Top

3ನೇ ಟೆಸ್ಟ್​: ಇಂಗ್ಲೆಂಡ್​ಗೆ 521 ರನ್ ಗುರಿ ನೀಡಿದ ಭಾರತ

3ನೇ ಟೆಸ್ಟ್​: ಇಂಗ್ಲೆಂಡ್​ಗೆ 521 ರನ್ ಗುರಿ ನೀಡಿದ ಭಾರತ
X

ನಾಟಿಂಗ್​ಹ್ಯಾಮ್​: ನಾಯಕ ವಿರಾಟ್​ ಕೊಹ್ಲಿ (103) ಅವರ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಆತಿಥೇಯ ಆಂಗ್ಲರಿಗೆ ಗೆಲ್ಲಲು 521 ರನ್​ಗಳ ಗೆಲುವಿನ ಗುರಿ ನೀಡಿದೆ. ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು ಪಂದ್ಯ ಕುತೂಹಲ ಘಟ್ಟ ತಲುಪಿದೆ.

ಟ್ರೆಂಟ್​ ಬ್ರಿಡ್ಜ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಸೋಮವಾರ 2 ವಿಕೆಟ್​ಗೆ 124 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ 7 ವಿಕೆಟ್​ಗೆ 352 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಮೊದಲ ಇನಿಂಗ್ಸ್ ನಲ್ಲಿ 168 ರನ್ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ಇದೀಗ ಗೆಲ್ಲಲು 521 ರನ್ ಗಳಿಸಬೇಕಿತ್ತು. ದಿನದಾಂತ್ಯಕ್ಕೆ ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 23 ರನ್ ಗಳಿಸಿದ್ದು, ಇನ್ನೂ 498 ರನ್ ಗಳಿಸಬೇಕಿದೆ.

ನಾಯಕ ವಿರಾಟ್ ಕೊಹ್ಲಿ (103) ಶತಕ ಸಿಡಿಸಿದರೆ ಚೇತೇಶ್ವರ ಪೂಜಾರ 72 ರನ್ ಗಳಿಸಿದರು. ಇವರಿಬ್ಬರು ಮೂರನೇ ವಿಕೆಟ್​ಗೆ 159 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಮುನ್ನಡೆಸಿದರು. ಹಾರ್ದಿಕ್ ಪಾಂಡ್ಯ ಅಜೇಯ 52 ರನ್ ಬಾರಿಸಿ ತಾನೊಬ್ಬ ಆಲ್​ರೌಂಡರ್ ಎಂಬುದನ್ನು ನಿರೂಪಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಭಾರತ 329 ಮತ್ತು 2ನೇ ಇನಿಂಗ್ಸ್ 7 ವಿಕೆಟ್​ಗೆ 352 ಡಿಕ್ಲೇರ್ (ಕೊಹ್ಲಿ 103, ಪೂಜಾರ 72, ಹಾರ್ದಿಕ್ 52, ರಶೀದ್ 101ಕ್ಕೆ 3, ಸ್ಟೋಕ್ಸ್ 68ಕ್ಕೆ 2).
  • ಇಂಗ್ಲೆಂಡ್ 161 ಮತ್ತು 2ನೇ ಇನ್ನಿಂಗ್ಸ್ ವಿಕೆಟ್ ನಷ್ಟವಿಲ್ಲದೇ 23 (ಕುಕ್ ಅಜೇಯ 9, ಜೆನ್ನಿಂಗ್ಸ್ ಅಜೇಯ 13)

Next Story

RELATED STORIES