Top

ಕೊಡಗು ನೆರೆ ಸಂತ್ರಸ್ತರ ನೆರವಿಗೆ ಸ್ಪಂದಿಸಿದ ಮುರುಘಾ ಶ್ರೀ

ಕೊಡಗು ನೆರೆ ಸಂತ್ರಸ್ತರ ನೆರವಿಗೆ ಸ್ಪಂದಿಸಿದ ಮುರುಘಾ ಶ್ರೀ
X

ಚಿತ್ರದುರ್ಗ : ಕೊಡಗಿನ ನೆರೆ ಸಂತ್ರಸ್ತರ ನೆರವಿಗೆ ಧಾವಿಸಲು ಇದೀಗ ಜಿಲ್ಲೆಯ ಮುರುಘಾ ಮಠ ಸಜ್ಜಾಗಿದೆ. ಮಠದಿಂದ ಸೂಕ್ತ ವೈದ್ಯಕೀಯ ಸೇವೆ ನೀಡುವುದಾಗಿ ಮುರುಘಾ ಶ್ರೀಗಳು ಪ್ರಕಟಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ನೆರೆ ಸಂತ್ರಸ್ತರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಮುಂದಾಗಿದ್ದೇವೆ.

ಇದಕ್ಕಾಗಿ ಕೊಡುಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಈಗಾಗಲೇ ಸೋಮವಾರಪೇಟೆ, ವಿರಾಜಪೇಟೆ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮೂರು ಕಡೆಕಡೆಗಳಲ್ಲಿ ಆಶ್ರಯ ಕೇಂದ್ರಗಳನ್ನು ತೆರೆದಿರುವುದಾಗಿ ತಿಳಿಸಿದರು.

ಚಿತ್ರದುರ್ಗದ ಮುರುಘಾ ಮಠ, ಇದೀಗ ವೈದ್ಯಕೀಯ ನೆರವು ನೀಡಲು ಸಜ್ಜಾಗಿದೆ. ಮಠಕ್ಕೆ ಸೇರಿದ ಬಸವೇಶ್ವರ ಆಸ್ಪತ್ರೆಯ ಸುಮಾರು ಹದಿನೇಳು ಮಂದಿ ವೈದ್ಯರ ತಂಡ ಹಾಗು ಅಗತ್ಯ ಜೌಷಧಗಳನ್ನ ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ. ನೆರೆ ಸಂತ್ರಸ್ತರಿಗೆ ಆಶ್ರಯ ನೀಡುವ ಜೊತೆಗೆ ಸಂತ್ರಸ್ತರ ಮಕ್ಕಳಿಗೆ ಉಚಿತವಾಗಿ ಶಿಕ್ಷಣದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ವರದಿ : ವೀರೇಶ್‌ ಚಳ್ಳಕೆರೆ, ಟಿವಿ5 ಚಿತ್ರದುರ್ಗ

Next Story

RELATED STORIES