Top

ಈಗ ಸೋಷಿಯಲ್​ ಮೀಡಿಯಾದಲ್ಲಿ ಸೈರಾ ಟೀಸರ್ ಟ್ರೆಂಡ್.!

ಈಗ ಸೋಷಿಯಲ್​ ಮೀಡಿಯಾದಲ್ಲಿ ಸೈರಾ ಟೀಸರ್ ಟ್ರೆಂಡ್.!
X

ಮೆಗಾಸ್ಟಾರ್​​ ಚಿರಂಜೀವಿ, ಅಭಿಮಾನಿಗಳ ಕಾಯುವಿಕೆಗೆ ಬ್ರೇಕ್​ ಬಿದ್ದಿದೆ.. ಸೈರಾ ನರಸಿಂಹ ರೆಡ್ಡಿ ಅವತಾರದಲ್ಲಿ ಚಿರು ದರ್ಶನ ಕೊಟ್ಟಾಗಿದೆ.. ಸೋಷಿಯಲ್​ ಮೀಡಿಯಾದಲ್ಲಿ ಸೈರಾ ಟೀಸರ್ ಈಗ ಟ್ರೆಂಡಾಗಿದೆ.. ಮುಂದಿನ ವರ್ಷ ಬಾಕ್ಸಾಫೀಸ್​ನಲ್ಲಿ ನರಸಿಂಹ ರೆಡ್ಡಿಯಾಗಿ ಮೆಗಾಸ್ಟಾರ್ ಸೆನ್ಸೇಷನ್ ಕ್ರಿಯೇಟ್​​ ಮಾಡೋದು ಪಕ್ಕಾ ಆಗಿದೆ..

ಸೈರಾ ನರಸಿಂಹ ರೆಡ್ಡಿ.. ಮೆಗಾಪವರ್ ಸ್ಟಾರ್ ರಾಮ್​ಚರಣ್ ತೇಜಾ ಡ್ರೀಮ್ ಪ್ರಾಜೆಕ್ಟ್. ಬಾಹುಬಲಿ ರೇಂಜ್​​ನಲ್ಲಿ ಸೌತ್​ ಸಿನಿದುನಿಯಾದಲ್ಲಿ ನಿರ್ಮಾಣವಾಗ್ತಿರೋ ಐತಿಹಾಸಿಕ ಸಿನಿಮಾ.. ಮೆಗಾಸ್ಟಾರ್ ಚಿರಂಜೀವಿ ಸ್ವಾತಂತ್ರ ಯೋಧ ಉಯ್ಯಲವಾಡ ನರಸಿಂಹ ರೆಡ್ಡಿ ಅವತಾರದಲ್ಲಿ ದರ್ಶನ ಕೊಟ್ಟಿರೋ ಚಿತ್ರ.. ಸದ್ಯ ಮೆಗಾಸ್ಟಾರ್ ಮೆಗಾ ಬರ್ತ್​ಡೇ ಸ್ಪೆಷಲ್ಲಾಗಿ ಸೈರಾ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ..

https://twitter.com/KonidelaPro/status/1031783636905877505

ಬ್ರಿಟೀಷರ ಎದೆ ಮೇಲೆ ಬಾವುಟ ಹಾರಿಸಿದ ಸಿಂಹ..!

ನರಸಿಂಹರೆಡ್ಡಿ ಅವತಾರದಲ್ಲಿ ಧೂಳೆಬ್ಬಿಸಿದ ಚಿರಂಜೀವಿ

ಯೆಸ್.. ಮೋಸ್ಟ್ ಅವೇಡೆಟ್​​ ಸೈರಾ ನರಸಿಂಹ ರೆಡ್ಡಿ ಟೀಸರ್ ರಿವೀಲ್​ ಆಗಿದೆ.. ಹುಟ್ಟುಹಬ್ಬಕ್ಕೆ ಒಂದು ದಿನ ಮೊದ್ಲೆ ನರಸಿಂಹ ರೆಡ್ಡಿಯಾಗಿ ದರ್ಶನ ಕೊಟ್ಟಿರೋ ಚಿರು, ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ.. ಬ್ರಿಟೀಷರ ವಿರುದ್ಧ ಹೋರಾಡುವ ಸ್ವಾತಂತ್ರ್ಯ ಯೋಧನ ಪಾತ್ರದಲ್ಲಿ ಚಿರು ಕಮಾಲ್ ಮಾಡಿದ್ದಾರೆ.. ಮೊದಲ ನೋಟದಲ್ಲೇ ಸೈರಾ ಟೀಸರ್​​, ವಾವ್ ಅನ್ನುವಂತಿದೆ..

ಭಾರತೀಯರನ್ನ ಕಾಲ ಕಸವಾಗಿ ಕಾಣುವ ಬ್ರಿಟೀಷರು.. ಪರಂಗಿಗಳ ಉಪಟಳಕ್ಕೆ ತಿರುಗಿಬೀಳೋ ನರಸಿಂಹ ರೆಡ್ಡಿ.. ಬ್ರಿಟೀಷರ ಕೋಟೆ ಮೇಲೆ ಬಾವುಟ ನೆಟ್ಟು, ವೀರ.. ಕುದುರೆ ಏರಿ ಆಂಗ್ಲರ ಹುಟ್ಟಡಗಿಸೋ ಪರಾಕ್ರಮಿ.. ಅಬ್ಬಬ್ಬಾ ಸೈರಾ ನರಸಿಂಹ ರೆಡ್ಡಿ ಸ್ಯಾಂಪಲ್​ ನೋಡ್ತಿದ್ರೆ, ಮೈ ರೋಮಾಂಚನಗೊಳ್ಳುತ್ತೆ..

