Top

ಆಂಗ್ಲರ ವಿರುದ್ಧ ಶತಕ: ಕೊಹ್ಲಿ ಮುಡಿಗೆ ಹಲವು ದಾಖಲೆಗಳು

ಆಂಗ್ಲರ ವಿರುದ್ಧ ಶತಕ: ಕೊಹ್ಲಿ ಮುಡಿಗೆ ಹಲವು ದಾಖಲೆಗಳು
X

ನಾಟಿಂಗ್​ಹ್ಯಾಮ್​: ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಶತಕ ಬಾರಿಸಿದರೆ ಹಲವಾರು ದಾಖಲೆಗಳು ನಿರ್ಮಾಣವಾಗುತ್ತವೆ ಅನ್ನುವ ಮಾತು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ನಿಜವಾಗಿದೆ.

ಇಂಗ್ಲೆಂಡ್ ವಿರುದ್ಧ ಶತಕ ಬಾರಿಸುವ ಮೂಲಕ ಕೊಹ್ಲಿ ಬೇರೆ ಉಪಖಂಡದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ 4ನೇ ಏಷ್ಯಾದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದುವರೆಗೂ ಕ್ರಿಕೆಟ್ ದಂತ ಕತೆ ಸಚಿನ್ ತೆಂಡೂಲ್ಕರ್ (18), ಸುನೀಲ್ ಗವಾಸ್ಕರ್ (15), ರಾಹುಲ್ ದ್ರಾವಿಡ್ (14) ಈ ಸಾಧನೆ ಮಾಡಿದ್ದಾರೆ.

ಭಾರತೀಯ ಆಟಗಾರ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ನಲ್ಲಿ ಭಾರತ ಪರ ಅತಿ ಹೆಚ್ಚು ಶತಕ ಬಾರಿಸಿದ ನಾಲ್ಕನೆ ಬ್ಯಾಟ್ಸ್ ಮನ್​ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನಿನ್ನೆ ಕೊಹ್ಲಿ ಟೆಸ್ಟ್ ನಲ್ಲಿ 23ನೇ ಶತಕ ಬಾರಿಸಿದ ಸಾಧನೆ ಮಾಡಿದರು.

ಇದರೊಂದಿಗೆ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್​ ಸರಿಸಮಾನವಾಗಿ ದಾಖಲೆ ಬರೆದ್ರು. ಸಚಿನ್ ತೆಂಡೂಲ್ಕರ್​ (51), ರಾಹುಲ್ ದ್ರಾವಿಡ್​ (36) ಮತ್ತು ಸುನೀಲ್ ಗಾವಸ್ಕರ್ (34) ಟೆಸ್ಟ್ ನಲ್ಲಿ ಶತಕ ಸಿಡಿಸಿದ್ದಾರೆ.

ಹೆಚ್ಚು ಶತಕ ಹೊಡೆದ 3ನೇ ನಾಯಕ

ನಾಯಕನಾಗಿ ವಿರಾಟ್ ಕೊಹ್ಲಿ ಇದುವರೆಗೂ 16 ಶತಕ ಬಾರಿಸಿದ್ದಾರೆ. ಕೊಹ್ಲಿ ಅತಿ ಹೆಚ್ಚು ಶತಕ ಬಾರಿಸಿದ ಮೂರನೇ ಟೆಸ್ಟ್ ನಾಯಕ ಎನಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್​ ಸ್ಮಿತ್ (25), ರಿಕಿ ಪಾಂಟಿಂಗ್ (19) ಶತಕ ಬಾರಿಸಿ ಮೊದಲೆರಡು ಸ್ಥಾನಗಳನ್ನ ಅಲಂಕರಿಸಿದ್ದಾರೆ.

ಆಂಗ್ಲರ ನಾಡಲ್ಲಿ ಹೆಚ್ಚು ರನ್​ ಬಾರಿಸಿದ ನಾಯಕ

ಆತಿಥೇಯ ಆಂಗ್ಲರ ವಿರುದ್ಧ ಟಿ-20, ಏಕದಿನ ಮತ್ತು ಟೆಸ್ಟ್ ಆವೃತ್ತಿಗಳಲ್ಲಿ ರನ್ ಮಳೆ ಸುರಿಸಿರುವ ನಾಯಕ ಕೊಹ್ಲಿ ಆಂಗ್ಲರ ನಾಡಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಭಾರತದ ಮೊದಲ ನಾಯಕ ಎನಿಸಿದ್ದಾರೆ.

ಆಂಗ್ಲರ ವಿರುದ್ದ ಕೊಹ್ಲಿ ಮೂರು ಆವೃತ್ತಿಗಳಿಂದ 430 ರನ್​ ಗಳಿಸಿದ್ದಾರೆ. ಈ ಹಿಂದೆ ತಂಡದ ಮಾಜಿ ನಾಯಕ ಮೊಹ್ಮದ್​ ಅಜರದ್ದೀನ್ 426 ರನ್​ ಗಳಿಸಿದ್ದು. 2002ರಲ್ಲಿ ಸೌರವ್​ ಗಂಗೂಲಿ 351, 2014ರಲ್ಲಿ ಧೋನಿ 349, 1952 ಹಜಾರೆ 333 ರನ್​ ಗಳಿಸಿದ್ದರು.

Next Story

RELATED STORIES