹೆಸರು ಕವಿತಾ. ಕಳೆದ 10 ವರ್ಷದ ಹಿಂದೆ ಇಂಡಿ ತಾಲೂಕಿನ ಚೋರಗಿ ಗ್ರಾಮದ ಚಿದಾನಂದ ಹೊನಕೇರಿ ಎಂಬುವರ ಜೊತೆಗೆ ವಿವಾಹವಾಗಿತ್ತು. ಮನೆಯಲ್ಲಿ ಬಡತನವಿದ್ದರೂ ಪ್ರೀತಿಗೆ ಬಡತನವಿರಲಿಲ್ಲಾ. ಇಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಕ್ಕಳಾಗಿದ್ದರು.
ಮನೆ ಮಕ್ಕಳು ಎಂದು ಸಂತೋಷದಿಂದ ಇದ್ದ ಕುಟುಂಬಕ್ಕೀಗಾ ಮಗಳ ಹೊಟ್ಟೆ ನೋವು ರೂಪದಲ್ಲಿ ಸಮಸ್ಯೆಯ ಎದುರಾಗಿದೆ. ಇವರ ಮೊದಲ ಮಗಳು ತೇಜಸ್ವಿನಿ ಕಳೆದ 6 ತಿಂಗಳ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೇಳೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಂತರ ಮತ್ತಷ್ಟು ನೋವು ಉಲ್ಬಣಿಸಿದಾಗ ವಿಜಯಪುರ ನಗರದ ಅಲ್ ಅಮೀನ್ ಹಾಸ್ಪಿಟಲ್ ಗೆ ದಾಖಲು ಮಾಡಿದ್ದಾರೆ. ಕರುಳಿನಲ್ಲಿ ಗಂಟಾಗಿದ್ದು ಅದು ಹೊಟ್ಟೆಯಲ್ಲಿಯೇ ಒಡೆದಿದೆ ಎಂದು 15 ದಿನ ಚಿಕಿತ್ಸೆ ನೀಡಿದ್ದರು. ವೈದ್ಯಕೀಯ ಭಾಷೆಯಲ್ಲಿ ( pancreas ) ಪ್ಯಾಕ್ರೀಯಾಸ್ ಎಂದು ಕರೆಯಲಾಗುತ್ತದೆ. ಅಲ್ಲಿ ಚಿಕಿತ್ಸೆಗೂ ಬಾಲಕಿ ತೇಜಸ್ವನಿ ಹೊಟ್ಟೆ ನೋವು ಕಡಿಮೆಯಾಗಿಲ್ಲ.
ಪೂನಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನ ಚಿಕಿತ್ಸೆಗೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ತೇಜಸ್ವಿನಿಯನ್ನು ಮಹಾರಾಷ್ಟ್ರದ ಸೊಲ್ಲಾಪುರ ನಗರದ ಚೈಲ್ಡ್ ಕೇರ್ ಹಾಸ್ಪಿಟಲ್, ಸಾಂಗ್ಲಿಯ ಖಾಸಗಿ ಆಸ್ಪತ್ರೆಗೂ ದಾಖಲು ಮಾಡಿದ್ದರು. ಅಲ್ಲಿಯ ಚಿಕಿತ್ಸೆಗೂ ತೇಜಸ್ವಿನಿಗೆ ಗುಣವಾಗಲಿಲ್ಲಾ. ಕೊನೆಗೆ ಕಳೆದ 15 ದಿನಗಳಿಂದ ಹೈದರಾಬಾದ್ ಏಶಿಯನ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.
