Top

ನೆರೆ ಸಂತ್ರಸ್ತ ರಾಜ್ಯಕ್ಕೆ ಪ್ರಧಾನಿ ಮೋದಿ ಮಲತಾಯಿ ಧೋರಣೆ : ಡಿ ಕೆ ಸುರೇಶ್‌

ನೆರೆ ಸಂತ್ರಸ್ತ ರಾಜ್ಯಕ್ಕೆ ಪ್ರಧಾನಿ ಮೋದಿ ಮಲತಾಯಿ ಧೋರಣೆ : ಡಿ ಕೆ ಸುರೇಶ್‌
X

ಬೆಂಗಳೂರು : ಕೇರಳ ರಾಜ್ಯ ಹಾಗೂ ಕರ್ನಾಟಕದ ಕೊಡಗಿನಲ್ಲಾದ ಸಂಕಷ್ಟಗಳನ್ನು ಪರಿಹರಿಸುವ ವಿಚಾರದಲ್ಲಿ ಪ್ರಧಾನಿ ಮೋದಿ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ಡಿ ಕೆ ಸುರೇಶ್, ಕೊಡಗು ವೀರ ಯೋಧರ ನಾಡು. ಹಿಂದೆಂದೂ ಕಾಣದ ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿದೆ.

ಆದರೆ ಮೋದಿಯವರು ನಮ್ಮ ರಾಜ್ಯದ ಪಕ್ಕದಲ್ಲೇ ಹಾಯ್ದು ಹೋಗ್ತಾರೆ. ಕೊಡಗಿಗೆ ಇದುವರೆಗೂ ಭೇಟಿ ಕೊಟ್ಟಿಲ್ಲ.

ಖುದ್ದು ಪ್ರಧಾನಿ ಮೋದಿಯವರೇ ಬಂದು ಕೊಡಗಿಲ್ಲಾಗಿರುವ ಅನಾಹುತಗಳ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಕೊಡಗಿನ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಸೂಕ್ತ ಮಾಹಿತಿ ನೀಡಿಲ್ಲ ಎಂಬ ಆರೋಪವನ್ನು ಡಿ.ಕೆ ಸುರೇಶ್ ಅಲ್ಲಗಳೆದರು.

ಇಡೀ ದೇಶದ ಎಲ್ಲಾ ಮಾದ್ಯಮಗಳೂ ಕೊಡಗಿನ ಪರಿಸ್ಥಿತಿ ಕುರಿತು ಕ್ಷಣಕ್ಷಣದ ಮಾಹಿತಿ ನೀಡ್ತಿವೆ.ಕೇಂದ್ರ ಸರ್ಕಾರಕ್ಕೆ ಮತ್ತೇನ್ ಮಾಹಿತಿ ಬೇಕು?ಮಾಹಿತಿ ನೀಡಿಲ್ಲ ಅನ್ನೋದು ಕುಂಟು ನೆಪ ಅಷ್ಟೆ.ಮೋದಿ ಈ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡ್ತಿದ್ದಾರೆ ಎಂದು ಸುರೇಶ್ ಕಿಡಿ ಕಾರಿದರು.

Next Story

RELATED STORIES