ಉಯ್ಯಾಲವಾಡ ನರಸಿಂಹ ರೆಡ್ಡಿಯಾಗಿ ಚಿರು ಖದರ್

ಗ್ರಾಫಿಕ್ಸ್, ಬಿಜಿಎಂ, ಸಿನಿಮಾಟೋಗ್ರಫಿ ಸಿಂಪ್ಲಿ ಸೂಪರ್

ಸುರೇಂದರ್ ರೆಡ್ಡಿ ನಿರ್ದೇಶನದ ಐತಿಹಾಸಿಕ ಸಿನಿಮಾ ಸೈರಾ ನರಸಿಂಹ ರೆಡ್ಡಿ.. 18 ಶತಮಾನದ ಆಂಧ್ರದ ಸ್ವಾತಂತ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿಯ ಸಾಹಸದ ಕಥೆಯಿದು.. ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ನರಸಿಂಹರೆಡ್ಡಿ ಪಾತ್ರದಲ್ಲಿ ಚಿರಂಜೀವಿ, ಬಣ್ಣ ಹಚ್ಚಿದ್ದು, ನರಸಿಂಹರೆಡ್ಡಿ ಲುಕ್, ರೋರಿಂಗ್ ಪರ್ಫಾರ್ಮೆನ್ಸ್​​ಗೆ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.. ಮೆಗಾ ಬರ್ತ್​ಡೇಗೆ ಪರ್ಫೆಕ್ಟ್​ ಗಿಫ್ಟ್ ಅಂತ ಎಂಜಾಯ್ ಮಾಡ್ತಿದ್ದಾರೆ..

ಸುರೇಂದರ್ ರೆಡ್ಡಿ ಟೇಕಿಂಗ್, ರತ್ನವೇಲು ಕ್ಯಾಮರಾ ವರ್ಕ್, ಅಮಿತ್ ತ್ರಿವೇದಿ ಬಿಜಿಎಂ ಸಖತ್ ಕಿಕ್ ಕೊಡ್ತಿದೆ.. ಚಿತ್ರಕ್ಕಾಗಿ ಹಾಕಿರೋ ಅದ್ದೂರಿ ಸೆಟ್ ಕಣ್ಣಿಗೆ ಹಬ್ಬ ಅನ್ನುವಂತಿದೆ.. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ಈ ಐತಿಹಾಸಿಕ ಕಥೆ ಬೇಕಾದ ಅಷ್ಟೂ ಅದ್ದೂರಿತನ ಸಿನಿಮಾದಲ್ಲಿದೆ ಅನ್ನೋ ಟೀಸರ್​ನಲ್ಲೇ ಗೊತ್ತಾಗ್ತಿದೆ.. ಟೀಸರ್​ ನೋಡ್ತಿದ್ರೆ, ಸೈರಾ ನರಸಿಂಹ ರೆಡ್ಡಿ, ಮತ್ತೊಂದು ಬಾಹುಬಲಿ ಆಗೋ ಸೂಚನೆ ಸಿಕ್ತಿದೆ..

ಸೋಷಿಯಲ್​ ಮೀಡಿಯಾದಲ್ಲಿ ಸೈರಾ ಟೀಸರ್ ಹವಾ

ಮುಂದಿನ ವರ್ಷ ತೆರೆಮೇಲೆ ನರಸಿಂಹ ರೆಡ್ಡಿ ಆರ್ಭಟ

ಬಹುತಾರಾಗಣದ ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಸಿನಿಮಾ ಸೈರಾ ನರಸಿಂಹ ರೆಡ್ಡಿ.. ಸದ್ಯ ಹಗಲು ರಾತ್ರಿ ಈ ಐತಿಹಾಸಿಕ ಚಿತ್ರದ ಶೂಟಿಂಗಹ್ ನಡೀತಿದೆ.. 18ನೇ ಶತಮಾನ ಕಥೆ ಆಗಿರೋದ್ರಿಂದ ಅಂದಿಕ ಕಾಲಘಟ್ಟವನ್ನ ಕಟ್ಟಿಕೊಡೋಕೆ ಚಿತ್ರತಂಡ ಸಿಕ್ಕಾಪಟ್ಟೆ ಸರ್ಕಸ್ ಮಾಡ್ತಿದೆ.. ಅಮಿತಾಬ್ ಬಚ್ಚನ್, ಸುದೀಪ್, ನಯನತಾರಾ, ವಿಜಯ್ ಸೇತುಪತಿ, ತಮನ್ನಾ ಸೇರಿ ಭಾರೀ ತಾರಾಗಣ ಸೈರಾ ತಂಡದಲ್ಲಿದೆ..

ಸದ್ಯ ಯೂಟ್ಯೂಬ್​ನಲ್ಲಿ ಬೇಜಾನ್ ಸೌಂಡ್ ಮಾಡ್ತಿರೋ ಸೈರಾ ನರಸಿಂಹ ರೆಡ್ಡಿ ಟೀಸರ್, ಲಕ್ಷ ಲಕ್ಷ ವೀವ್ಸ್ ಪಡೆದುಕೊಳ್ತಿದೆ.. ಅಷ್ಟೆ ಅಲ್ಲ ಟೀಸರ್​ ನೋಡಿದವರೆಲ್ಲಾ ಮೆಚ್ಚಿ ಕೊಂಡಾಡ್ತಿದ್ದು, ಸಿನಿಮಾಗಾಗಿ ಕಾತರರಾಗಿದ್ದಾರೆ.. ಮೇಕಿಂಗ್ ಹಂತದಲ್ಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಈ ಐತಿಹಾಸಿಕ ಸಿನಿಮಾ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಮುಂದಿನ ವರ್ಷ ತೆರೆಗಪ್ಪಳಿಸಲಿದೆ..

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES