Top

ಏಷ್ಯನ್ ಗೇಮ್ಸ್: ಭಾರತಕ್ಕೆ ಚಿನ್ನ ತಂದ 16 ವರ್ಷದ ಬಾಲಕ!

ಏಷ್ಯನ್ ಗೇಮ್ಸ್: ಭಾರತಕ್ಕೆ ಚಿನ್ನ ತಂದ 16 ವರ್ಷದ ಬಾಲಕ!
X

ಭಾರತದ 16 ವರ್ಷದ ಬಾಲಕ ಸೌರಭ್ ಚೌಧರಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಶೂಟಿಂಗ್ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಮತ್ತೊಬ್ಬ ಭಾರತೀಯ ಅಭಿಷೇಕ್ ವರ್ಮಾ ಇದೇ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತರಾಗಿದ್ದಾರೆ.

ಮಂಗಳವಾರ ನಡೆದ ಪುರುಷರ 10.ಮೀ. ಏರ್ ಪಿಸ್ತೂಲು ವಿಭಾಗದಲ್ಲಿ 240.7 ಅಂಕ ಸಂಪಾದಿಸುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಇದು ಏಷ್ಯನ್ ಗೇಮ್ಸ್ ದಾಖಲೆ ಕೂಡ ಆಗಿದೆ. ಅಭಿಷೇಕ್ 219.3 ಅಂಕ ಪಡೆದು ಕಂಚಿನ ಪದಕ ಗೆದ್ದುಕೊಂಡರು.

ಜಪಾನ್​ನ ಟೊಮೊಯುಕಿ ಮಟ್ಸುಬಾ 239.7 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದುಕೊಂಡರು. ಭಾರತೀಯ ಜೋಡಿ ಎರಡು ಪದಕ ಗೆಲ್ಲುವ ಮೂಲಕ ಭಾರತ ಒಟ್ಟಾರೆ ಪದಕ 7ಕ್ಕೇರಿತು.

Next Story

RELATED STORIES