ಚೊಚ್ಚಲ ಟೆಸ್ಟ್ನಲ್ಲೇ ರಿಷಭ್ ವಿಶಿಷ್ಟ ದಾಖಲೆ...!

ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೆಸ್ಟ್ಗೆ ಪಾದರ್ಪಣೆ ಮಾಡಿದ ವಿಕೆಟ್ ಕೀಪರ್ ರಿಷಭ್ ಪಂತ್ 5 ವಿಕೆಟ್ ಪಡೆಯುವ ಮೂಲಕ ಮೊದಲ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದ 2ನೇ ದಿನವಾದ ಭಾನುವಾರ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಆಲೌಟಾಗಿದ್ದು, ವಿಕೆಟ್ ಹಿಂದೆ ರಿಷಭ್ ಪಂತ್ 5 ವಿಕೆಟ್ ಪಡೆದು ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಪಡೆದ ಕೆಲವೇ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ರಿಷಭ್ ಪಂತ್ ಆರಂಭಿಕ ಅಲೆಸ್ಟರ್ ಕುಕ್, ಕೆಟನ್ ಜೆನ್ನಿಂಗ್ಸ್ , ಒಲಿವರ್ ಪೋಪ್ , ಕ್ರಿಸ್ ವೋಕ್ಸ್ ಮತ್ತು ಆದೀಲ್ ರಶೀದ್ ಕ್ಯಾಚ್ ಹಿಡಿದು ಗಮನ ಸೆಳೆದರು.
ಇದರೊಂದಿಗೆ ರಿಷಬ್ ಪಂತ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 5 ಕ್ಯಾಚ್ ಹಿಡಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಪಾತ್ರರಾದರು.
ರಿಷಭ್ ಇದಲ್ಲದೇ 30 ವರ್ಷದ ಹಳೆ ದಾಖಲೆಯನ್ನ ಸರಿಗಟ್ಟಿದ್ದರು. ಆಸ್ಟ್ರೇಲಿಯಾದ ಬ್ರಿಯಾನ್ ಟಾಬರ್ (1966ರಲ್ಲಿ ದ.ಆಫ್ರಿಕಾ ವಿರುದ್ಧ ಜೋಹನ್ಸ್ ಬರ್ಗ್) , ಆಸ್ಟ್ರೇಲಿಯಾದ ಮತ್ತೊರ್ವ ಆಟಗಾರ ಜಾನ್ ಮೆಕ್ಲೀನ್ (1978) ಚೊಚ್ಚಲ ಟೆಸ್ಟ್ ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದರು.
ಇದೀಗ ರಿಷಬ್ ಪಂತ್ ( 20 ವರ್ಷ 319 ದಿನ) ಒಂದೇ ಇನ್ನಿಂಗ್ಸ್ ನಲ್ಲಿ ಐದು ಕ್ಯಾಚ್ಗಳನ್ನ ಹಿಡಿದ ಅತಿ ಕಿರಿಯ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ರಿಷಭ್ 4ನೆ ಕ್ಯಾಚ್ ಹಿಡಿಯುವ ಮೂಲಕ ಚೊಚ್ಚಲ ಪಂದ್ಯದಲ್ಲಿ ನಾಲ್ಕು ಕ್ಯಾಚ್ ಹಿಡಿದಿದ್ದ ಎನ್.ಎಸ್. ತಮಹ್ನೆ (ಪಾಕಿಸ್ತಾನ ವಿರುದ್ಧ 1955) ಮತ್ತು ಸಿಟಿ ಪಟ್ನಕರ್ (ನ್ಯೂಜಿಲೆಂಡ್ ವಿರುದ್ಧ) ಅವರ ದಾಖಲೆ ಸರಿಗಟ್ಟಿದ್ದರು. 1951ರಲ್ಲಿ ಇಂಗ್ಲೆಂಡ್ ವಿರುದ್ಧ ಪಿ.ಜಿ. ಜೋಶಿ 4 ಕ್ಯಾಚ್ಗಳನ್ನ ಹಿಡಿದರು.