ಏಶಿಯನ್ ಆಸ್ಪತ್ರೆ ಸೇರಿದ ಸದ್ಯ ತೇಜಸ್ವಿನಿ ಪೋಷಕರು ಐದಾರು ಲಕ್ಷ ರೂಪಾಯಿ ಚಿಕಿತ್ಸೆಗೆ ವ್ಯಯಿಸಿದ್ದಾರೆ. ಮೈಮೇಲಿದ್ದ ಒಡವೆ ವಸ್ತ್ರ ಮಾರಾಟ ಮಾಡಿದ್ದಾರೆ. ಇದ್ದ ಅಲ್ಪಸ್ವಲ್ಪ ಜಮೀನನ್ನೂ ಅಡವಿಟ್ಟಿದ್ದಾರೆ. ಇಷ್ಟಾಗಿಯೂ ಮಗಳ ಚಿಕಿತ್ಸೆಗೆ ಹಣ ಸಾಲದಾಗಿದೆ. ಏಶಿಯನ್ ಆಸ್ಪತ್ರೆಯವರು ಕನಿಷ್ಟು ಮೂರು ತಿಂಗಳುಗಳ ಕಾಲ ಚಿಕಿತ್ಸೆ ನೀಡಬೇಕೆಂದು ತಿಳಿಸಿದ್ದಾರಂತೆ.
ಸದ್ಯ ತೇಜಸ್ವಿನಿ ಚಿಕಿತ್ಸೆಗಾಗಿ ಏಶಿಯನ್ ಆಸ್ಪತ್ರೆಗೆ ಹಣ ನೀಡಲೂ ಸಹ ಇವರೆಲ್ಲಾ ಪರದಾಡುತ್ತಿದ್ದಾರೆ. ಆಸ್ಪತ್ರೆಗೆ ಹಣ ಕಟ್ಟದ ಕಾರಣ ತೇಜಸ್ವಿನಿಗೆ ಚಿಕಿತ್ಸೆ ಸ್ಥಗಿತಗೊಳಿಸಿ ಐಸಿಯೂನಿಂದ ಜನರಲ್ ವಾರ್ಡಿಗೆ ಸ್ಥಳಾಂತರ ಮಾಡಿದ್ದಾರಂತೆ.
ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ ಆಕೆಯ ಪ್ರಾಣಕ್ಕೆ ಅಪಾಯವಿದ್ದರೂ ಸಹ ಹೈದರಾಬಾದಿನ ಏಶಿಯನ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲವಂತೆ. ಹಣ ಕಟ್ಟಿದರೆ ಮಾತ್ರ ಚಿಕಿತ್ಸೆ ನೀಡೋದಾಗಿ ಅಲ್ಲಿನ ವೈದ್ಯರು ಹೇಳಿದ್ದಾರಂತೆ.
ಸ್ಥಳಿಯ ಶಾಸಕರು ಹಾಗೂ ಸಿಎಂ ಕುಮಾರಸ್ವಾಮಿ ಅವರಿಗೆ ಭೇಟಿ ಮಾಡಿಸಿ ಎಂದು ಅಂಗಲಾಚುತ್ತಿದ್ದಾರೆ. ಸರ್ಕಾರ, ಸಂಘ ಸಂಸ್ಥೆಗಳು, ದಾನಿಗಳು ಸಹಾಯ ಮಾಡಿದರೆ ನಮ್ಮ ಮಗಳನ್ನು ಉಳಿಸಬಹುದೆಂದು ಅಲೆದಾಡುತ್ತಿದ್ದಾರೆ.
ತೇಜಸ್ವಿನಿ ಚಿಕಿತ್ಸೆಗೆ ಸಹಾಯದ ನೆರವು ಬೇಕಾಗಿದೆ. ನೆರವು ನೀಡಲಿಚ್ಛಿಸುವವರು ಇವರ ಕೆಳಗಿನ ಬ್ಯಾಂಕ್ ಖಾತೆಗೆ ತಮ್ಮ ಕೈಲಾದ ಸಹಾಯ ಮಾಡಿ, ಚಿಕಿತ್ಸೆಗೆ ನೆರವಾಗಲು ಮನವಿ ಮಾಡಿದ್ದಾರೆ.
ಬ್ಯಾಂಕ್ ಖಾತೆಯ ಮಾಹಿತಿ..
Chidanand S Honakeri, SBI Bank,
Ac/No: 20184592938,
IFSC: SBIN0015639, SBI HitnalliBranch
Vijayapur Taluk And District.
ವರದಿ : ಶರಣು ಮಸಳಿ, ಟಿವಿ5 ವಿಜಯಪುರ