Top

ತಪ್ಪಾಗಿದೆ ಕ್ಷಮೆ ಕೇಳುತ್ತೇನೆ : ಸಚಿವ ಹೆಚ್‌.ಡಿ.ರೇವಣ್ಣ

ತಪ್ಪಾಗಿದೆ ಕ್ಷಮೆ ಕೇಳುತ್ತೇನೆ : ಸಚಿವ ಹೆಚ್‌.ಡಿ.ರೇವಣ್ಣ
X

ಬೆಂಗಳೂರು : ಕಳೆದ ಶನಿವಾರ ಹಾಸನದ ರಾಮನಾಥಪುರದ ನಿರಾಶ್ರಿತರ ಕೇಂದ್ರಕ್ಕೆ ಪಿಡಬ್ಲ್ಯುಡಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಶನಿವಾರ ಶಾಸಕ ಎಟಿ ರಾಮಸ್ವಾಮಿ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ನಿರಾಶ್ರಿತರ ಸಮಸ್ಯೆ ಕೇಳುವ ಮೊದಲೇ ಬಿಸ್ಕೆಟ್ ಅನ್ನು ನಿರಾಶ್ರಿತರ ಕೇಂದ್ರದಲ್ಲಿದ್ದ ಸಂತ್ರಸ್ತರಿಗೆ ಎಸೆದದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಲೋಕೋಪಯೋಗಿ ಸಚಿವ ಹೆಚ್‌ ಡಿ ರೇವಣ್ಣ, ನಾನು ಬೇಕು ಎಂದು ಬಿಸ್ಕೆಟ್ ಎಸೆದಿಲ್ಲ. ದೂರ ಇದ್ದ ಜನರಿಗೆ ನೀಡಲು ತೊಂದರೆ ಆಗಿತ್ತು. ಹೀಗಾಗಿ ಎಸೆಯಬೇಕಾಯ್ತು. ಪ್ರಕರಣ ಸಂಬಂಧ ಸಂತ್ರಸ್ತರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಸಚಿವ ಹೆಚ್‌ ಡಿ ರೇವಣ್ಣ, ಅದು ಉದ್ದೇಶ ಪೂರ್ವಕ ಅಲ್ಲ. ಈ ಬಗ್ಗೆ ಬಿಜೆಪಿಯವರು ನನ್ನನ್ನು ಕ್ಷಮೆ ಕೇಳಬೇಕು ಎನ್ನುತ್ತಿದ್ದಾರೆ. ನಾನು ಕ್ಷಮೆ ಕೇಳಲು ಸಿದ್ದ. ಜನರ ಕ್ಷಮೆ ಕೂಡ ಕೇಳುತ್ತೇನೆ ಎಂದರು.

Next Story

RELATED STORIES